

ಕನ್ನಡ ರಥ ಈ ವರ್ಷದ ವಿಶೇಶ, ಮುಂದಿನ ಸಾಹಿತ್ಯ ಸಮ್ಮೇಳನಗಳಲ್ಲಿ ಕೂಡಾ ಇದೇ ರೀತಿ ಕನ್ನಡ ರಥದ ಮೂಲಕ ಜ್ಯೋತಿ ಕೊಂಡೊಯ್ದು ಅದರಿಂದಲೇ ಸಾಹಿತ್ಯ ಸಮ್ಮೇಳನ ಉದ್ಘಾಟಿಸಲಿದ್ದೇವೆ.-ಡಾ. ಮಹೇಶ್ ಜೋಷಿ
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಾ ಕನ್ನಡವನ್ನು ಸಮೃದ್ಧಗೊಳಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಶತಮಾನ ಕಂಡ ಕರ್ನಾಟಕದ ಸಾಂಸ್ಕೃತಿಕ ಸಂಸ್ಥೆ. ಕನ್ನಡ ಸಾಹಿತ್ಯ ಪರಿಷತ್ ರಚನೆಯಾದಂದಿನಿಂದ ಈವರೆಗೆ ಸಾಹಿತ್ಯ ಪರಿಷತ್ ನ ಬೇರೆ ಕೆಲಸಗಳದ್ದೇ ಒಂದು ತೂಕವಾದರೆ, ಕನ್ನಡ ಸಾಹಿತ್ಯ ಸಮ್ಮೇಳನಗಳು ಪರಿಷತ್ತಿನ ಬಲದ ಸಂಕೇತ.
೮೫ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕಂಡ ಕನ್ನಡ ಸಾಹಿತ್ಯ ಪರಿಷತ್ ಗೆ ಈ ಬಾರಿ ಮುಖ್ಯಮಂತ್ರಿ ತವರು ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಸಂಬ್ರಮ
.ಇದೇ ಮೊದಲ ಬಾರಿ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ಕನ್ನಡ ರಥವನ್ನು ನಿರ್ಮಿಸಿದೆ. ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕಾಗಿ ರಾಜ್ಯವ್ಯಾಪಿ ಸಂಚರಿಸುತ್ತಿರುವ ಕನ್ನಡ ರಥ ಇದೇ ವಾರ ಜಾನಪದ ವಿಶ್ವವಿದ್ಯಾಲಯ ಗೊಟಗೋಡಯಿಂದ ಹೊರಟು ಕನ್ನಡ ದೇವಿ ಭುವನಗಿರಿಯ ಮೂಕಾಂಬಿಕಾದೇವಿಯ ಸನ್ನಿಧಿಯಲ್ಲಿ ವಿದ್ಯುಕ್ತವಾಗಿ ಚಾಲನೆ ಪಡೆದಿದೆ.
ಈ ಕನ್ನಡ ರಥ ಕನ್ನಡದ ಹೆಸರನ್ನು,ಸೊಗಸನ್ನು ವಿಶ್ವಕ್ಕೆ ಪರಿಚಯಿಸಿದ ಜ್ನಾನಪೀಠ ಪ್ರಶಸ್ತಿ ಪುರಸ್ಕೃತರೊಂದಿಗೆ ಸರಸ್ವತಿ ಸನ್ಮಾನ ಪಡೆದ ಸಾಹಿತಿಗಳ ಬಿತ್ತಿ ಚಿತ್ರಗಳ ನ್ನು ಹೊಂದಿದೆ. ಕನ್ನಡ ತಾಯಿ ಭುವನೇಶ್ವರಿಯ ಪ್ರತಿಕೃತಿಗಳೊಂದಿಗೆ ಕನ್ನಡದ ಅಸ್ಮತೆ ಸಾರುವ ಅಂಶಗಳನ್ನು ಈ ರಥಕ್ಕೆ ಜೋಡಿಸಲಾಗಿದೆ. ಕನ್ನಡದ ಸೊಗಡನ್ನು ಪ್ರಸರಿಸುವ ಈ ರಥ ಈ ವಾರದಿಂದ ಜನೇವರಿ ೬ ರ ವರೆಗೆ ಸಂಚರಿಸಲಿದೆ.ಗುರುವಾರ ಉತ್ತರ ಕನ್ನಡ ಜಿಲ್ಲೆಯಿಂದ ಹೊರಟ ಈ ರಥ ಇಂದು ಬೆಳಗಾವಿ ತಲುಪಿ ನಂತರ ನಾನಾ ಜಿಲ್ಲೆಗಳ ಮೂಲಕ ಸಾಗಿ ಹಾವೇರಿಗೆ ಬರಲಿದೆ.
