

ಕಲೆ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕಲಿಸುವುದರಿಂದ ಸಮಾಜದ ಅನನ್ಯತೆಯನ್ನು ಇನ್ನಷ್ಟು ವಿಸ್ತಾರ ಮಾಡಬಹುದಾಗಿದೆ ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೆ ಚಿತ್ತಾರ ಕಲಾವಿದೆ ಸಾಗರದ ಗೌರಮ್ಮ ಹುಚ್ಚಪ್ಪ ಮಾಸ್ತರ್ ಹೇಳಿದರು.

ಧೀರ ದೀವರು ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗದ ವತಿಯಿಂದ ಭಾನುವಾರ ನಗರದ ಈಡಿಗರ ಭವನದಲ್ಲಿ ಆಯೋಜಿಸಿದ್ದ ದೀವರ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಮಾತನಾಡಿ, ದೀವರ ಸಮೂಹ ಸಾಕಷ್ಟು ಕಲಾ ಪ್ರಕಾರಗಳನ್ನು ತನ್ನ ಒಡಲಿನಲ್ಲಿ ಪೋಷಿಸಿಕೊಂಡು ಬಂದಿದೆ. ಆದರೆ ಅವುಗಳನ್ನು ಗುರುತಿಸದೆ ಇರುವುದರಿಂದ ಸೊರಗುವಂತಾಗಿದೆ ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಹಾಗೂ ಸಾಹಿತಿ ಲಕ್ಷ್ಮಣ ಕೊಡಸೆ ಮಾತನಾಡಿ, ಹಸೆ ಚಿತ್ತಾರ ದೀವರ ಕಲಾ ಶ್ರೀಮಂತಿಗೆಯ ಪ್ರತೀಕವಾಗಿದೆ ಎಂದರು.
ಶಾಸಕ ಹಾಲಪ್ಪ ಮಾತನಾಡಿ, ಆಧುನಿಕತೆಯ ಭರಾಟೆಗೆ ಸಿಲುಕಿರುವುದರಿಂದ ನಮ್ಮ ಕಲೆ, ಸಂಪ್ರದಾಯ ಮಾತ್ರವಲ್ಲ, ಎಲ್ಲಾ ಸಮುದಾಯಗಳ ಕಲೆಯೂ ಸೊರಗುತ್ತಿವೆ ಎಂದರು.
ಬಳಗದ ಸುರೇಶ್ ಬಾಳೇಗುಂಡಿ ಅಧ್ಯಕ್ಷತೆ ವಹಿಸಿದ್ದರು. ಉಪಮೇಯರ್ ಲಕ್ಷ್ಮೀ ಶಂಕರನಾಯ್ಕ, ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಗೀತಾಂಜಲಿ ದತ್ತಾತ್ರೇಯ, ರವೀಂದ್ರ, ಸಂಚಾಲಕ ನಾಗರಾಜ ನೇರಿಗೆ ಇದ್ದರು.
6 ಜನರಿಗೆ ಧೀರ ದೀವರು ಪ್ರಶಸ್ತಿ
ಇದೇ ಸಂದಭರ್ದಲ್ಲಿ ಮಂಜಮ್ಮ ಗಣಪತಿಯಪ್ಪ ವಡ್ನಾಲ, ಮಾಜಿ ಶಾಸಕರಾದ ಬಿ.ಸ್ವಾಮಿರಾವ್, ಡಾ. ಜಿ.ಡಿ.ನಾರಾಯಣಪ್ಪ, ವಿಶ್ರಾಂತ ಕುಲಪತಿ ಡಾ. ಎಂ.ಕೆ. ನಾಯ್ಕ್ ಹಾಗೂ ಇತಿಹಾಸ ಸಂಶೋಧಕ ಮಡೆನೂರು ಗಣಪತಿರಾವ್ ಮಡೆನೂರು ಇವರಿಗೆ ಧೀರ ದೀವರು ಪ್ರಶಸ್ತಿ ನೀಡಿ ಗೌರವಿಸಲಾಯಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
