

ಶಿರಸಿ ಕ್ಷೇತ್ರದ ಟಿಕೇಟ್ ನಿರಂತರವಾಗಿ ಶಿರಸಿ ತಾಲೂಕಿಗೇ ಸಿಗುತಿದ್ದು ಈ ಬಾರಿ ಶಿರಸಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಸಿದ್ಧಾಪುರ ತಾಲೂಕಿನವರಿಗೆ ದೊರೆಯಬೇಕು ಎನ್ನುವ ಬೇಡಿಕೆ ಹೆಚ್ಚಾಗಿದೆ.
ಶಿರಸಿ-ಸಿದ್ಧಾಪುರ ತಾಲೂಕುಗಳನ್ನೊಳಗೊಂಡ ಶಿರಸಿ ಕ್ಷೇತ್ರದ ಕಾಂಗ್ರೆಸ್ ಮತ್ತು ಬಿ.ಜೆ.ಪಿ. ಪಕ್ಷಗಳ ಅವಕಾಶಗಳು ನಿರಂತರವಾಗಿ ಶಿರಸಿ ತಾಲೂಕಿಗೇ ದೊರೆಯುತ್ತಿವೆ. ಈ ಬಗ್ಗೆ ಬಿ.ಜೆ.ಪಿ.ಯಲ್ಲಿ ಗುಸು,ಗುಸು ಎನ್ನುವ ಕ್ಷೀಣ ಧ್ವನಿಯ ಆಕ್ಷೇಪಗಳು ಕೇಳಿಬರುತ್ತಿವೆ. ಬಿ.ಜೆ.ಪಿ.ಗಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಕಾಂಗ್ರೆಸ್ ಈ ಬಾರಿ ಸಿದ್ಧಾಪುರಕ್ಕೆ ಅವಕಾಶ ನೀಡಿ ಎಂದು ಪ್ರತಿಪಾದಿಸುತ್ತಿದೆ.
ಬುಧವಾರ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕರು ಹಾಲಿ ಶಾಸಕ,ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆಯವರ ಕಾರ್ಯವೈಖರಿ ವಿರೋಧಿಸಿದರು. ಶಿರಸಿ ಕ್ಷೇತ್ರದಲ್ಲಿ ಸಿದ್ಧಾಪುರಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳು ಸೇರಿದಂತೆ ಎಲ್ಲಾ ಪಕ್ಷಗಳೂ ಸಿದ್ಧಾಪುರಕ್ಕೆ ಅವಕಾಶ ಮಾಡಿಕೊಡಬೇಕು ಎಂದರು.
ಶಿರಸಿ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ನಿರಂತರವಾಗಿ ಶಿರಸಿ ತಾಲೂಕಿನ ಪಾಲಾಗುತ್ತಿದೆ. ಈ ಬಾರಿ ಸಿದ್ಧಾಪುರ ತಾಲೂಕನ್ನು ಪರಿಗಣಿಸಬೇಕು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಸಂತನಾಯ್ಕ ಉತ್ತಮ ಕೆಲಸ ಮಾಡಿದ್ದಾರೆ. ವಿ.ಎನ್. ನಾಯ್ಕ ಈಗಾಗಲೆ ತಮ್ಮ ಹಕ್ಕು ಮಂಡಿಸಿದ್ದಾರೆ.-ಎಸ್. ಆರ್. ಹೆಗಡೆ, ಕುಂಬಾರಕುಳಿ
