

ಶ್ರೀ ನಾಗ ಚೌಡೇಶ್ವರಿ ಯುವ ಗೆಳೆಯರ ಬಳಗ ಸಂಪಖಂಡ ದಿಂದ 4 ನೇ ವರ್ಷದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯನ್ನು ನ.27 ರ ರವಿವಾರ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ
ಅಂದು ರಾತ್ರಿ 9 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಟೀಮ್ ಪರಿವರ್ತನೆ ಸಂಸ್ಥಾಪಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು,
ಅರಣ್ಯ ಅತಿಕ್ರಮಣ ಹೋರಾಟ ವೇದಿಕೆ ಯ ರವೀಂದ್ರ ನಾಯ್ಕ್, ಕಬಡ್ಡಿ ಅಂಕಣ ಉದ್ಘಾಟಿಸಲಿದ್ದಾರೆ, ಮುಖ್ಯ ಅತಿಥಿ ಗಳಾಗಿ ಸಿದ್ದಾಪುರ ಠಾಣೆಯ ಇನ್ಸ್ಪೆಕ್ಟರ್ ಕುಮಾರ್ ಕೆ, ಭಾಗವಹಿಸಲಿದ್ದಾರೆ ಶಿರ್ಸಿ ಸಾಗರ, ಸಿದ್ದಾಪುರ, ಸೊರಬ ತಾಲೂಕಿನ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದ್ದು ಹೆಚ್ಚಿನ ತಂಡಗಳು ಬಂದು ಭಾಗವಹಿಸಿ ಪಂದ್ಯಾವಳಿ ಯಶಸ್ವಿ ಗೊಳಿಸುವಂತೆ ತಿಳಿಸಿದ್ದಾರೆ ಹೆಚ್ಚಿನ ಮಾಹಿತಿ ಗಾಗಿ ( ಸುನಿಲ್ 9448576017)
( ಅರುಣ್7259942554)( ನಿತೀಶ್ 7676421070) (ದಿವಾಕರ್ 7022522554)
( ಮನೋಜ್ 9482798694) (ಕಾರ್ತೀಕ 6366338197) ಸಂಪರ್ಕಿಸುವಂತೆ ಪ್ರಕಟಣೆ ನೀಡಿದ್ದಾರೆ.
ಸಿದ್ದಾಪುರ:- ತಾಲೂಕಿನ ಹೆರವಳ್ಳಿಯ ಮಾಚಿದೇವ ಸ್ಪೋರ್ಟ್ಸ್ ಕ್ಲಬ್ ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ದಿನಾಂಕ:- 26-11-2022 ರ ರವಿವಾರದಂದು ಶ್ರೀ ಮಾಚಿದೇವ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನ ಮ್ಯಾಟ್ ಅಂಕಣದ ಕಬ್ಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಆಸಕ್ತ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಶ್ರೀಧರ ( 9741257687 ) ಸಚಿನ್ ( 9901375752 ) ಹಾಗೂ ಸಂತೋಷ ( 9741221825 ) ರವರನ್ನು ಸಂಪರ್ಕಿಸ ಬಹುದಾಗಿದೆ.
ರಂಗಸೌಗಂಧ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ದಿನಾಂಕ ಜಿಲ್ಲಾ ಐಕ್ಯತಾ ಸಪ್ತಾಹದ ಕಾರ್ಯಕ್ರಮಗಳಲ್ಲೊಂದಾದ ಐಕ್ಯತಾ ಕವಿಗೋಷ್ಠಿಯನ್ನು ನಡೆಸಲಾಯಿತು. ಅದರಲ್ಲಿ ಹಲವಾರು ಕವಿ ಮನಸುಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ಹಾಗೂ ಅಶೋಕ್ ಪ್ರೌಢಶಾಲೆ ಮಕ್ಕಳು ಭಾಗವಹಿಸಿದ್ದರು. ಕುಮಾರ್ ವಿನಯ್ ವಿ ಗೌಡ ಪರಿಸರದ ಕುರಿತಾಗಿ, ಸಿಂಧು ಜಿ ನಾಯ್ಕ್ ತಾಯ್ನಾಡಿನ ಕುರಿತಾಗಿ, ಸಂಜನಾ ನಾಗರಾಜ್ ಒಕ್ಕಲಿಗ ಕಾನನದ ಕುರಿತಾಗಿ, ಇಂಚರಾ ಆರ್ ನಾಯ್ಕ್ ಕರೋನಾದ ಕುರಿತಾಗಿ, ವಿದ್ಯಾಶ್ರೀ ಆರ್ ಗೌಡ ಕಲಿಕೆ ಯಶಸ್ಸಿನ ಕುರಿತಾಗಿ, ಸುನೀಲ್ ಡಿ ಹೆಗಡೆ ಗುರುವಿನ ಕುರಿತು, ಶ್ರೀಲಕ್ಷ್ಮೀ ಜಿ ಹೆಗಡೆ ಕನ್ನಡ ನಾಡಿನ ಕುರಿತು ಸ್ವರಚಿತ ಕವನ ವಾಚನ ಮಾಡಿದರು.
ಹಾಗೆಯೇ ಯಕ್ಷಗಾನ ಕಲಾವಿದರು ಪ್ರಸಂಗಕರ್ತರು ಆದ ಮಾ ಬ್ಲೇಶ್ವರ ಭಟ್ಟ್ ಸರಸ್ವತಿ ಕುರಿತು ಕರೋನಾ ಕುರಿತು ಸ್ವರಚಿತ ಕವನ ವಾಚಿಸಿದರು. ಕವಿಗಳು ಯಕ್ಷಗಾನ ಕಲಾವಿದರು ಆದ ಸುಜಾತಾ ಎಸ್ ಹೆಗಡೆ ದಂಟಕಲ್ ನಿರ್ವಹಿಸಿ, ಕನ್ನಡ ನಾಡು ನುಡಿಯ ಕುರಿತು ಕವನ ವಾಚನ ಕೂಡಿ ಮಾಡಿದರು. ಕವಿಗೋಷ್ಠಿಯಲ್ಲಿ ಭಾಗವಹಿಸಿದ ಎಲ್ಲರಿಗೂ ಪುಸ್ತಕವನ್ನು ನೀಡಿ ಪುರಸ್ಕರಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಸಹಾಯಕ ನಿರ್ದೇಶಕ ನರೇಂದ್ರ ನಾಯಕ್ ಹಾಗೂ ಹಲವು ಗಣ್ಯರ ಉಪಸ್ಥಿತಿಯಲ್ಲಿ ಈ ಕವಿಗೋಷ್ಠಿಯು ಸಂಪನ್ನವಾಯಿತು.

