ಉತ್ತರ ಕನ್ನಡ ಜಿಲ್ಲೆಯಿಂದ ಅನೇಕ ಅಭ್ಯರ್ಥಿಗಳು ಕಾಂಗ್ರೆಸ್ ನ ವಿಧಾನಸಭಾ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕಾರವಾರದ ಸತೀಶ್ ಶೈಲ್,ಕುಮಟಾದ ಮಂಜುನಾಥ ನಾಯ್ಕ,ಶಾರದಾ ಶೆಟ್ಟಿ,ಆರ್.ಎಚ್.ನಾಯ್ಕ,ಶಿರಸಿಯ ಭೀಮಣ್ಣ ನಾಯ್ಕ,ಸತೀಶ್ ನಾಯ್ಕ,ಶ್ರೀಪಾದ ಹೆಗಡೆ ಕಡವೆ,ಸಿದ್ದಾಪುರದ ವಸಂತ್ ನಾಯ್ಕ,ವಿ.ಎನ್. ನಾಯ್ಕ,ಹೊನ್ನಾವರದ ಶಿವಾನಂದ ಹೆಗಡೆ, ಭಟ್ಕಳದ ಮಂಕಾಳು ವೈದ್ಯ ಸೇರಿದಂತೆ ೫೦ ಕ್ಕೂ ಹೆಚ್ಚು ಜನರು ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳಾಗಲು ಪಕ್ಷಕ್ಕೆ ಅರ್ಜಿ ಹಾಕಿದ್ದಾರೆ.
ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ MLA ಆಕಾಂಕ್ಷಿಯಾಗಿ ವಿ. ಎನ್. ನಾಯ್ಕ್ ಬೇಡ್ಕಣಿ ಕಾಂಗ್ರೆಸ್ ಪಕ್ಷದಿಂದ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ಕೆ. ಪಿ.ಸಿ.ಸಿ ಕಛೇರಿಯಲ್ಲಿ ಅವರ ಪರವಾಗಿ ಡಿಸಿಸಿ ಕಾರ್ಯದರ್ಶಿ ಸಾವೇರ್ ಡಿಸಿಲ್ವಾ ತಾಲೂಕ ಇಂಟೆಕ್ ಅಧ್ಯಕ್ಷ ರಾಮಕೃಷ್ಣ ನಾಯ್ಕ್ ಹಾಗೂ ತಾಲೂಕ ಸದಸ್ಯ ಲಂಬೋಧರ ಹೆಗಡೆ ಹಾಗೂ ತಾಲೂಕ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಮ್. ಟಿ. ಗೌಡ ಕಿಲವಳ್ಳಿ ಹಾಜರಿದ್ದು ವಿ. ಎನ್. ನಾಯ್ಕ್ ಪರವಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಜೊತೆಗೆ 200000ರೂ ಡಿ ಡಿ ಯನ್ನು ಕಛೇರಿಗೆ ಸಲ್ಲಿಸಿರುತ್ತಾರೆ