

13ನೇಯ ವಾರ್ಷಿಕ ವರ್ಧಂತಿ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲು ನಿರ್ಧಾರ …
……ಸಿದ್ದಾಪುರ ಪಟ್ಟಣದ ಹಾಳದ ಕಟ್ಟ ನಾಗರಕಟ್ಟೆ ವಿಭಾಗದ ಶ್ರೀ ವಾಸುಕಿ ನಾಗದೇವತಾ ಮಂದಿರದಲ್ಲಿ ನವೆಂಬರ್ 29 ರ ಮಂಗಳವಾರ ಶ್ರೀ ಕ್ಷೇತ್ರ ಪಾಲ,ಶ್ರೀ ನಾಗದೇವತಾ ,ಹಾಗೂ ಶ್ರೀ ಚೌಡೇಶ್ವರಿ ದೇವರ 13ನೆಯ ವಾರ್ಷಿಕ ವರ್ಧಂತಿ ಮಹೋತ್ಸವ ಆಚರಿಸುವ ಕುರಿತು ಸಭೆಯನ್ನು ಕರೆಯಲಾಯಿತು. ವೇದಿಕೆಯಲ್ಲಿ ನಾಗದೇವತಾ ಸೇವಾ ಸಮಿತಿಯ ಹಿರಿಯ ಸದಸ್ಯರಾದ ಎಸ್ ವಿ .ಸಿದ್ದೇಶ್ವರ ,ಡಿ .ಎನ್.ಶೇಟ್,ಅಚ್ಚುತ ಶಾನಭಾಗ್,ಆಯ್.ಕೆ.ನಾಯ್ಕ ,ಶ್ರೀಪತಿ ವೆರ್ಣೇಕರ್ ಉಪಸ್ಥಿತರಿದ್ದರು.
ಪ್ರಶಾಂತ ಶೇಟ್ ಎಲ್ಲರನ್ನು ಸ್ವಾಗತಿಸಿ ಮಂದಿರದಲ್ಲಿ ನಡೆಯುವ ಕಲಾವೃದ್ಧಿ ಹವನ, ಗಣಹೋಮ, ಶ್ರೀ ಸತ್ಯನಾರಾಯಣ ವ್ರತ ಪೂಜಾಕಾರ್ಯಕ್ರಮಗಳು ವೇದಮೂರ್ತಿ ಮೋಹನ್ ಕುಮಾರ್ ಜೈನ್ ಬಿದರೂರು ಕಾರ್ಗಲ್,ದಿನೇಶ್ ಭಟ್ ಬೆಡ್ಕಣಿ ,ಹಾಗೂ ವೇದಮೂರ್ತಿ ದಿನೇಶ್ ಭಟ್ ಕೊನಳ್ಳಿ ಇವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹೇಳಿದರು.ದಾಮೋದರ್ ಕೆ ಶಾನ ಭಾಗ್ ಹಿಂದಿನ ವರ್ಷದ ಲೆಕ್ಕಪತ್ರವನ್ನು ಮಂಡಿಸಿ ಚಂಪಾಷಷ್ಠಿ ನಿಮಿತ್ತ ಅನ್ನ ಸಂತರ್ಪಣೆ, ಹಾಗೂ ಸಾಯಂಕಾಲ ನಡೆಯುವ ಭಜನೆ, ಲಲಿತ ಸಹಸ್ರನಾಮ ಪಠಣ, ಕಾರ್ತಿಕ ದೀಪೋತ್ಸವ,ಹರಾಜು ಕಾರ್ಯಕ್ರಮದ ಕುರಿತು ವಿವರಿಸಿದರು.
ಈ ಸಂದರ್ಭದಲ್ಲಿ ಮಂದಿರದ ಮೇಲ್ಛಾವಣಿ ಯನ್ನು ನವೀ ಕರಿಸಬೇಕೆಂದು ನಿರ್ಣಯಿಸಲಾಯಿತು.ವಿನಾಯಕ ಮಿತ್ರ ಮಂಡಳಿ, ಮಹಿಳಾ ಮಂಡಳಿಯ ಹಾಗೂ ಉಪಸ್ಥಿತರಿದ್ದ ಎಲ್ಲಾ ಸದಸ್ಯರು 13 ನೇ ವರ್ಧಂತಿ ಉತ್ಸವ ಹಾಗೂ ಸಾಯಂಕಾಲ ಜರುಗುವ ಸುಬ್ರಹ್ಮಣ್ಯ ಷಷ್ಠಿ ನಿಮಿತ್ತ ಕಾರ್ತಿಕ ದೀಪೋತ್ಸವ ಅತೀ ವಿಜೃಂಭಣೆಯಿಂದ ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.ಮಂದಿರದಲ್ಲಿ ಶ್ರೀ ರಾಮತಾರಕ ಮಂತ್ರ ಜಪಯಜ್ಞ ಅಭಿಯಾನ ಹಮ್ಮಿಕೊಳ್ಳುವ ಕುರಿತು ವಿವರಿಸಲಾಯಿತು.ಪ್ರಶಾಂತ್ ಡಿ. ಶೇಟ್ ಆಭಾರ ಮನ್ನಿಸಿದರು.
