
೮೬ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜನೇವರಿ ೨೦೨೩ ರ ೬ ನೇ ತಾರೀಖಿನಿಂದ ಪ್ರಾರಂಭವಾಗಲಿದೆ. ಈ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆದಿದ್ದು ಉತ್ತರಕನ್ನಡ ಜಿಲ್ಲೆಯ ಭುವನಗಿರಿ ಮೂಕಾಂಬಿಕಾ ದೇವಾಲಯದಿಂದ ಪ್ರಚಾರ ರಥ ಹೊರಟಿದೆ. ಹಾವೇರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಷಿ ಕನ್ನಡಿಗರನ್ನು ಆಹ್ವಾನಿಸಿದ್ದಾರೆ.
ಸಾಹಿತ್ಯಾಸಕ್ತರು ಮೂರು ದಿವಸಗಳ ಈ ಸಮ್ಮೇಳನದ ಪ್ರಯೋಜನ ಪಡೆಯಲು ವಿನಂತಿಸಿದ್ದಾರೆ.
