ಸಿದ್ದಾಪುರ:- ಎಲ್ಲಾ ಜಾತಿ, ಧರ್ಮ ಗಳನ್ನು ಒಟ್ಟಿಗೆ ಕೊಂಡೊಯ್ದರೆ ಭವ್ಯ ಭಾರತದ ನಿರ್ಮಾಣ ಸಾಧ್ಯ ವಾಗುತ್ತದೆ ಎಂದು ಉದ್ಯಮಿ ಉಪೇಂದ್ರ ಪೈ ಶಿರಸಿ ಅಭಿಪ್ರಾಯಪಟ್ಟರು.
ಅವರು ತಾಲೂಕು ಕ್ರೀಡಾಂಗಣದ ರವೀಂದ್ರ ಭಟ್ ವೇದಿಕೆಯಲ್ಲಿ ಪತ್ರಕರ್ತ, ಸಂಪಾದಕ ಕನ್ನೇಶ ನಾಯ್ಕ ರ ನೇತೃತ್ವದ ಸಮಾಜಮುಖಿ ಡಾಟ್ ನೆಟ್, ವೆಬ್ ನ್ಯೂಸ್ ಸಮಾಜಮುಖಿ ಮತ್ತು ಸಾಮಾಜಮುಖಿ ನ್ಯೂಸ್ ಯು ಟ್ಯೂಬ್ ಚಾನಲ್ ಗಳ ಸಂಯೋಜನೆ ಯಲ್ಲಿ ನಡೆದ ಅಪ್ಪುಡಾನ್ಸ್ ಟ್ರೋಫಿ, ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸರ್ವಧರ್ಮ ಸಭೆಯಲ್ಲಿ ಅವರು ಮಾತನಾಡಿದರು.
ಕೋಳಿ ತನ್ನ ಮರಿಗಳಿಗೆ ಮಳೆ,ಚಳಿಯಿಂದ ರಕ್ಷಣೆ ಮಾಡಲು ಮಡಿಲೊ ಳಗೆ ಕೂರಿಸಿಕೊಳ್ಳುವಂತೆ ಹಿಂದೂ ಸಹೋದರರ ಮಧ್ಯೆ ನಾನು ಇಂದು ಇಲ್ಲಿ ಬೆಚ್ಚಗೆ ಕುಳಿತುಕೊಂಡಿದ್ದೇನಿ. ಈ ಸ್ಥಿತಿಯ ಭಾರತವನ್ನು ಉಳಿಸಿಕೊಂಡು ಇಲ್ಲಿ ಬಹುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವುದರಿಂದ ಮಾತ್ರ ಭಾರತಕ್ಕೆ ಭವಿಷ್ಯವಿದೆ. ಬಹುತ್ವದ,ಶಾಂತಿ-ಸುವ್ಯವಸ್ಥೆಯ ಭವ್ಯಭಾರತವನ್ನು ಕಟ್ಟಲು ಜೀವಕೊಡುವ ದೇಶಪ್ರೇಮಿಗಳಾಗುವ ಮೂಲಕ ನಾವು ಭಾರತದ ರಾಷ್ಟ್ರಪ್ರೇಮಿಗಳಾಗಬೇಕಿದೆ.
-ಮೌಲಾನ ಹುಸೈನ್ ಸಾಖಾಫಿ
[- ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ ಎನ್ನುವುದಕ್ಕಿಂತ ಸರ್ಕಾರಿ ಶಾಲೆಗಳಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡ 25 ಮೀಸಲಾತಿ ನೀಡಬೇಕು. ಅಂದಾಗ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ.
-ಉಪೇಂದ್ರ ಪೈ ಶಿರಸಿ ಉದ್ಯಮಿಗಳು.}]
ನಮ್ಮ ಜೀವನದಲ್ಲಿ ಶಿಕ್ಷಣ ಬಹುಮುಖ್ಯವಾದದ್ದು, ಶಿಕ್ಷಣವಂತನಿಂದ ಮಾತ್ರ ದೇಶವನ್ನು ಉನ್ನತ ಮಟ್ಟಕ್ಕೆ ಒಯ್ಯಲು ಸಾಧ್ಯವಾಗುತ್ತದೆ. ಎಷ್ಟೇ ಸಾಮಾಜಿಕ ಕಾರ್ಯಗಳನ್ನು ಮಾಡಿದರೂ ಪ್ರಜಾಪ್ರಭುತ್ವ ದಲ್ಲಿ ಶಾಸಕಾಂಗ ದಲ್ಲಿ ಸ್ಥಾನ ಪಡೆದರೆ ಮಾತ್ರ ಎಲ್ಲಾ ಸಾಮಾಜಿಕ ಕಾರ್ಯಗಳನ್ನು ಪೂರ್ತಿ ಗೊಳಿಸಲು ಸಾಧ್ಯವಾಗುತ್ತದೆ ಎಂದು ಹೇಳುವ ಮೂಲಕ 2023 ರ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವನ್ನು ವ್ಯಕ್ತಪಡಿಸಿದರು.
