


ಶನಿವಾರ ತಡರಾತ್ರಿ ಪ್ರಾರಂಭವಾಗಿ ಭಾನುವಾರ ಮುಕ್ತಾಯವಾದ ಪ್ರತಿಷ್ಟಿತ ಸಮಾಜಮುಖಿ ಕಬ್ಬಡ್ಡಿ ಟ್ರೋಫಿ ಮೊದಲ ಬಹುಮಾನವನ್ನು ಹೆಗ್ಗರಣಿ ತಂಡ ಪಡೆದುಕೊಂಡಿದೆ. ಹೆಗ್ಗರಣಿ ಕಬ್ಬಡ್ಡಿ ತಂಡ ಪಡೆದ ಸಮಾಜಮುಖಿ ಟ್ರೋಫಿ ೧೫ ಸಾವಿರಗಳ ನಗದು ಹಣ ಮತ್ತು ೫ ಸಾವಿರಕ್ಕೂ ಹೆಚ್ಚು ಮೌಲ್ಯದ ಆಕರ್ಷಕ ಶೀಲ್ಡ್ ಹೊಂದಿತ್ತು.
ತೀವೃ ಹಣಾಹಣಿಯ ನಂತರ ಒಂದೇ ಅಂಕದ ಕೊರತೆಯಿಂದ ಹೆಗ್ಗರಣಿ ತಂಡದ ವಿರುದ್ಧ ಸೋಲುಂಡ ಹೊಸೂರು ತಂಡ ದ್ವಿತಿಯ ಬಹುಮಾನ ನಗದು ಎಂಟು ಸಾವಿ ಮತ್ತು ೪ ಸಾವಿರ ಮೌಲ್ಯದ ಶೀಲ್ಡ್ ಪಡೆದು ಸಮಾಧಾನ ಪಟ್ಟಿತು.
ಮೂರಣೇ ಸ್ಥಾನಕ್ಕೆ ಪೈಪೋಟಿ ನಡೆಸಿ ಕೊನೆಗೂ ೬ ಸಾವಿರ ನಗದು ಮತ್ತು ೩.೫ ಸಾವಿರ ಮೌಲ್ಯದ ಶೀಲ್ಡ್ ಪಡೆದ ಸಮಾಜಮುಖಿ ಹೋಮ್ ತಂಡ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಕಬಗಾರ್ ತಂಡದೊಂದಿಗೆ ತಲಾ ಐದು ಸಾವಿರ ಹಂಚಿಕೊಂಡ ಸಮಾಜಮುಖಿ ತಂಡ ಕಬಗಾರ್ ತಂಡವನ್ನು ನಾಲ್ಕನೇ ಸ್ಥಾನಕ್ಕೆ ತಳ್ಳುವಲ್ಲಿ ಯಶಸ್ವಿಯಾಯಿತು.
