

ಸಿದ್ದಾಪುರ: ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಕ್ರೇಜಿ ಟ್ಯಾಲೆಂಟ್ 4ರ ರಾಷ್ಟ್ರಮಟ್ಟದ ಆನ್ಲೈನ್ ಪ್ರತಿಭಾನ್ವೇಷಣೆಯಲ್ಲಿ ಅತ್ಯದ್ಭುತ ಪ್ರತಿಭೆ ಪ್ರದರ್ಶಿಸಿದ ಸಿದ್ದಾಪುರದ ಬಾಲ ಪ್ರತಿಭೆ ಸಿದ್ದಿವಿನಾಯಕ ಶಾಲೆಯ ಎಲ್.ಕೆ.ಜಿ ವಿದ್ಯಾರ್ಥಿ ಅಭಿನವ ಪಿ. ನಿಗೆ ಅಕ್ಷರದೀಪ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ‘ ಸ್ವರ್ಣ ಕಲಾರತ್ನ ‘ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.
ನವೆಂಬರ ತಿಂಗಳಲ್ಲಿ ನಡೆದ ಕ್ರೇಜಿ ಟ್ಯಾಲೆಂಟ್ 4 ರಲ್ಲಿ ಅಭಿನವ್ ತೋರಿದ ಪ್ರತಿಭೆಯ ಪ್ರತಿರೂಪವಾಗಿ ಅಕ್ಷರದೀಪ ಪೌಂಡೇಶನ್ ನ ಅಕ್ಷರದೀಪ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲಾ ವೇದಿಕೆ ಸ್ವರ್ಣ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಬಾಲಕ ಅಭಿನವ್ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಿದ್ದಾಪುರ ಶಾಖೆಯ ವ್ಯವಸ್ಥಾಪಕ ಪ್ರಶಾಂತ ನಾಯ್ಕ ಹಾಗೂ ಭೂಮಾಪನ ಇಲಾಖೆಯ ಉಷಾ ನಾಯ್ಕ ದಂಪತಿಗಳ ಪುತ್ರ. ಈತನ ಸಾಧನೆಗೆ ತಾಲೂಕಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

