

ಸಿದ್ದಾಪುರ: ವಿಧ್ಯಾರ್ಥಿಗಳು ಎದುರಿಸುತ್ತಿರುವ ವಿವಿಧ ಸಮಸ್ಯೆ ಗಳನ್ನು ಬಗೆಹರಿಸುವಂತೆ ಆಗ್ರಹಿಸಿ ಡಿಸೆಂಬರ್ 17ರಂದು ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ( ಏನ್. ಎಸ್. ಯು. ಐ.) ನಿಂದ ಕಾಲೇಜು ಬಂದ್ ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಹೋರಾಟ ಕ್ಕೆ ಬೆಂಬಲ ನೀಡುವಂತೆ ಸ್ಟೂಡೆಂಟ್ ಯೂನಿಯನ್ ಆಫ್ ಇಂಡಿಯಾ ಜಿಲ್ಲಾಧ್ಯಕ್ಷ ವಿಶ್ವ ಗಜಾನನ ಗೌಡ ಇಟಗಿ ಕೊರಿದ್ದಾರೆ. ಅವರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.
ಪರೀಕ್ಷೆ ಫಲಿತಾಂಶ ವಿಳಂಬ ಮಾಡಬಾರದು, ವಿಧ್ಯಾರ್ಥಿ ವೇತನ ನೀಡಬೇಕು, ಸಾರಿಗೆ ವ್ಯವಸ್ಥೆ ಹಾಗೂ ಬಸ್ ಪಾಸ್ ನೀಡಬೇಕು, ಸರಕಾರಿ ಕಾಲೇಜಿನಲ್ಲಿ ರುವ ಹೆಚ್ಚುವರಿ ಶುಲ್ಕ ಕಡಿಮೆ ಮಾಡುವಂತೆ ಆಗ್ರಹಿಸಿ ಬಂದ್ ನಡೆಸಲಾಗುವುದು ಇದಕ್ಕೆ ಜಿಲ್ಲೆಯಾದ್ಯಂತ ಇರುವ ಪದವಿ ಪೂರ್ವ, ಪದವಿ , ಪಾಲಿಟೆಕ್ನಿಕ್, ಐಟಿಐ, ಇಂಜಿನಿಯರ್,ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಬೆಂಬಲ ಸೂಚಿಸುವಂತೆ ವಿನಂತಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಮಹೇಶ್ ಗೌಡ, ಕಾರ್ಯ ಕರ್ತ ಉಮೇಶ ನಾಯ್ಕ ಉಪಸ್ಥಿತರಿದ್ದರು.

