



ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿದ್ಧಾಪುರ ಪೊಲೀಸ್ ಠಾಣೆಯಲ್ಲಿ ಅಡಿಕೆ ವರ್ತಕರ ಸಭೆ ನಡೆಸಲಾಯಿತು. ಅಡಿಕೆ ವರ್ತಕರು ಪರಶೀಲಿಸದೆ ಖರೀಸಿದ ಅಡಿಕೆ ಕಳ್ಳತನದ್ದಾಗಿರಬಹುದಾದ ಸಾಧ್ಯತೆ ಹಿನ್ನೆಲೆಯಲ್ಲಿ ಸರಿಯಾಗಿ ಪರಿಶೀಲಿಸದೆ ಅಡಿಕೆ ಖರೀದಿಸಿದರೆ ಮುಂದೆ ತೊಂದರೆಯಾಗುತ್ತದೆ. ಈ ಕಾರಣಗಳಿಂದ ಅಡಿಕೆ ವರ್ತಕರು ಜಾಗೃತರಾಗಲು ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದರು.
ಸಿದ್ಧಾಪುರ ಪೊಲೀಸ್ ನಿರೀಕ್ಷಕ ಕುಮಾರ ಕೆ. ಉಪನಿರೀಕ್ಷಕ ಮಲ್ಲಿಕಾರ್ಜುನಯ್ಯ ಮಾತನಾಡಿ ಸಲಹೆ ಸೂಚನೆ ನೀಡಿದ ಸಭೆಯಲ್ಲಿ ಅಡಿಕೆ ವರ್ತಕರು ಸಿ.ಸಿ. ಕೆಮರಾ ಅಳವಡಿಸುವುದು,ಚಿಕ್ಕ ಮಕ್ಕಳಿಂದ ಖರೀದಿಸುವ ವೇಳೆ ನಿಗಾವಹಿಸುವುದನ್ನು ಒತ್ತಿ ಹೇಳಲಾಯಿತು.
