ಸಿದ್ದಾಪುರ:ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನವೆಂಬರ್ 2 ರಿಂದ ಕರೆ ನೀಡಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ರಾಜ್ಯವ್ಯಾಪಿ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಬೆಂಬಲಿಸಿ ಸಿದ್ದಾಪುರ ತಾಲ್ಲೂಕು ಘಟಕದ ವತಿಯಿಂದ ಸಾಮೂಹಿಕ ರಜೆ ಕೋರಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಶಾಂತ ವಿ ರಾವ್ ರಿಗೆ ಮನವಿ ಸಲ್ಲಿಸದರು.
ಈ ಸಂಧರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಸುಬ್ರಹ್ಮಣ್ಯ ಹೆಗಡೆ, ತಾಲ್ಲೂಕಾ ನೌಕರರ ಸಂಘದ ಅಧ್ಯಕ್ಷರಾದ ರಾಜೇಶ ನಾಯ್ಕ, ಖಜಾಂಜಿಯಾದ ಈರಣ್ಣ ಇಲಾಳ, ಜಿಲ್ಲಾ ಸಂಘದ ರಿಯಾಜ್ ಅಹ್ಮದ್, ಪ್ರೀತಿ ಶೆಟ್ಟಿ, ಹಾಗೂ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದಾಪುರ:- ಗ್ರಾಮಸ್ಥರ ಬೇಡಿಕೆಯಂತೆ ತೋಟಗಾರಿಕೆ ಇಲಾಖೆಗೆ ಸೇರಿದ ಸರ್ವೆ ನಂಬರ್ 203 ರಲ್ಲಿ ಎರಡು ಎಕರೆ ಪ್ರದೇಶವನ್ನು ನಾಮಧಾರಿ ಹಾಗೂ ಮಡಿವಾಳ ಸಮಾಜದ ಸ್ಮಶಾನದ ಉದ್ದೇಶಕ್ಕಾಗಿ ಮೀಸಲಾಗಿರಿಸಿ ಆದೇಶ ಮಾಡಿ ಹಸ್ತಾಂತರಿಸಲಾಗಿದೆ. ಇದರ ಯಶಸ್ವಿಗೆ ಸಹಕರಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಹೊಸೂರ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
ಹೊಸೂರಿನ ಬಂಕೇಶ್ವರ ದೇವಸ್ಥಾನದಲ್ಲಿ ಸುದ್ದಿ ಗೋಷ್ಠಿ ನಡೆಸಿದ ಮಾರುತಿ ನಾಯ್ಕ ಹಾಗೂ ಪಿ ಬಿ ಹೊಸೂರ ಮಾತನಾಡಿ
ಹೊಸೂರು ಗ್ರಾಮದ ಸರ್ವೆ ನಂಬರ್ 284ರಲ್ಲಿ ಎರಡು ಎಕರೆ ಸ್ಥಳವನ್ನು ನಾಮಧಾರಿ ಹಾಗೂ ಮಡಿವಾಳ ಎರಡೂ ಸಮಾಜದವರ ಸ್ಮಶಾನದ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತು. ಆದರೆ ಅದು ತೋಟಗಾರಿಕೆ ಇಲಾಖೆಯ ಸುಪರ್ದಿನಲ್ಲಿ ಇದ್ದ ಜಮೀನಿನ ಮಧ್ಯ ಭಾಗದಲ್ಲಿತ್ತು. ಇದರಿಂದ ಇಲಾಖೆಯಯವರಿಗೆ ಬೆಂಕಿ ಮುಂತಾದ ಕಾರಣಗಳಿಂದ ತೊಂದರೆಯಾಗುತ್ತಿತ್ತು.
ಮಡಿವಾಳ ಮತ್ತು ನಾಮಧಾರಿ ಸಮಾಜದ ಅಂದಿನ ಹಿರಿಯರ ಪ್ರಯತ್ನದಿಂದಾಗಿ ಹೊಸೂರು ಗ್ರಾಮದ ಸರ್ವೆ ನಂಬರ್ 284ರ ಎರಡು ಎಕರೆ ಸ್ಥಳವನ್ನು ಎರಡೂ ಸಮಾಜದವರ ಸ್ಮಶಾನದ ಉದ್ದೇಶಕ್ಕಾಗಿ ಮೀಸಲಿಡಲಾಗಿತ್ತಾದರೂ 1998ರಲ್ಲಿ ಈ ಸ್ಥಳವನ್ನು ನಮ್ಮ ಗಮನಕ್ಕೆ ತರದೆ ತೋಟಗಾರಿಕೆ ಇಲಾಖೆಗೆ ವರ್ಗಾಯಿಸಿ ನಮಗೆ ಸರ್ವೆ ನಂಬರ್ 205 ರಲ್ಲಿ ಎರಡು ಎಕರೆ ಸ್ಥಳವನ್ನು ನೀಡಲಾಯಿತು. ಈ ವಿಷಯವು 2015ರಲ್ಲಿ ಸ್ಮಶಾನವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕಾರ್ಯನಿರತವಾದಾಗ ನಮ್ಮ ಗಮನಕ್ಕೆ ಬಂದಿತು.ಇದನ್ನು ಸರಿಪಡಿಸಲು ವ್ಯವಸ್ಥಿತವಾದ ಹೋರಾಟದ ಅವಶ್ಯಕತೆ ಇರುವ ಕಾರಣ ಮಡಿವಾಳ ಮತ್ತು ನಾಮಧಾರಿ ಸಮಾಜದ ಸಮಾನ ಮನಸ್ಕರು ಸೇರಿ ಒಂದು ವೇದಿಕೆಯನ್ನು ರಚಿಸಿ ಹೋರಾಟ ಮಾಡಲಾಯಿತು.
