

ಕಾರವಾರ: ತಂದೆಯೊಂದಿಗೆ ಸೇರಿ ಹೆತ್ತ ತಾಯಿ ಕೊಂದ ಮಗ
ಕುಡಿಯಲು ಹಣ ನೀಡದ್ದಕ್ಕೆ ಹೆತ್ತ ತಾಯಿಯನ್ನು ಮಗನೇ ತಂದೆಯೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಕುಮಟಾ ತಾಲೂಕಿನ ಕೂಜಳ್ಳಿಯಲ್ಲಿ ನಡೆದಿದೆ.
ಕುಮಟಾ ತಾಲೂಕಿನ ಕೂಜಳ್ಳಿಯ ವಿಶ್ವೇಶ್ವರ ಭಟ್ ಮತ್ತು ಮಗ ಮಧುಕರ ಭಟ್ ಸೇರಿ ಸ್ವಂತ ಪತ್ನಿಯರನ್ನು ಕೊಲೆ ಮಾಡಿರುವುದಾಗಿ ವರದಿಯಾಗಿದೆ. ಈ ಇಬ್ಬರು ದುಷ್ಟ ತಂದೆ ಮಕ್ಕಳು ಕುಡಿತದ ದಾಸರಾಗಿ ೬೫ ವರ್ಷಗಳ ಗೀತಾ ಭಟ್ ಮತ್ತು ಇನ್ನೊಬ್ಬ ಮಹಿಳೆಯನ್ನು ಕೊಲೆ ಮಾಡಿರುವುದಾಗಿ ಪ್ರಾಥಮಿಕ ಮಾಹಿತಿ ದೊರೆತಿದೆ.
ಇಬ್ಬರನ್ನೂ ಪೊಲೀಸ್ ರು ವಶಕ್ಕೆ ಪಡೆದಿದ್ದು ಇವರಿಬ್ಬರೂ ಕುಡಿತದ ಕಾರಣಕ್ಕೆ ಈ ದುಷ್ಕೃತ್ಯ ಎಸಗಿದರೋ ಅಥವಾ ಅನ್ಯ ಕಾರಣಗಳಿವೆಯೋ ಎನ್ನುವ ಬಗ್ಗೆ ತನಿಖೆ ಮುಂದುವರಿದಿದೆ.

