

ಅಪ್ಪು ಅಭಿಮಾನಿ ದೇವರಿಗಾಗಿ ಜೀವಿಸಿ ದೇವರಾಗಿ ದಾಖಲಾದವರು, ಅವರ ಅಭಿಮಾನಿಗಳು ಅಪ್ಪುಗಾಗಿ ಎನನ್ನೂ ಮಾಡಲು ಸಿದ್ಧ ಈಗ ಇದು ಹೊಸ ಸರದಿ. ಬೆಂಗಳೂರು ಮಿಡ್ನೈಟ್ ಮ್ಯಾರಥಾನ್ ನಲ್ಲಿ ದಿವ್ಯಾಮಂಜುನಾಥ ನಾಯ್ಕ ೭-೩೦ ಗಂಟೆಗಳ ವರೆಗೆ ನಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಈ ದಾಖಲೆ ಅಪ್ಪು ಯಾನೆ ದಿ. ಪುನೀತ್ ರಾಜ್ ಕುಮಾರರಿಗೆ ಅರ್ಪಣೆ ಎಂದಿದ್ದಾರೆ. ಅಂದಹಾಗೆ ಇವರ ಪತಿ ಶಿವಗುರು ಅಲಿಯಾಸ್ ರಾಜ್ ಗುರು ಕನ್ನಡ ಚಿತ್ರರಂಗದ ಯುವ ನಿರ್ಧೇಶಕ.
ದಿವ್ಯ ಮಂಜುನಾಥ್ ನಾಯ್ಕ್.. ಮೂಲತಹ ಹೊನ್ನಾವರದವರಾದ ಇವರು, ದಿನಾಂಕ 10.12.2022 ರಂದು ರಾತ್ರಿ 11 ರಿಂದ ಬೆಳಗ್ಗೆ 6:30 ವರೆಗೂ 42 km ಮಿಡ್ ನೈಟ್ ಮ್ಯಾರಥಾನ್ ವೈಟ್ಫೀಲ್ಡ್ ಕೆಪಿಟಿಓ ಸ್ಥಳದಲ್ಲಿ ಓಡಿದ್ದಾರೆ.. ಇದನ್ನು ಇವರು ಅಪ್ಪು ಅಭಿಮಾನಿಯಾಗಿ ಅಪ್ಪು ಅವರಿಗೆ ಅರ್ಪಣೆ ಮಾಡಿದ್ದಾರೆ, ತಮ್ಮ ಟೀ ಶರ್ಟ್ ನಲ್ಲಿ ಅಪ್ಪು ಅವರ ಭಾವಚಿತ್ರವನ್ನು ಮುದ್ರಿಸಿಕೊಂಡು ಅವರ ಅಭಿಮಾನವನ್ನು ಅವರು ತೋರ್ಪಡಿಸಿದ್ದಾರೆ 🙏

