

ಸಿದ್ದಾಪುರ: ಜಿಲ್ಲೆಯ ಆರು ವಿಧಾನಸಭಾ ಸ್ಥಾನಗಳಿಗೆ ನಮ್ಮ ಪಕ್ಷದ ಅಭ್ಯರ್ಥಿ ಗಳನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸುತ್ತೇವೆ ಎಂದು
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ ತಿಳಿಸಿದರು.
ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಇಂದು ಗುಜರಾತ್ ನಲ್ಲಿ ಚುನಾವಣೆ ನಡೆಯುತ್ತಾ ಇದೆ ಗುಜರಾತ್ ಚುನಾವಣೆಯಲ್ಲಿ ಮತದಾರರು ನಮ್ಮ ಪಕ್ಷದ ಕೈ ಹಿಡಿದರು ಎಂದಾದರೆ. ಕರ್ನಾಟಕದಲ್ಲಿ ಸಹ ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿನ ಪಟ್ಟಿ ಏರಿಕೆ ಕಾಣಬಹುದು ಎಂಬುದು ನಮ್ಮ ಅಭಿಪ್ರಾಯ ಇದೆ. ಕರ್ನಾಟಕದಲ್ಲಿ ನಮ್ಮ ಪಕ್ಷ ವತಿಯಿಂದ ಬಹಳಷ್ಟು ಪ್ರಬಲ ಸ್ಪರ್ಧೆ ಆಗಬಹುದು. ಕರ್ನಾಟಕದಲ್ಲಿ ನಾವು ನಮ್ಮ ಖಾತೆಯನ್ನು ತೆರೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ
ಅರವಿಂದ್ ಕ್ರೇಜಿ ವಾಲಾ ನೇತೃತ್ವದಲ್ಲಿ ದಿಲ್ಲಿಯಲ್ಲಿ ನಡೆಸಿರುವ ಸರ್ಕಾರಕ್ಕೆ ಒಪ್ಪಿ ಜನ ಅಲ್ಲಿ ಅವರ ಕೈ ಹಿಡಿದಿದ್ದಾರೆ. ಅದೇ ರೀತಿ ಇಡೀ ದೇಶದ ಮತದಾರರು ಇವತ್ತು ಅರವಿಂದ ಕ್ರೇಜಿವಾಲ ನೇತೃತ್ವದ ಸರ್ಕಾರವನ್ನು ನಿರ್ಮಾಣ ಮಾಡಬೇಕು. ಪ್ರತಿಯೊಂದು ರಾಜ್ಯದಲ್ಲೂ ಆಮ್ ಆದ್ಮಿ ಪಕ್ಷದ ಸರ್ಕಾರ ಆಗಬೇಕು. ದೆಹಲಿಯ ಜನತೆ ಪಡೆದುಕೊಂಡಂತಹ ಮಾದರಿಯ ಆಡಳಿತ ನಮ್ಮ ರಾಜ್ಯದ ಜನತೆಯು ಪಡೆದುಕೊಳ್ಳಬೇಕು ನಮ್ಮ ಪಕ್ಷದಲ್ಲಿ ಯಾರು ಪಕ್ಷದ ಬೇರು ಮಟ್ಟದ ಕಾರ್ಯಕರ್ತರಾಗಿ ಬೇರು ಮಟ್ಟದಿಂದ ಸಂಘಟನೆ ಮಾಡಿಕೊಂಡು ಇಡೀ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಪಡೆಯನ್ನು ಕಟ್ಟಿ ಚುನಾವಣೆ ಅಖಾಡಕ್ಕೆ ಯಾರು ತಯಾರಾಗುತ್ತಾರೋ ಅವರಿಗೆ ನಾವು ಪಕ್ಷದಿಂದ ಟಿಕೆಟ್ ಕೊಡುವ ವಿಚಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿರವರು ನಮಗೆ ಸೂಚನೆಯನ್ನು ನೀಡಿದ್ದಾರೆ.
