ಸಾವಿನಲ್ಲೂ ಒಂದಾದ ರಾಮಣ್ಣ ದಂಪತಿಗಳು
ಸಿದ್ದಾಪುರ: ತಾಲ್ಲೂಕಿನ ಮನಮನೆ ವ್ಯವಸಾಯ ಸೇವಾ ಸಹಕಾರಿ ಸಂ ,ಹಾಗೂ ಶ್ರೀ ಮಹಾಸತಿ( ಮಾಸ್ತೆಮ್ಮ) ದೇವಾಲಯದ ಅಧ್ಯಕ್ಷ ರಾಮ ಚೌಡ ನಾಯ್ಕ ಉದ್ದಿನ ಹಕ್ಲರ ಮನೆ ಮೊನ್ನೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಶಸ್ತ್ರ ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ. ಇವರೊಂದಿಗೇ ಬಾಳ ಸಂಗಾತಿ ಬಂಗಾರಮ್ಮ ಕೂಡ ಪತಿಯ ದುಃಖದಿಂದ ಹೊರಬರಲಾರದೆ ಮರು ದಿನವೇ ಪತಿಯ ದಾರಿಹಿಡಿದಿರುವುದು ವಿಧಿ ವಿಲಾಸಕ್ಕೆ ಸಾಕ್ಷಿಯಾಗಿದೆ.
ದಿ- ರಾಮ ಚೌಡ ನಾಯ್ಕರವರು ಪ್ರಗತಿಪರ ರೇಷ್ಮೆ , ಅಡಿಕೆ ಬೆಳೆಗಾರರಾಗಿದ್ದು, ಸಾಮಾಜಿಕ, ಧಾರ್ಮಿಕ ಮುಖಂಡರೂ ಆಗಿದ್ದರು. ಸಿದ್ದಾಪುರ ಹಾಗೂ ಸಾಗರ ತಾಲೂಕಿನಲ್ಲಿ ಉತ್ತಮ ಹೆಸರನ್ನು ಗಳಿಸಿದ್ದ ಇವರು ಸ್ವಾತಂತ್ರ್ಯ ಹೋರಾಟಗಾರ ಉದ್ದಿನಹಕ್ಲರ ಮನೆ ಚೌಡ ನಾಯ್ಕರ ಪುತ್ರರಾಗಿದ್ದರು.
ಮೃತ ದಂಪತಿಗಳು ಸಾಗರ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಲಕ್ಷ್ಮಣ ನಾಯ್ಕ ಒಳಗೊಂಡಂತೆ ಮೂವರು ಮಕ್ಕಳನ್ನು, ಸಹೋದರ , ಸಹಕಾರ ಇಲಾಖೆಯ ನಿವೃತ್ತ ನಿರ್ದೇಶಕ ಗಣಪತಿ ನಾಯ್ಕ ಸೇರಿದಂತೆ ಅಪಾರ ಸ್ನೇಹಿತರು, ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ದಿವ್ಯಾತ್ಮಗಳಿಗೆ ಸಂದ್ಘತಿಗಾಗಿ ಲಲಿತಾ ನಾಯ್ಕ ಗುಲ್ಲುಮನೆ,ಎ.ಬಿ.ನಾಯ್ಕ ಕಡಕೇರಿ, ಮಳಲವಳ್ಳಿಯ ಗಣೇಶ್ ಮತ್ತು ವಸಂತ ನಾಯ್ಕ,ಬಿಳಗಿ ಗ್ರಾ.ಪಂ.ಸದಸ್ಯೆ ಸುವರ್ಣಾ ಪ್ರಭಾಕರ ನಾಯ್ಕ,ಕ.ಸಾ.ಪ. ತಾಲೂಕಾಧ್ಯಕ್ಷ ಗೋಪಾಲ ನಾಯ್ಕ,ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ಸೇರಿದಂತೆ ಅನೇಕರು ಪ್ರಾರ್ಥಿಸಿದ್ದಾರೆ.