

ರಾಜ್ಯದಲ್ಲಿ ೭೦ ಲಕ್ಷ ಜನಸಂಖ್ಯೆ ಹೊಂದಿರುವ ಈಡಿಗರಿಗೆ ಈಡಿಗ ಶಾಸಕರು,ಸಚಿವರಿಂದಲೇ ಅನ್ಯಾಯವಾಗಿದೆ ಎನ್ನುವ ಮೂಲಕ ಗುಲಬುರ್ಗಾ ಚಿತ್ತಾಪುರ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಸ್ವಾಮೀಜಿ ಪ್ರಣವಾನಂದ ಹೊಸ ಚರ್ಚೆ ಹುಟ್ಟುಹಾಕಿದ್ದಾರೆ.

ರಾಜ್ಯ ಸರ್ಕಾರ ಪ್ರಭಾವಿಗಳಿಗೆ ನಿಗಮ ಮಂಡಳಿ ನೀಡಿ ಈಡಿಗ,ಬಿಲ್ಲವ, ನಾಮಧಾರಿ ಸಮಾಜವನ್ನು ಕಡೆಗಣಿಸಿದೆ. ನಾರಾಯಣ ಗುರು ಹೆಸರಿನಲ್ಲಿ ನಿಗಮ ಸ್ಥಾಪಿಸದಿರುವುದನ್ನು ವಿರೋಧಿಸಿ ಮಂಗಳೂರಿನಿಂದ ಬೆಂಗಳೂರಿನವರೆಗೆ ೬೫೮ ಕಿ.ಮೀ ಐತಿಹಾಸಿಕ ಪಾದಯಾತ್ರೆ ನಡೆಸಲಿದ್ದೇವೆ. ಈಡಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಬದಲಾಗಿ ಸರ್ಕಾರ ೨ಎ ಕೆಟಗರಿಗೆ ಹೊಸಬರನ್ನು ಸೇರಿಸುತ್ತಿದೆ. ಈ ಅನ್ಯಾಯವನ್ನು ಸಮಾಜ ವಿರೋಧಿಸುತ್ತಿದೆ. ಆದರೆ ಈಡಿಗ ಸಮೂದಾಯದ ಶಾಸಕರು ಸಚಿವರು ಪ್ರತಿಭಟಿಸುತ್ತಿಲ್ಲ.
ಈಡಿಗ ಸಮೂದಾಯಕ್ಕೆ ಸ್ವ ಸಮೂದಾಯದ ಜನಪ್ರತಿನಿಧಿಗಳಿಂದಲೇ ಅನ್ಯಾಯವಾಗಿದೆ.ಈ ಜನಪ್ರತಿನಿಧಿಗಳು ಸಮಾಜಕ್ಕೆ ನ್ಯಾಯ ಕೊಡಿಸಬೇಕು ಇಲ್ಲದಿದ್ದರೆ ೨೦೨೩ ರ ಚುನಾವಣೆಯಲ್ಲಿ ತಮಗೆ ಈಡಿಗ,ಬಿಲ್ಲವ,ನಾಮಧಾರಿಗಳ ಮತ ಬೇಕಾಗಿಲ್ಲ ಎಂದು ಸ್ವಾಭಿಮಾನ ಪ್ರದರ್ಶಿಸಬೇಕು ಎಂದರು.
ಪ್ರಣವಾನಂದ ಸ್ವಾಮೀಜಿ ಮಾತುಗಳ ಮೂಲಕ ವಿವಾದ ಸೃಷ್ಟಿಸುತಿದ್ದಾರೆ ಈಗ ಈಡಿಗ ರಾಜಕಾರಣಿಗಳ ಬಗ್ಗೆ ಮಾತನಾಡಿರುವ ಸ್ವಾಮೀಜಿಗಳ ಮಾತುಗಳು ಸಂಚಲನ ಸೃಷ್ಟಿಸಿವೆ. ಈಡಿಗ ಸಮೂದಾಯದ ಸಚಿವರಾಗಿರುವ ಸುನಿಲ್ ಕುಮಾರ ಮತ್ತು ಶ್ರೀನಿವಾಸ ಪೂಜಾರಿ ಸರ್ಕಾರದ ಭಾಗವಾಗಿ ಸಮೂದಾಯಕ್ಕೆ ದ್ರೋಹ ಬಗೆದಿದ್ದಾರೆ ಎನ್ನುವ ಮೂಲಕ ಪ್ರಣವಾನಂದರು ವಿವಾದದ ಹುತ್ತಕ್ಕೆ ಕೈ ಹಾಕಿದಂತಾಗಿದೆ.
ಯಾವುದೇ ಸಮಾಜದ ಅಭಿವೃದ್ಧಿ ಉನ್ನತಿಗೆ ಶ್ರಮಿಸುವವರಿಗೆ ಹುದ್ದೆಗಳ ಅಗತ್ಯವಿಲ್ಲ. ಆರ್ಯ ಈಡಿಗ ರಾಷ್ಟ್ರೀಯ ಮಂಡಳಿ ಅಧ್ಯಕ್ಷನಾಗಿ ತಾವು ಮಾಡುತ್ತಿರುವ ಕೆಲಸವನ್ನು ಸಮಾಜದ ಯಾವುದೇ ಸಾಮಾನ್ಯ ವ್ಯಕ್ತಿ ಕೂಡಾ ಮಾಡಬಹುದು ಎಂದು ತಮ್ಮ ನಾಯಕತ್ವ ಪ್ರಶ್ನಿಸುವವರನ್ನು ಕೆಣಕಿದ್ದಾರೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
