ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಮಂಗಳೂರಿನಿಂದ ಪ್ರಾರಂಭಿಸಿ ಬೆಂಗಳೂರಿನವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯ ಪೂರ್ವಭಾವಿ ಸಭೆ ಪಟ್ಟಣದ ಬಾಲ ಭವನದಲ್ಲಿ
ನಡೆಯಿತು.
ಈಡಿಗ ಅಭಿವೃ ದ್ಧಿ ನಿಗಮ ಸ್ಥಾಪನೆ, ಸಮಾಜಕ್ಕೆ ರಾಜಕೀಯ ಪ್ರಾಧಾನ್ಯತೆ ಇತ್ಯಾದಿ ಈಡಿಗ ನಾಮಧಾರಿ 26 ಪಂಗಡಗಳ ದ್ವನಿಯಾಗಿ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಪಕ್ಷಾತೀತವಾಗಿ ಐತಿಹಾಸಿಕ ಪಾದಯಾತ್ರೆಯನ್ನು ದಿನಾಂಕ 6/01/2023 ರಂದು ಮಂಗಳೂರಿನಿಂದ ಪ್ರಾರಂಭಿಸಿ ಬೆಂಗಳೂರಿನವರೆಗೆ ನಡೆಸಲು ಯೋಜಿಸಿದ್ದಾರೆ.
ಈ ಐತಿಹಾಸಿಕ ಪಾದಯಾತ್ರೆ ಸಾಗರದಿಂದ ಸಿದ್ದಾಪುರ ಮಾರ್ಗವಾಗಿ ಸೊರಬ ಮೂಲಕ ಸಾಗಲಿದೆ.
ಇಂದಿನ ಸಭೆ ಯಲ್ಲಿ ಸರ್ವಾನುಮತದಿಂದ ಸಿದ್ದಾಪುರ ತಾಲೂಕಾ ಪಾದಯಾತ್ರೆ ಸಮಿತಿಯ
ಅಧ್ಯಕ್ಷ ರಾಗಿ ಕನ್ನೇಶ್ ಕೋಲಶಿರ್ಸಿ, ಗೌರವಾಧ್ಯಕ್ಷರಾಗಿ ವೀರಭದ್ರ
ನಾಯ್ಕ ಮಳವಳ್ಳಿ, ಆಯ್ಕೆ ಯಾಗಿದ್ದಾರೆ.
ರವಿ ಕೊಠಾರಿ ಕೋಲ್ ಶಿರ್ಸಿ, ಬಾಲಕೃಷ್ಣ ಕತ್ತಿ ಕೋಲಶಿರ್ಸಿ ,
ಗಾಂಧೀಜಿ ಆರ್ ನಾಯ್ಕ್ ಬಾಳಗೋಡು, ನಾಗರಾಜ ನಾಯ್ಕ ಅನಾಥಾಶ್ರಮ ಮುಗದೂರು, ರಾಘವೇಂದ್ರ ನಾಯ್ಕ ಕಾವಂ ಚೂರ್, ಹೇಮಂತ್ ನಾಯ್ಕ್ ಗೋಳಗೊಡ, ಹೇಮಂತ್ ನಾಯ್ಕ್ ಹಳೇಬರಗಾಲ್, ವಿನಾಯಕ್ ಕೊಂಡ್ಲಿ, ಕ್ರಷ್ಣಮೂರ್ತಿ ಐಸೂರ, ವಿನಾಯಕ ದೊಡ್ಡಗದ್ದೆ,,ಪಾಂಡುರಂಗ ಚನಮಾವ, ಸೇರಿದಂತೆ ಸಮಾಜದ ಹಲವರು ಉಪಸ್ಥಿತರಿದ್ದರು.
ಡಿಸೆಂಬರ 7 ರಂದು 11 ಗಂಟೆಗೆ ಬಾಲಭವನದಲ್ಲಿ ಪದಾದಧಿಕಾರಿಗಳ ಆಯ್ಕೆ ಹಾಗೂ ಪಾದಯಾತ್ರೆ ಪೂರ್ವ ಸಿದ್ದತೆ ಬಗ್ಗೆ ಸಭೆ ನಡೆಸಲು ತೀರ್ಮಾನಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಭಾಂದವರು ಹಾಜರಿರಲು ಕೊರಿದ್ದಾರೆ.