

ಕ್ಷುಲ್ಲಕ ಕಾರಣಗಳಿಂದ ರಾಜಕೀಯ ಲಾಭ ಪಡೆಯಲು ಹವಣಿಸುವ ಬಿ.ಜೆ.ಪಿ. ತಂತ್ರ ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ ಎಂದು ಹೇಳಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಪರೇಶ್ ಮೇಸ್ತ ಪ್ರಕರಣದಲ್ಲಿ ಶಾಂತಿ, ಸುವ್ಯವಸ್ಥೆ ಕದಡಿದ ಬಿ.ಜೆ.ಪಿ. ಮುಖಂಡರನ್ನು ಒದ್ದು ಒಳಗೆ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಸಿದ್ದಾಪುರದಲ್ಲಿ ಸಮಾಜಮುಖಿ ಡಾಟ್ ನೆಟ್ ನ್ಯೂಸ್ ಗೆ ಪ್ರತಿಕ್ರೀಯಿಸಿದ ಅವರು ಬಿ.ಜೆ.ಪಿ. ಸರ್ವವಿಧಗಳಲ್ಲೂ ವಿಫಲವಾಗಿದೆ. ರಚನಾತ್ಮಕ ಕಾರ್ಯಕ್ರಮಗಳಿಲ್ಲದ ಬಿ.ಜೆ.ಪಿ. ಕೋಮುವಿಚಾರಗಳಿಂದ ಜನರ ದಿಕ್ಕುತಪ್ಪಿಸಿ ಲಾಭ ಪಡೆಯಲು ಹವಣಿಸುತ್ತಿದೆ. ಪರೇಶ್ ಮೇಸ್ತ ಸಾವಿನಲ್ಲಿ ಜನಸಾಮಾನ್ಯರಿಗೆ ಉರಿ ನೀಡಿ ಬಿ.ಜೆ.ಪಿ. ಬೆನ್ನು ಕಾಯಿಸಿಕೊಂಡಿದೆ. ಸಿ.ಬಿ.ಐ. ವರದಿ ಪರೇಶ್ ಮೇಸ್ತಾ ಸಾವನ್ನು ಸಹಜ ಸಾವು ಎಂದು ಹೇಳಿದೆ. ಪರೇಶ್ ಮೇಸ್ತಾ ಪ್ರಕರಣದಲ್ಲಿ ಗಂಟಲು ಹರಿದುಕೊಂಡು ಶಾಂತಿ-ಸುವ್ಯವಸ್ಥೆ ಹಾಳು ಮಾಡಿದ ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಅನಂತಕುಮಾರ ಹೆಗಡೆಯವರನ್ನು ಒದ್ದು ಒಳಹಾಕಬೇಕು. ರಾಜಕೀಯ ಲಾಭಕ್ಕಾಗಿ ವ್ಯವಸ್ಥೆ ಹಾಳುಮಾಡುವ ರಾಜಕೀಯ ಪಕ್ಷಗಳಿಗೆ ಜನರು ಬುದ್ದಿ ಕಲಿಸಬೇಕು ಎಂದು ಕೆ.ಪಿ.ಸಿ.ಸಿ. ವಕ್ತಾರರೂ ಆಗಿರುವ ಗೋಪಾಲಕೃಷ್ಣ ವಿನಂತಿಸಿದರು.
