ನೋವಾಯಿತು…. ಹೀಗಾಗಬಾರದಿತ್ತು
ಈತ ಗುರುರಾಜ್ ಪೂಜಾರಿ. ನಮ್ಮ ಊರಿನ ಮೊಮ್ಮಗ. ನನ್ನ ಸಂಬಂಧಿ ಕೂಡಾ. ಕಾರ್ಗಲ್ ನ ಹೋಟೆಲ್ ಮಾಲೀಕ ಅಣ್ಣಪ್ಪ ಪೂಜಾರಿ ಮತ್ತು ಶಾರದರವರ ಮಗ. ನಿನ್ನೆ ಸಿದ್ದಾಪುರ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಅಗಲಿದ್ದಾರೆ. ವಿಷಯ ಕೇಳಿ ಬಹಳ ಬೇಸರ ಆಯಿತು. ಕಳೆದ ವರ್ಷವಷ್ಟೇ ಮದುವೆ ಆಗಿ ಇದೇ ತಿಂಗಳಲ್ಲಿ ತಂದೆಯಾಗಿದ್ದ.
ಅಣ್ಣಪ್ಪನವರು ನಮ್ಮ ಊರಿನ ಅಳಿಯ. ಶಾರದರವರು ನನ್ನ ಅಕ್ಕನ ಕ್ಲಾಸ್ಮೇಟ್. ಅಣ್ಣಪ್ಪನವರು ಸಾಗರದಲ್ಲಿ ಹೊಟೇಲ್ ನಡೆಸುತ್ತಾ ಇದ್ದವರು ಕಾರ್ಗಲ್ ನಲ್ಲಿ ಮುಂದುವರಿಸಿದರು. ಒಂದೆರೆಡು ದಶಕದಿಂದ ಅಲ್ಲೇ ಜನರ ಜತೆ ಬೇರೆಯುತ್ತ, ಹಲವು ಸಂಘಟನೆಯ ಜತೆ ತೊಡಗಿಕೊಂಡು ಬದುಕು ಕಟ್ಟಿ ಮಕ್ಕಳನ್ನ ಬೆಳೆಸಿದವರು. ಶಾರದಕ್ಕ ಎಂತಾ ಮಹಾತಾಯಿ ಎಂದರೆ ತನ್ನ ತಂಗಿ ಧನಲಕ್ಷ್ಮಿ ಕಿಡ್ನಿ ಸಮಸ್ಯೆ ಆದಾಗ ಆಕೆಯ ಬದುಕಿಗೆ ತನ್ನದೊಂದು ಕಿಡ್ನಿ ದಾನ ಮಾಡಿದವರು. ಮಗಳು ಮಗನನ್ನು ಕಳೆದ ವರ್ಷ ಮದುವೆ ಮಾಡಿದ್ದರು.
ಈ ದಂಪತಿಗಳ ಕುಟುಂಬದ ಪ್ರೀತಿಯ ಮಗ ನಿನ್ನೆ ಹೊರಟು ಹೋಗಿಬಿಟ್ಟ. ಪುತ್ರ ಅಗಲಿಕೆ ದುಃಖ ತುಂಬುವ ಶಕ್ತಿ ಅವರಿಗೆ ಬರಲಿ. ಗುರುರಾಜ್ ಹೆಂಡತಿ ಈ ಆಘಾತದಿಂದ ಹೊರ ಬರಲು ಶಕ್ತಿ ಬರಲಿ.
ಗುರುರಾಜ್ ಮಿಸ್ ಯು ಕಣಪ್ಪ….
ಅಣ್ಣಪ್ಪಣ್ಣ ಶಾರದಕ್ಕ ನಿಮ್ಮ ದುಃಖದಲ್ಲಿ ನಾವೂ ಬಾಗಿ
ಜಿ. ಟಿ ತುಮರಿ
04-12-2022