


ಸಿದ್ಧಾಪುರ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷರ ವಿರುದ್ಧ ಶಿಕ್ಷಕಿಯೊಬ್ಬರು ಜಾತಿ ನಿಂದನೆ ದೂರು ನೀಡಿರುವುದು ನಗರದಲ್ಲಿ ಚರ್ಚೆಯ ವಿಷಯವಾಗಿದೆ.
ತಾಲೂಕಾ ನೌಕರರ ಸಂಘದ ಅಧ್ಯಕ್ಷ ಕಳೆದ ಒಂದು ವರ್ಷಕ್ಕಿಂತಲೂ ಹೆಚ್ಚು ಅವಧಿಯಿಂದ ವಿನಾಕಾರಣ ತಮಗೆ ಮಾನಸಿಕ ಹಿಂಸೆ ನೀಡುತ್ತಾ ತಮ್ಮ ವೈಯಕ್ತಿಕ ಬದುಕಿಗೂ ತೊಂದರೆ ಮಾಡುತ್ತಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿದ್ದು ಪರಿವಾರ ಪ್ರೇರಿತ ಅಧಿಕಾರ ಶಾಹಿ ಮತ್ತು ರಾಜಕೀಯದ ಲಾಭ ಪಡೆಯುತ್ತಿರುವ ಅಧ್ಯಕ್ಷರು ಪ್ರಭಾವ ಬಳಸಿ ಕೆಲವರಿಗೆ ಕಿರುಕುಳ ಕೊಡುವುದು,ಕರ್ತವ್ಯ ಪಾಲನೆಗೆ ಅಡ್ಡಿ ಮಾಡುತ್ತಿರುವ ವಿದ್ಯಮಾನ ನಡೆಯುತ್ತಿರುವುದರಿಂದ ಬೇಸತ್ತಿರುವ ಕೋಡ್ಸರ ಶಾಲೆಯ ಶಿಕ್ಷಕಿ ಅಧ್ಯಕ್ಷರ ವಿರುದ್ಧ ದೂರು ನೀಡಿದ್ದು ಪ್ರಕರಣ ದಾಖಲಾಗಿರುವ ಬಗ್ಗೆ ಖಚಿತಪಟ್ಟಿಲ್ಲ.
ಅಧ್ಯಕ್ಷರ ಪರವಾಗಿ ಸಂಘ-ಸಂಘಟನೆಗಳ ಪ್ರಮುಖರು ನಿಂತಿದ್ದರೆ, ಬಾಧಿತ ಶಿಕ್ಷಕಿಯ ಪರವಾಗಿ ನೊಂದ ಶಿಕ್ಷಕರು ಮತ್ತು ವಿರೋಧಿ ಪಾಳೆಯ ನಿಂತಿರುವ ಬಾತ್ಮಿ ಸಮಾಜಮುಖಿ ಡಾಟ್ ನೆಟ್ ಗೆ ದೊರೆತಿದೆ.

