

೮೬ ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ,೬ ೨೦೨೩ ರಿಂದ ಹಾವೇರಿಯಲ್ಲಿ ನಡೆಯಲಿದೆ. ಈ ಸಮ್ಮೇಳನದ ಪ್ರಚಾರ ಕಾರ್ಯ ಈಗಾಗಲೇ ಪ್ರಾರಂಭವಾಗಿದೆ. ಪ್ರಚಾರದ ಅಂಗವಾಗಿ ಕನ್ನಡ ರಥ ರಾಜ್ಯಾದ್ಯಂತ ಸಂಚರಿಸಲಿದೆ. ಸಾಹಿತ್ಯ ಸಮ್ಮೇಳನದ ಪ್ರಚಾರದ ಕನ್ನಡ ರಥಕ್ಕೆ ಗುರುವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ಭುವನಗಿರಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಕನ್ನಡ ತಾಯಿ ಭುವನೇಶ್ವರಿಯ ದೇವಾಲಯ ಎನ್ನಲಾಗುವ ಭುವನಗಿರಿಯಲ್ಲಿ ಕಲಾತಂಡಗಳು,ಸಾಹಿತ್ಯಾಭಿಮಾನಿಗಳ ಉಪಸ್ಥಿತಿಯಲ್ಲಿ ಕನ್ನಡ ರಥಕ್ಕೆ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಮಹೇಶ್ ಜೋಷಿ ಚಾಲನೆ ನೀಡಿದರು.
ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಬುಧವಾರ ಹಾವೇರಿ ಜಿಲ್ಲೆಯ ಗೊಟಗೋಡಿನಿಂದ ಹೊರಟ ಈ ಕನ್ನಡ ರಥಕ್ಕೆ ಗುರುವಾರ ಭುವನಗಿರಿಯಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಗುರುವಾರ ಉತ್ತರ ಕನ್ನಡ ಜಿಲ್ಲೆಯಿಂದ ಹೊರಟ ಈ ಕನ್ನಡ ರಥದ ಜ್ಯೋತಿ ಇಡೀ ರಾಜ್ಯವನ್ನು ಸಂಚರಿಸಿ ಜನೇವರಿ ೬ ರಂದು ಹಾವೇರಿಯಲ್ಲಿ ಪ್ರಾರಂಭವಾಗಲಿರುವ ೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯ ದೀಪ ಬೆಳಗಿಸಲಿದೆ. ಕನ್ನಡದ ಭುವನೇಶ್ವರಿ ದೇವಾಲಯದಿಂದ ಹೊರಟ ಕನ್ನಡ ರಥ ರಾಜ್ಯ ಸಂಚರಿಸಿ ಕನ್ನಡ ಸಾಹಿತ್ಯ ಸಮ್ಮೇಳದ ಉದ್ಘಾಟನೆಯ ದಿವ್ಯ ಜ್ಯೋತಿಯಾಗಲಿದೆ ಎಂದು ಜೋಷಿ ತಿಳಿಸಿದರು.

