


ಸಿದ್ದಾಪುರ :- ಮನುಷ್ಯನು ಕಟ್ಟಿಕೊಂಡಿರುವ ಅದ್ಬುತ ಅನ್ವೇಷಣೆಯೇ ಭಾಷೆ,
ನಮ್ಮಲ್ಲಿ ಶಬ್ದಗಳು ಕಡಿಮೆ ಇದ್ದಾಗ ಬೇರೆ ಭಾಷೆಗಳನ್ನು ಬಳಸಬೇಕು. ಅಷ್ಟೊಂದು ಅದ್ಬುತ ಶಬ್ದ ಭಂಡಾರ ನಮ್ಮ ಕನ್ನಡ ಭಾಷೆಯಲ್ಲಿದೆ ಎಂದು ಲೇಖಕರು, ಉಪನ್ಯಾಸಕರಾದ ಡಾ, ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
ಅವರು ಉತ್ತರ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತ್ ತಾಲೂಕು ಘಟಕವು ಸರ್ಕಾರಿ ಪದವಿಪೂರ್ವ ಕಾಲೇಜು ಗಳ ಆಯೋಜನೆಯಲ್ಲಿ ಹಾಳದಕಟ್ಟದಲ್ಲಿ ನಡೆದ ಕನ್ನಡ ಕಾರ್ತಿಕ, ” ಅನುದಿನ-ಅನುಸ್ಪಂದನ ” ತಿಂಗಳಿಡಿ ಸಾಹಿತ್ಯದ ಪಯಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಇತರ ಭಾಷಿಗರಿಗಿರುವಂತೆ ನಮ್ಮವರಿಗೆ ಅಭಿಮಾನ ಕಡಿಮೆಯಾಗುತ್ತಿರುವುದು ವಿಷಾದನೀಯ. ಎಲ್ಲಾ ಭಾಷೆಗಳು ಬೇಕು ಆದರೆ ನಮ್ಮ ತನವನ್ನು, ಮಾತೃ ಭಾಷೆಯನ್ನು ಮರೆಯಬಾರದು. ಭಾಷೆ ಸತ್ತರೆ ನಮ್ಮ ಚರಿತ್ರೆಯೇ ಕಳೆದು ಹೋಗುತ್ತದೆ ಎಂದರು.
ಪತ್ರಕರ್ತ ಸುರೇಶ ಮಡಿವಾಳ ಕಡಕೇರಿ ಮಾತನಾಡಿ ಇಂದು ನಮ್ಮ ಜೀವನಕ್ಕೆ ಎಲ್ಲಾ ಭಾಷೆಗಳು ಅವಶ್ಯಕ. ಕಲಿಕೆ ಭಾಷೆಗಳು ತುತ್ತಿಗಾದರೆ, ಮಾತೃ ಭಾಷೆ ನಮ್ಮ ನಾಡು, ನುಡಿ ಸಂಸ್ಕೃತಿಯ ಸಂಕೇತ. ನಮ್ಮತನ. ನಮ್ಮ ಹೃದಯ. ಎಲ್ಲಿದ್ದರು ನಮ್ಮ ಭಾಷೆಯನ್ನು ಸಾಧ್ಯ ವಾದಷ್ಟು ಕಲಿಸಬೇಕು. ಏಳಿಗೆಗಾಗಿ ಶ್ರಮಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಬಿ ಎಸ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಉಪನ್ಯಾಸಕ ಎಲ್ ವಿ ಭಟ್, ಕಸಾಪದ ಕಾರ್ಯದರ್ಶಿ ಗಳಾದ ಅಣ್ಣಪ್ಪ ಶಿರಳಗಿ, ಪ್ರಶಾಂತ ಶೇಟ್ ವೇದಿಕೆಯ ಲ್ಲಿದ್ದರು.
ವಿದ್ಯಾರ್ಥಿ ಸಿಂಚನಾ ಸಿ ಎಚ್ ಮಾತನಾಡಿದರು.
ಇದೇ ವೇಳೆ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿಧ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾದ ಗೋಪಾಲ ನಾಯ್ಕ ಭಾಶಿ ಪ್ರಸ್ತಾವಿಕವಾಗಿ ಮಾತನಾಡಿದರು.
ವಿಧ್ಯಾರ್ಥಿಗಳು ನಾಡಗೀತೆ ಹಾಡಿದರು.
ಉಪನ್ಯಾಸಕ ರತ್ನಾಕರ ನಾಯ್ಕ ಸ್ವಾಗತಿಸಿದರು.
ಕಸಾಪದ ಖಜಾಂಚಿ ಪಿ ಬಿ ಹೊಸೂರ ವಂದಿಸಿದರು.
ಉಪನ್ಯಾಸಕ ರಾಮಕೃಷ್ಣ ಸಭಾಹಿತ ನಿರೂಪಿಸಿದರು.



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