ಸಿದ್ದಾಪುರ:- ಕನ್ನಡ ಭಾಷೆಯ ಉಳಿವು ಎಷ್ಟು ಮುಖ್ಯವೋ ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಗುರುತುಗಳನ್ನು ಉಳಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ ಎಂದು ಕದಂಬ ಸೈನ್ಯ ದ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ ಕೆ ಹೇಳಿದರು.
ಅವರು ಇಲ್ಲಿಯ ಬಾಲಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಕನ್ನಡಿಗರ ಕುಲ ದೇವತೆ ಭುವನಗಿರಿ ಭುವನೇಶ್ವರಿಯ ಸನ್ನಿಧಾನದಲ್ಲಿ 2022ನೇ ಕನ್ನಡರಾಜ್ಯೋತ್ಸವ ಮತ್ತು ಪ್ರಶಸ್ತಿ ಸಮಾರಂಭವನ್ನು ನವೆಂಬರ್ 15 ರಂದು ಹಮ್ಮಿಕೊಳ್ಳಲಾಗಿದೆ.
ಕದಂಬಸೈನ್ಯ ಕನ್ನಡ ಸಂಘಟನೆ 2009 ರಿಂದ 2021 ರವರೆಗೂ ಕದಂಬರ ರಾಜಧಾನಿ ಬನವಾಸಿಯಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಹಮ್ಮಿಕೊಳ್ಳುತ್ತಾ ಬಂದಿತ್ತು. ಪ್ರತಿ ಸಾರಿ ಬನವಾಸಿಯಿಂದ ಭುವನಗಿರಿ ಭುವನೇಶ್ವರಿ ಸನ್ನಿಧಾನಕ್ಕೆ ಬಂದು ನಾಡದೇವತೆಯ ದರ್ಶನ ಪಡೆಯುತ್ತಿದ್ದೆವು. 2022 ರಿಂದ ಪ್ರಪ್ರಥಮವಾಗಿ ಸೇನೆ ಶ್ರೀ ಕ್ಷೇತ್ರ ಭುವನೇಶ್ವರಿ ಸನ್ನಿಧಾನದಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ರಾಜ್ಯಮಟ್ಟದ ಪ್ರಶಸ್ತಿ ಸಮಾರಂಭವನ್ನು ಹಮ್ಮಿಕೊಂಡಿದೆ.
ನಾಡಸೇವೆ, ಸಮಾಜಸೇವೆ, ಕಲಾವಿದರು, ಪ್ರಗತಿಪರರು, ಉತ್ತಮ ಕೃಷಿಕರು, ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರುಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದು,
ಉತ್ತರ ಕನ್ನಡ, ಮಂಡ್ಯ, ರಾಮನಗರ, ಮೈಸೂರು, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಾಪುರ, ಗದಗ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಧಾರವಾಡ ತುಮಕೂರು ಜಿಲ್ಲೆಗಳಿಂದ ಪ್ರಶಸ್ತಿ ಪುರಸ್ಕೃತರು, ಆಗಮಿಸಿ ಕುಲದೇವತೆ ಸನ್ನಿಧಾನದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಈ ಸಂದರ್ಭದಲ್ಲಿ ಕದಂಬ ಸೈನ್ಯದ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ.
ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರಕ್ಕೆ ಧನ್ಯವಾದ ತಿಳಿಸಿ, ತಾಲ್ಲೂಕು ಮಹಾಜನತೆ ಸಂಪೂರ್ಣ ಸಹಕಾರ ಪ್ರೋತ್ಸಾಹ ಕೋರಿದ್ದಾರೆ.