ಅಂದಿನಿಂದ
ಸತತ ಹೋರಾಟದ ಪರಿಣಾಮವಾಗಿ ನಮ್ಮ ಬೇಡಿಕೆಯಂತೆ ತೋಟಗಾರಿಕೆ ಇಲಾಖೆಗೆ ಸೇರಿದ ಸರ್ವೆ ನಂಬರ್ 203 ರಲ್ಲಿ ಎರಡು ಎಕರೆ ಪ್ರದೇಶವನ್ನು ಈ ಎರಡು ಸಮಾಜದ ಸ್ಮಶಾನದ ಉದ್ದೇಶಕ್ಕಾಗಿ ಮೀಸಲಾಗಿರಿಸಿ ಆದೇಶ ಮಾಡಿ
ಹಸ್ತಾಂತರಿಸಲಾಗಿದೆ. ಎಂಟು ವರ್ಷಗಳ ಹೋರಾಟದಲ್ಲಿ ಇದರ ಯಶಸ್ವಿಗೆ ಸಹಕರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಎಲ್ಲಾ ಜನಪ್ರತಿನಿಧಿಗಳು ಜಿಲ್ಲಾ ಆಡಳಿತ
ಉಪವಿಭಾಗ ಆಡಳಿತ, ತಾಲೂಕ ಆಡಳಿತಕ್ಕೆ
ಹಾಗೂ ಈ ವೇದಿಕೆಯ ಎಲ್ಲಾ ಸದಸ್ಯರುಗಳಿಗೆ ಮತ್ತು ಸಹಕರಿಸಿದ ಹೊಸೂರು ಗ್ರಾಮದ ಯಾವತ್ತು ಮಡಿವಾಳ ಮತ್ತು ನಾಮಧಾರಿ ಸಮಾಜದ ಕುಟುಂಬದವರಿಗೆ ಕೃತಜ್ಞತೆಗಳು.
ಈ ವಿಷಯದಲ್ಲಿ ಸಹಕರಿಸಿದ ಎಲ್ಲ ಮಾಧ್ಯಮ ಮಿತ್ರರಿಗೆ ಕೃತಜ್ಞತೆಗಳು ಎಂದರು.
ಈಗಾಗಲೇ ಹಸ್ತಾಂತರಿಸಿದ ಸ್ಮಶಾನದ ಗಡಿ ಸುತ್ತ ಎರಡು ಅಡಿ ಕಾಲುವೆಯನ್ನು ನಿರ್ಮಿಸುವ ವ್ಯವಸ್ಥೆ ಮಾಡಲಾಗಿದೆ. ಆನಂತರದಲ್ಲಿ ಸ್ಥಳದಲ್ಲಿ ಸೇರಿದ ಸಮಾನ ಮನಸ್ಕರು ನಿರ್ಧರಿಸಿದಂತೆ ಎರಡು ಎಕರೆ ಸ್ಥಳದಲ್ಲಿ ಇರುವ ಮಾವಿನ ಮರಗಳನ್ನು ಹೊರತುಪಡಿಸಿ ಇತರೆ ಗಿಡಗಂಟಿಗಳನ್ನು ಜೆಸಿಬಿ ಮೂಲಕ ತೆಗೆದು ಸ್ವಚ್ಛಗೊಳಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಪಿ ಬಿ ಹೊಸೂರ, ಆನಂದ ನಾಯ್ಕ, ತೋಟಪ್ಪ ನಾಯ್ಕ, ರಾಮಚಂದ್ರ ನಾಯ್ಕ, ಸುರೇಶ ನಾಯ್ಕ, ಲಕ್ಷ್ಮಣ ನಾಯ್ಕ, ಗಣಪತಿ ಮಡಿವಾಳ, ಶಂಕರ ನಾಯ್ಕ, ಆದಿತ್ಯ, ಯೊಗೇಶ, ರಾಘು ನಾಯ್ಕ, ಶಿವಾನಂದ ನಾಯ್ಕ, ಮಂಜಪ್ಪ ನಾಯ್ಕ ಮೊದಲಾದವರು ಇದ್ದರು.