ನೂತನ ಚಿತ್ರ ದಿ.ಪುನೀತ್ ರಾಜ್ ಕುಮಾರ ಅಭಿನಯದ ಕೊನೆಯ ಚಿತ್ರ ಗಂಧದಗುಡಿ ಬಿಡುಗಡೆಯಾಗಿದೆ. ಶಿರಸಿ ಸೇರಿದಂತೆ ಬಹುತೇಕ ಜಿಲ್ಲೆಗಳು,ರಾಜ್ಯದಾದ್ಯಂತ ಗಂಧದಗುಡಿ ಬಿಡುಗಡೆ ಸಂಭ್ರಮ ಮೇರೆಮೀರಿದೆ.
ಸಂಭ್ರಮದಿಂದ ಗಂಧದಗುಡಿ ಸಿನಿಮಾ ಕಣ್ತುಂಬಿಕೊಂಡ ಅಪ್ಪು ಅಭಿಮಾನಿಗಳು
ಪುನಿತ್ ರಾಜ್ಕುಮಾರ್ ಅವರ ಗಂಧದಗುಡಿಗೆ ದಾವಣಗೆರೆ ಜನ ಮುಂಜಾನೆಯಿಂದಲೇ ಚಿತ್ರ ಮಂದಿರದ ಎದುರು ಜಮಾಯಿಸಿದ್ದರು. ಮೊದಲ ಶೋಗೆ 4 ಗಂಟೆಯಿಂದಲೇ ಜನ ಬಂದು ಟಿಕೆಟ್ಗೆ ಕಾದು ನಿಂತಿದ್ದರು.