ಕನ್ನಡ ಭಾಷಾ ಸಂಸ್ಕೃತಿ ಕಗ್ಗೋಲೆ: ಕನ್ನಡ ಭಾಷೆಯ ಬೇರುಗಳನ್ನು ಒಂದೊಂದಾಗಿ ಸಡಿಲಗೊಳಿಸಿ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಅದರ ಸ್ಥಾನಮಾನಗಳನ್ನು ಕಸಿಯುವ ಪ್ರಯತ್ನ. ಇದರಿಂದ ಕನ್ನಡಕ್ಕೆ ಒಳಿತಿಗಿಂತ ಕೆಡುಕೆ ಹೆಚ್ಚು ಕನ್ನಡ ಮಾತನಾಡುವವರಿಗೆ ಉದ್ಯೋಗದ ಕೊರತೆಯನ್ನು ಸೃಷ್ಟಿಸಿರುವುದು ಅನ್ಯಭಾಷೆಯಲ್ಲಿ ವ್ಯವಹಾರಿಕ ಪ್ರಜ್ಞೆಯನ್ನು, ಆಡಳಿತ ಪ್ರಜ್ಞೆಯನ್ನು ಯಥೇಚ್ಛಗೊಳಿಸಿ ಕನ್ನಡಿಗರು ಭಾಷಾ ವಲಸಿಗರಾಗಿ ನಿಲ್ಲುವಂತೆ ಸನ್ನಿವೇಶ ಸೃಷ್ಟಿಸುತ್ತಿದ್ದಾರೆ. ಕನ್ನಡ ಭಾಷಿಕರನ್ನು ಸ್ವಭಾಷಿಗರನ್ನಾಗಿ ಸೃಷ್ಟಿಸಿಕೊಳ್ಳುವುದು ತಮ್ಮ ಭಾಷೆಯ ಅಸ್ಥಿತ್ವವನ್ನು ಸ್ಥಾಪಿಸುವ ತಂತ್ರ, ಇದು ಭಾಷಾ ಮತಾಂತರದ ಸ್ವರೂಪವಾಗಿದೆ ಎಂದು ಕದಂಬ ಸೈನ್ಯ ಆರೋಪಿಸಿದೆ.
*- ನಮ್ಮ ಕನ್ನಡದ ಗೌರವದ ತಾಣ, ಭುವನಗಿರಿಯ ಬಗ್ಗೆ ಪ್ರತಿಯೊಬ್ಬ ಕನ್ನಡಿಗ ನಿಗೂ ತಿಳಿಸಬೇಕಾಗಿದೆ. ಕ್ಷೇತ್ರ ಅಭಿವೃದ್ಧಿಗಾಗಿ ಆಡಳಿತ ಮಂಡಳಿ ಸಾಕಷ್ಟು ಶ್ರಮಿಸುತ್ತಿದೆ. ಕ್ಷೇತ್ರ ಅಭಿವೃದ್ಧಿಯಾಗಿ ಪ್ರವಾಸಿ ತಾಣವಾಗಬೇಕಿದೆ, ತಾಣವನ್ನು ಉಳಿಸಿ, ಬೆಳಸಿ, ಕನ್ನಡದ ಕಂಪನ್ನು ಸಾರಲು ರಾಜ್ಯ ಸರ್ಕಾರ ಯೋಜನೆ ಸಿದ್ಧವಾಗಬೇಕಾಗಿದೆ. ಕ್ಷೇತ್ರದ ಶಾಸಕರು, ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು, ಸಂಸದರು ಇದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. -ಬೇಕ್ರಿ ರಮೇಶ ಕೆ ರಾಜ್ಯಾಧ್ಯಕ್ಷರು ಕದಂಬ ಸೈನ್ಯ.
*
ಕನ್ನಡಿಗರ ಕುಲದೇವತೆ ಶ್ರೀ ಕ್ಷೇತ್ರ ಭುವನಗಿರಿಯ ಭುವನೇಶ್ವರಿ ಸನ್ನಿಧಾನದಲ್ಲಿ ನವೆಂಬರ್ 15 – 2022 ರಂದು ಕದಂಬ ಸೇನೆಯಿಂದ ಕನ್ನಡರಾಜ್ಯೋತ್ಸವ ಮತ್ತು ಪ್ರಶಸ್ತಿ ಸಮಾರಂಭ }]
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ಉತ್ತರ ಕನ್ನಡ ಜಿಲ್ಲೆ ಸಂಚಾಲಕ ಪುರಂದರ ನಾಯ್ಕ ಸರಳಗಿ, ಶಿರಸಿ ತಾಲ್ಲೂಕು ಸಂಚಾಲಕ ಗುತ್ಯಪ್ಪ ಮಾದರ್ ಬನವಾಸಿ, ಚಿಕ್ಕಬಳ್ಳಾಪುರ ಜಿಲ್ಲೆ ಅಧ್ಯಕ್ಷ ಸಿ ಶಿವಪ್ಪ ಉಪಸ್ಥಿತರಿದ್ದರು.

