

ಸಿದ್ದಾಪುರ : ಯಕ್ಷಗಾನ ಕಲೆ ಮತ್ತು ಕಲಾವಿದರ ಕುರಿತಾಗಿ ನಾಡು ಹೊರನಾಡುಗಳಲ್ಲಿ ಗೌರವ ಭಾವನೆ ಇದೆ. ಪೌರಾಣಿಕ ಮೌಲ್ಯಗಳನ್ನು ಜನಸಾಮಾನ್ಯರಿಗೂ ತಲುಪಿಸಿ ಅವರಲ್ಲಿ ಸಂಸ್ಕಾರವನ್ನು ಬಿತ್ತುವ ಶಕ್ತಿ ಯಕ್ಷಗಾನಕ್ಕಿದೆ ಎಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಹೇಳಿದರು ಅವರು ತಾಲೂಕಿನ ಕಾಳೇನಲ್ಲಿ ಕ್ರಾಸ್ ಹತ್ತಿರದ ಶ್ರೀ ಮೃತ್ಯುಂಜಯ ದೇವಸ್ಥಾನದ ಆವರಣದಲ್ಲಿ ಶ್ರೀ ಸಿಗಂದೂರೇ ಶ್ವರಿ ಯಕ್ಷಗಾನ ಮಂಡಳಿ ಆಶ್ರಯದಲ್ಲಿ ನಡೆದ ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಮಾತನಾಡಿದರು.

ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕ್ರತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು ಯಕ್ಷಗಾನದಿಂದಲೇ. ಉಳಿಕ ಕಲೆ ಕನ್ನಡವನ್ನು ನಾಶ ಮಾಡುತ್ತಿದೆ. ಅಲ್ಲದೇ ಈ ಕಲೆ ಸಾಂಸ್ಕ್ರತಿಕ ಸೊಗಡನ್ನು ಹೆಚ್ಚಿಸುತ್ತಿದ್ದು ಜಾಗತೀಕ ಮಟ್ಟದಲ್ಲಿಯೂ ಇದರ ಕಂಪನ್ನು ಪಸರಿಸಿದೆ. ಕಲೆ ಹಾಗೂ ಕಲಾವಿದರನ್ನು ಗೌರವಿಸೋಣ ಎಂದು ಹೇಳಿದರು .
ಈ ಕಾರ್ಯಕ್ರಮದಲ್ಲಿ ಸಿಗಂದೂರು ಮೇಳದ ಪ್ರಧಾನ ಭಾಗ್ವತರಾದ ರಾಮಚಂದ್ರ ನಾಯ್ಕ ಹೆಮ್ಮನಬೈಲ ರನ್ನು ಸನ್ಮಾನಿಸಿ ಗೌರವಿಸಲಾಯಿತು ಇವರು ರಚಿಸಿದ ನಾಗ ಚೌಡೇಶ್ವರಿ ಯಕ್ಷಗಾನ ಕಥಾ ಭಾಗ ಬಹು ಮೆಚ್ಚುಗೆಯ ಪಾತ್ರದೊಂದಿಗೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಅನೇಕ ಭಾಗಗಳಲ್ಲಿ ಪ್ರಸಿದ್ಧವಾಗಿದೆ.


ಈ ಸಂದರ್ಭದಲ್ಲಿ ನಾಣಿಕಟ್ಟಾ ಸೊಸೈಟಿ ಅಧ್ಯಕ್ಷ ಎನ್ ಬಿ ಹೆಗಡೆ, ಸುಭಾಷ ನಾಯ್ಕ ಕಾನಸೂರು, ನಟರಾಜ್ ನಾಣಿಕಟ್ಟಾ, ರಮೇಶ್ ನಾಯ್ಕ ನಾಣಿಕಟ್ಟಾ, ಆದರ್ಶ ನಾಯ್ಕ, ಶ್ರವಣ ಕುಮಾರ್ ಹೊಸೂರು, ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