ಜೋಗ ಜುಮ್ಮಾ ಮಸೀದಿಯ ಧರ್ಮಗುರುಗಳಾದ ಮೌಲಾನ ಹುಸೈನ್ ಸಖಾಫಿ ಮಾತನಾಡಿ ನಮ್ಮನಮ್ಮಲ್ಲಿ ಜಾತಿ ಧರ್ಮ ಸಂಘರ್ಷಕ್ಕೆ ಒಳಗಾಗಿ ದೇಶ ವನ್ನು ಅಧೋಗತಿಗೆ ಒಯ್ಯುತ್ತಿದ್ದೇವೆ. ಇದರಿಂದ ದೇಶದ ಮುಂದಿನ ಭವಿಷ್ಯ ಸಂಕಷ್ಟದಲ್ಲಿದೆ. ಭಾರತೀಯರಾದ ನಾವು ಸಹ ಬಾಳ್ವೆಯಿಂದ ಬದುಕಿದರೆ ಉಜ್ವಲ ಭಾರತ ನಿರ್ಮಾಣವಾಗುತ್ತದೆ ಎಂದರು.
ಉದ್ಯಮಿ ರಾಜೇಶ್ ನಾಯ್ಕ ಕತ್ತಿ, ಕೃಷಿಕ ಐ ಕೆ ಪಾಟೀಲ್, ರೈತ ಮುಖಂಡ ವೀರಭದ್ರ ನಾಯ್ಕ, ಶಿಕ್ಷಕ ಸುಧಾಕರ್ ನಾಯ್ಕ ಅವರಗುಪ್ಪ, ಸುಭಾಷ್ ನಾಯ್ಕ್, ತಿಲಕ್ ನಾಯ್ಕ್, ಅಣ್ಣಪ್ಪ ಬಿ ನಾಯ್ಕ್, ವೇದಿಕೆಯಲ್ಲಿದ್ದರು.
ಜಲ ಸಂವರ್ಧನೆಯ ಡಿ ಕೆ ನಾಯ್ಕ ತೆಂಗಿನಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮನು ವಿಕಾಸ ಸಂಸ್ಥೆಯ ಮುಖ್ಯಸ್ಥ ಗಣಪತಿ ಭಟ್,
ಹೊಸನಗರದ ಜಲಸಾಧಕ ಗುರುಮೂರ್ತಿ ಎಂ ಆರ್ ಮಾಕೋಡು ಹಿರಿಯ ಕಬಡ್ಡಿ ಆಟಗಾರ ಸಿ ಟಿ ನಾಯ್ಕ, ಪ್ರಗತಿ ಪರ ಕೃಷಿಕ ಡಿ ಕೆ ನಾಯ್ಕ ತೆಂಗಿನಮನೆ, ಬಹುಮುಖಿ ಶಿಕ್ಷಕ ಮಾರುತಿ ಉಪ್ಪಾರ್ ಬನವಾಸಿ, ರಾಜ್ಯಮಟ್ಟದ 5000 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಯೋಗೇಶ್ ಬಿ ನಾಯ್ಕ್ ಅವರಗುಪ್ಪ, ಶೌರ್ಯ ಪ್ರಶಸ್ತಿ ಪಡೆದ ಕೌಶಲ್ಯ ಹೆಗಡೆ ಯವ ರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೌಶಲ್ಯ ಹೆಗಡೆ ಪ್ರಾರ್ಥಿಸಿದರು. ಕಾರ್ಯಕ್ರಮದ ರೂವಾರಿ, ಸಮಾಜಮುಖಿ ಸಂಪಾದಕ,
ಕನ್ನೇಶ ನಾಯ್ಕ ಕೋಲಶಿರ್ಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ವೆಂಕಟೇಶ ಮಡಿವಾಳ, ಉಪನ್ಯಾಸಕ ರತ್ನಾಕರ ನಾಯ್ಕ ನಿರೂಪಿಸಿದರು.