

ಮಿಂಚಿನ ಓಟ ನಿಲ್ಲಿಸಿದ ಸೊರಬದ ಚಾಮುಂಡಿ ಎಕ್ಸ್ಪ್ರೆಸ್.. ಅಭಿಮಾನಿಗಳಿಂದ ಕಂಬನಿ
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಚಾಮುಂಡಿ ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದಿದ್ದ ಎತ್ತು ಅನಾರೋಗ್ಯದಿಂದ ಸಾವನ್ನಪ್ಪಿದೆ. ಚಾಮುಂಡಿ ಎಕ್ಸ್ಪ್ರೆಸ್ ಅಭಿಮಾನಿಗಳು ಸಾಮಾಜಿಕ ಜಾಲತಣದಲ್ಲಿ ಕಂಬನಿ ಮಿಡಿದಿದ್ದಾರೆ.
ಶಿವಮೊಗ್ಗ ಜಿಲ್ಲೆ ಸೊರಬ ಸುಮನವಳ್ಳಿಯ ಪ್ರಸನ್ನಕುಮಾರ್ ಈ ಹೋರಿಗೆ ೧೮ ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿಸಿದ್ದರು. ರಾಜ್ಯದ ಬಹುತೇಕ ಕಡೆ ಬಹುಮಾನ ಗೆದ್ದಿದ್ದ ಚಾಮುಂಡಿ ಎಕ್ಸ್ ಪ್ರೆಸ್ ಶುಕ್ರವಾರ ಕೊನೆಯ ಉಸಿರು ಎಳೆದಿದೆ. ಈ ಹೋರಿಯ ಅಭಿಮಾನಿಗಳಾಗಿದ್ದ ಹೋರಿ ಬೆದರಿಸುವ ರೈತರು ಈ ಸಾವಿಗೆ ಮರುಗಿದ್ದಾರೆ.
