

ಕಲಬುರಗಿ ಚಿತ್ತಾಪುರದ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಗುರು ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಜನೇವರಿ ೬ ರಿಂದ ಮಂಗಳೂರಿನಿಂದ ಬೆಂಗಳೂರಿನ ವರೆಗೆ ಐತಿಹಾಸಿಕ ಪಾದಯಾತ್ರೆ ನಡೆಯಲಿದೆ.
ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನ ಅಭಿವೃದ್ಧಿ ನಿಗಮ ಸ್ಥಾಪನೆ, ಈಡಿಗ ಸಮೂದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನಗಳ ಬೇಡಿಕೆ ಸೇರಿದಂತೆ ಒಟ್ಟೂ ಹತ್ತು ಮೌಲ್ಯಯುತ ಬೇಡಿಕೆಗಳ ಹಿನ್ನೆಲೆಯಲ್ಲಿ ನಡೆಯಲಿರುವ ಐತಿಹಾಸಿಕ ಪಾದಯಾತ್ರೆ ಸಂಬಂಧ ಚರ್ಚಿಸಲು ಡಿ.೭ ರ ಬುಧವಾರ ಸಿದ್ಧಾಪುರದ ಲಯನ್ಸ್ ಬಾಲಭವನದಲ್ಲಿ ಪೂರ್ವಬಾವಿ ಸಿದ್ಧತಾ ಸಭೆ ನಡೆಯಲಿದೆ.
ಹಿಂದುಳಿದ ಈಡಿಗ ಉಪಪಂಗಡಗಳ ಸರ್ವತೋಮುಖ ಅಭಿವೃದ್ಧಿಗೆ ಆಗ್ರಹಿಸಲು ನಡೆಯುವ ಈ ಪಾದಯಾತ್ರೆಯ ಸಭೆಗೆ ಸಮೂದಾಯದ ಪ್ರಮುಖರು ಸೇರಿದಂತೆ ಎಲ್ಲರೂ ಪಾಲ್ಗೊಳ್ಳಲು ಪಾದಯಾತ್ರೆ ಸಮೀತಿ ಅಧ್ಯಕ್ಷ ಸಮಾಜಮುಖಿ ಕನ್ನೇಶ್ ಕೋಲಶಿರ್ಸಿ ಮತ್ತು ಗೌರವಾಧ್ಯಕ್ಷ ವೀರಭದ್ರನಾಯ್ಕ ಕೋರಿದ್ದಾರೆ.