ವೀರಭದ್ರ ನಾಯ್ಕ ರವರು ಶಿರಸಿ ಸಿದ್ದಾಪುರ ಕ್ಷೇತ್ರಕ್ಕೆ ತಮ್ಮ ಸೇವೆಯನ್ನು ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ನಾವು ಅಖಾಡಕ್ಕೆ ಇಳಿಸೋಣ. ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ ಒಳ್ಳೆಯ ಅಭ್ಯರ್ಥಿಗಳನ್ನು ಗುರುತಿಸಿ ಸೂಕ್ತ ಅಭ್ಯರ್ಥಿಯ ಯಾದಿಯನ್ನು ಕಳಿಸುವಂತೆ ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪೃಥ್ವಿ ರೆಡ್ಡಿ ಅವರು ನನಗೆ ತಿಳಿಸಿದ್ದರು.
ಈಗಾಗಲೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೆ ಸಂಬಂಧಪಟ್ಟಂತೆ ಅಭ್ಯರ್ಥಿಗಳ ಪಟ್ಟಿಯನ್ನು ನಾವು ತಯಾರಿಸಿದ್ದೇವೆ. ಪ್ರತಿಯೊಂದು ಕ್ಷೇತ್ರದಲ್ಲಿ ಎರಡು ಮೂರು ಜನ ಅಭ್ಯರ್ಥಿಗಳು ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ ಡಿಸೆಂಬರ ಅಂತ್ಯ ದೊಳಗೆ ಜಿಲ್ಲೆಯ ಅಭ್ಯರ್ಥಿ ಗಳ ಪಟ್ಟಿ ಪೈನಲ್ ಮಾಡಲಾಗುವುದು ಎಂದರು.
ಎಲ್ಲರೂ ಅವರ ಸ್ವಹಿತಾಸಕ್ತಿಯಿಂದ ಆಸ್ತಿ ಅಂತಸ್ತು ಮಾಡಿಕೊಳ್ಳುತ್ತಾ ಇದ್ದಾರೆ. ಜನಪರವಾಗಿ ಯಾವ ಪಕ್ಷವೂ ಕೆಲಸ ಮಾಡುತ್ತಿಲ್ಲ. ಜನರ ಪರವಾಗಿ ಕೆಲಸ ಮಾಡುವ ಪಕ್ಷ ಎಂದರೆ ಅದು ಕೇವಲ ಆಮ್ ಆದ್ಮಿ ಪಕ್ಷ. ಆಮ್ ಆದ್ಮಿ ಪಕ್ಷ ಇಡೀ ದೇಶದಲ್ಲಿ ಒಳ್ಳೆಯ ಕಾರ್ಯಕ್ರಮ ಮಾಡಲು ಹೊರಟಿದೆ. ಇದನ್ನು ಜನ ಗಮನಿಸುತ್ತಿದ್ದಾರೆ. ಆಮ್ ಆದ್ಮಿ ಪಕ್ಷವನ್ನು ಜನ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನಮಗಿದೆ.
ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ ಶಿರಸಿ ಸಿದ್ದಾಪುರದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನ ಮಾಡಿ ರೈತರಿಗೆ ನೀರಿನ ಅನುಕೂಲ ಮಾಡಿಕೊಡುವುದು. ಇಸ್ರೇಲ್ ಪದ್ಧತಿಯಲ್ಲಿ ಕೃಷಿ ಮಾಡುವ ರೈತರಿಗೆ ಅನುಕೂಲ ಒದಗಿಸಿ ಕೊಡುವುದು, ಕೃಷಿ ಮಾರುಕಟ್ಟೆ ವ್ಯವಸ್ಥೆ ಮಾಡುವುದು. ಗ್ರಾಮೀಣ ಮತ್ತು ಪಟ್ಟಣದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. ರೈತರಿಗೆ ಉತ್ತಮ ರೀತಿಯಲ್ಲಿ ಕೃಷಿ ಮಾಡಲು ಪ್ರತಿ ಹಳ್ಳಿಯಲ್ಲೂ ತಜ್ಞ ವಿಜ್ಞಾನಿಗಳಿಂದ ತರಬೇತಿಯನ್ನು ಕೊಡಿಸುವುದು, ತೋಟಗಾರಿಕೆ ಹೈನುಗಾರಿಕೆ ಜೇನು ಸಾಕಾಣಿಕೆಗೆ ಪ್ರತಿಯೊಬ್ಬರು ಸ್ವಾವಲಂಬಿಗಳಾಗಿ ಬದುಕುವುದಕ್ಕೆ ಸ್ವಂತ ಉದ್ಯೋಗಕ್ಕೆ ಉತ್ತೇಜನ ನೀಡುವುದು, ಉತ್ತಮವಾದ ಪೊಲೀಸ್ ವ್ಯವಸ್ಥೆಯನ್ನು ಮಾಡುವುದು ಪ್ರತಿ ಮನೆಗಳಿಗೆ ಸರ್ಕಾರಿ ಸೇವೆ ಸಲ್ಲಿಸುವುದು ಕ್ಷೇತ್ರದಲ್ಲಿ ಅಕ್ರಮ ಚಟುವಟಿಕೆ ಸರಾಯಿ ಮಾರಾಟ ಇಸ್ಪೀಟ್ ಓಸಿಯನ್ನು ನಿಲ್ಲಿಸುವಂತ ಮಾಡುವಂತ ನನ್ನ ವಯಕ್ತಿಕ ಅಭಿಪ್ರಾಯವನ್ನು ನಾನು ವ್ಯಕ್ತಪಡಿಸುತ್ತಿದ್ದೇನೆ ಎಂದರು.
ಜಿಲ್ಲಾಧ್ಯಕ್ಷ ಬಾಲಕೃಷ್ಣ ನಾಯ್ಕ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ರನ್ನಾಗಿ ಮಹ್ಮದ್ ಕಬೀರ್ ಶಿರಸಿ, ಜಿಲ್ಲಾ ಸಾಮಾಜಿಕ ಜಾಲತಾಣಕ್ಕೆ ಆಶೀಪ್ ಸಾಬ್, ವಿಧಾನಸಭಾ ಕ್ಷೇತ್ರವಾರು ಶಿರಸಿ-ಸಿದ್ದಾಪುರಕ್ಕೆ ವೀರಭದ್ರ ನಾಯ್ಕ ಮತ್ತು ಮನೋಹರ ನಾಯ್ಕ , ಯಲ್ಲಾಪುರ ಕ್ಷೇತ್ರಕ್ಕೆ ವೀರಭದ್ರಯ್ಯ ಸಿದ್ದಲಿಂಗಯ್ಯ ಗೌಡ, ಹಳಿಯಾಳ ಕ್ಷೇತ್ರಕ್ಕೆ ಗುರು ದೀಪ್ ಸಿಂಗ್ ಸಂದು, ಕಾರವಾರ ಕ್ಷೇತ್ರಕ್ಕೆ ಆಸಿಫ್ ಪ್ರಭಾಕರ್ ಗಾವ್ಕಾರ್, ಕುಮಟಾ ಕ್ಷೇತ್ರಕ್ಕೆ ನಾಗರಾಜ್ ಸೇ ಟ್ ಹಾಗೂ ಭಟ್ಕಳ್ ಕ್ಷೇತ್ರಕ್ಕೆ ಅಬ್ದುಲ್ ನಾಸಿರ್ ಶೇಕ್ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕ ಅಧ್ಯಕ್ಷ ಲಕ್ಷ್ಮಣ್ ನಾಯ್ಕ ಮುಖಂಡರಾದ ಮಹ್ಮದ್ ಕಬೀರ್, ಆಕಾಶ್ ಕೊಂಡ್ಲಿ, ಸರಸ್ವತಿ ಲಕ್ಷ್ಮಣ್ ನಾಯ್ಕ,ಐಸಿ ನಾಯ್ಕ್ ,ಸಾಮಾಜಿಕ ಜಾಲತಾಣದ ಆಸಿಫ್, ರಾಘವೇಂದ್ರ ಕಾವಂಚೂರು ಸೇರಿದಂತೆ ಹಲವರು ಉಪಸಿತರಿದ್ದರು.

