ಸಿದ್ಧಾಪುರ ಠಾಣೆಯ ಕಾನ್ಸಟೇಬಲ್ ಮಹಮ್ಮದ್ ಗೌಸ್ ಅಕ್ಟೋಬರ್ ತಿಂಗಳ ಠಾಣೆಯ ಅತ್ತ್ಯು ತ್ತಮ ಸಾಧಕ ಪೊಲೀಸ್ ಎಂದು ಗುರುತಿಸಲ್ಪಟ್ಟಿದ್ದಾರೆ. ಅವರನ್ನು ಪ್ರಶಂಸಿಸಿ ಪ್ರಮಾಣ ಪತ್ರ ನೀಡಿದ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಪೊಲೀಸ್ ದಕ್ಷತೆ ಹೆಚ್ಚಿಸಲು ಈ ಉಪಕ್ರಮ ಕೈಗೊಂಡಿದ್ದು ಪ್ರತಿ ತಿಂಗಳು ಪ್ರತಿ ಠಾಣೆಯ ಒಬ್ಬರನ್ನು ಅತ್ತ್ಯುತ್ತಮ ಸಾಧಕ ಪೊಲೀಸ್ ಎಂದು ಗುರುತಿಸಿ ಪ್ರಶಂಸಿಸಲಾಗುತ್ತದೆ. ಬೀಟ್ ನಲ್ಲಿನ ಸಾರ್ವಜನಿಕ ಸಂಪರ್ಕ,ಕಾರ್ಯಕ್ಷಮತೆ ಸೇರಿದಂತೆ ಕೆಲವು ಅಂಶಗಳ ಆಧಾರದಲ್ಲಿ ಈ ಕಾಪ್ ಆಫ್ ದ ಮಂತ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಿದ್ದಾಪುರ:- ನಾವು ಎಷ್ಟು ಓದಿದ್ದೇವೆ ಎನ್ನುದು ಮುಖ್ಯವಲ್ಲ. ಎಲ್ಲರಲ್ಲಿಯೂ ಅಗಾಧವಾದ ಪ್ರತಿಭೆ, ಅಪಾರವಾದ ಶಕ್ತಿ ಸಾಮರ್ಥ್ಯ ಇದೆ. ನಾವು ಬರೆಯಬೇಕು. ಅದನ್ನು ಪ್ರಕಟಿಸಬೇಕು ಎಂದು ಹಿರಿಯ ಸಾಹಿತಿಗಳಾದ ಜಿ ಜಿ ಹೆಗಡೆ ಬಾಳಗೋಡ ಹೇಳಿದರು.
ಅವರು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ನಡೆದ ಕನ್ನಡ ಕಾರ್ತಿಕ, ಅನುದಿನ ಅನುಸ್ಪಂದನ ರಾಜ್ಯೋತ್ಸವದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭರತ ಮಾತೆಯ ಕಾರ್ತಿಕೋತ್ಸವದಲ್ಲಿ ನಾವೆಲ್ಲ ಮಿನುಗುವ ನಕ್ಷತ್ರಗಳು.
ನಮ್ಮಲ್ಲಿ ಸಾಹಿತ್ಯದ ಕೃಷಿ ಹೆಚ್ಚೆಚ್ಚು ಆಗಬೇಕು
ನಾವು ಬರೆದು ಬರೆದು ಪಳಗಿದರೆ ಉತ್ತಮ ಬರಹಗಾರಗುತ್ತೇವೆ, ನಮ್ಮಿಂದ ಒಳ್ಳೆಯ ಬರಹಗಳು ಮೂಡಿ ಬರುತ್ತವೆ. ಒಳ್ಳೆಯದುನ್ನು ಸ್ವೀಕರಿಸುವ ಗುಣ ನಮ್ಮಲ್ಲಿದ್ದರೆ ಸಹ ಬೆಳೆಯುತ್ತೇವೆ ಎಂದರು
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿ ಓದು ಮತ್ತು ಬರವಣಿಗೆ ಸಾಹಿತಿಗಳ ಮೂಲ ಜೀವಾಳ. ಕವಿತೆಗಳನ್ನು ಅನುಭವಿಸಬೇಕು. ಕವಿತೆಗೆ ಅವನ ಅನುಭವ ಮತ್ತು ಗ್ರಹಿಕೆ ಪ್ರಧಾನವಾಗುತ್ತೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಗೋಪಾಲ್ ನಾಯ್ಕ ಬಾಶಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ್,
ಕನ್ನಡ ಸಾಹಿತ್ಯ ಪರಿಷತ್ ಖಜಾಂಚಿ ಪಿ ಬಿ ಹೊಸೂರ, ಹಿರಿಯ ಸಾಹಿತಿಗಳಾದ ಜಿ ಕೆ ಭಟ್ ಕಸಗೆ ವೇದಿಕೆಯಲ್ಲಿದ್ದರು.
ಹಿರಿಯ ಹಾಗೂ ಉದಯೋನ್ಮುಖ ಕವಿಗಳಾದ ಮಹೇಶ್ ಹೆಗಡೆ ಸಿದ್ದಾಪುರ, ವಿನಾಯಕ ನಾಯ್ಕ ಕೊಂಡ್ಲಿ, ಕು.ಸಂಧ್ಯಾ ಭಟ್, ಕು.ಸುಶ್ಮಿತಾ ಜಿ ಬೇಡ್ಕಣಿ, ಕು. ಸ್ವಾತಿ ಹೆಗಡೆ ಚಪ್ಪರಮನೆ, ಮಹಮ್ಮದ್ ಅಸ್ಲಾಂ ಶೇಕ್, ಕು.ದೀಪಾ ರಾಮ ನಾಯ್ಕ, ಕು.ಮೇಘನಾ ಶಿವಾನಂದ, ಲಕ್ಷ್ಮಣ ಬಡಿಗೇರ್ ತಮ್ಮ ಕವನಗಳನ್ನು ವಾಚಿಸಿದರು.
ಮಹಾಲಕ್ಷ್ಮಿ ನಾಯ್ಕ ಪ್ರಾರ್ಥಿಸಿದರು.
ಪ್ರಾಚಾರ್ಯರಾದ ಎಂ ಕೆ ನಾಯ್ಕ ರವರು ಸ್ವಾಗತಿಸಿ, ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಚಂದ್ರಶೇಖರ ನಾಯ್ಕ ನಿರೂಪಿಸಿದರು.
ಪ್ರಶಾಂತ ಹೆಗಡೆ ವಂದಿಸಿದರು.