

ಖಡಕ್ ಎಸ್ಪಿಯೆಂದೇ ಹೆಸರಾಗಿ ಪೊಲೀಸ್ ಇಲಾಖೆ ಮತ್ತು ಅಕ್ರಮ ವ್ಯವಹಾರಗಳಿಗೆ ಸಿಂಹಸ್ವಪ್ನವಾಗಿದ್ದ ಸುಮನ್ ಪನ್ನೇಕರ್ ಕೊನೆಗೂ ವರ್ಗಾವಣೆಯಾಗಿದ್ದಾರೆ. ಸುಮನ್ ಪೆನ್ನೇಕರ್ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ವಿಷ್ಣುವರ್ಧನ್ ನೇಮಕವಾಗಿದ್ದಾರೆ.
ಸುಮನ್ ಪೆನ್ನೇಕರ್ ಇಲಾಖೆಯ ಕೆಳಹಂತದ ಸಿಬ್ಬಂದಿಗಳಿಗೆ ಮಾನವೀಯತೆಯ ಅಧಿಕಾರಿಗಳೂ ಉಳಿದ ಹಂತಗಳಿಗೆ,ವಿಭಾಗಗಳಿಗೆ ಸೂಪರ್ ಕಾಪ್ ಆಗಿ ನಡುಕ ಹುಟ್ಟಿಸಿದ್ದರು. ಇವರ ವರ್ಗಾವಣೆಗೆ ಸಾರ್ವಜನಿಕ ವಿರೋಧ ವ್ಯಕ್ತವಾಗಿ ಪ್ರಾಮಾಣಿಕ ಅಧಿಕಾರಿ ಸುಮನ್ ವರ್ಗಾವಣೆಯಾಗಬಾರದು ಎಂದು ಸಾರ್ವಜನಿಕ ವಲಯ ಬಯಸಿತ್ತು. ಆದರೆ ಕೆಲವು ದಿವಸಗಳ ತೊಳಸಾಟದ ನಂತರ ಅಂತೂ ಇಂತೂ ಉತ್ತರ ಕನ್ನಡ ಜನಪ್ರತಿನಿಧಿಗಳು ಪ್ರಾಮಾಣಿಕ ಅಧಿಕಾರಿ ಸುಮನ್ ಪೆನ್ನೆಕರ್ ರನ್ನು ಎತ್ತಂಗಡಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
https://www.youtube.com/watch?v=eKYngWYM4sk&t=28s
