

ವೃತ್ತಿಯಲ್ಲಿ ಶಿಕ್ಷಕ ಮಾಡೋದೆಲ್ಲಾ ಕಳ್ಳತನ.. 18 ದೇವಸ್ಥಾನದಲ್ಲಿ ಕನ್ನ ಹಾಕಿದವರು ಕೊನೆಗೂ ಅಂದರ್
ವೃತ್ತಿಯಲ್ಲಿ ಶಿಕ್ಷಕನಾದ ಹಾವೇರಿ ಜಿಲ್ಲೆ ಲಿಂಗದೇವರಕೊಪ್ಪ ಗ್ರಾಮದ ವಸಂತಕುಮಾರ ಶಿವಪ್ಪ ಹಾಗೂ ರಾಣೆಬೆನ್ನೂರು ತಾಲೂಕಿನ ಗುಡ್ಡದ ಬೇವಿನಹಳ್ಳಿಯ ಸಲೀಮ ಜಮಾಲಸಾಬ ಕಮ್ಮಾರ ಎಂಬ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಯಲ್ಲಾಪುರದ ಮಂಚೀಕೇರಿ ದೇವಾಲಯವೊಂದರ ಕಳ್ಳತನದ ಜಾಡು ಹಿಡಿದು ತನಿಖೆ ನಡೆಸಿದ ಉತ್ತರ ಕನ್ನಡ ಪೊಲೀಸರಿಗೆ ಆಶ್ಚರ್ಯ ಕಾದಿತ್ತು. ಶಿಕ್ಷಕನೊಬ್ಬ ತನ್ನ ಸಹಚರನೊಂದಿಗೆ ಸೇರಿ ಶಿವಮೊಗ್ಗ,ಉತ್ತರ ಕನ್ನಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಸರಣಿ ಕಳ್ಳತನ ಮಾಡಿದ್ದು ಪತ್ತೆಯಾಯಿತು.
ಕಳೆದ ಮೂರು ವರ್ಷಗಳಿಂದ ಕಳ್ಳತನ ಮಾಡಿ ಐಶಾರಾಮಿಯಾಗಿ ಬದುಕುತಿದ್ದ ಈ ಖದೀಮರನ್ನು ತನಿಖೆಗೆ ಒಳಪಡಿಸಿದಾಗ ಮೂರು ಜಿಲ್ಲೆಗಳ ೧೮ ದೇವಸ್ಥಾನಗಳಲ್ಲಿ ಕಳ್ಳತನ ಮಾಡಿರುವ ವಾಸ್ತವವನ್ನು ಈ ಕಳ್ಳರು ಒಪ್ಪಿಕೊಂಡಿದ್ದಾರೆ.
(ರಾಜ್ಯದಲ್ಲಿ ಮತ್ತೆ ಬಿಜೆಪಿ ಹೆಚ್ಚು ಸೀಟುಗಳೊಂದಿಗೆ ಅಧಿಕಾರಕ್ಕೆ ಬರುತ್ತದೆ : ಸಚಿವ ಎಂಟಿಬಿ ನಾಗರಾಜ್
ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದವರಿಗೆಲ್ಲ ಟಿಕೇಟ್ ಸಿಕ್ಕೇ ಸಿಗುತ್ತೆ ಅನ್ನೋ ವಿಶ್ವಾಸ ಇದೆ. ಯಾವುದೇ ಕಾರಣಕ್ಕೂ ನಾವ್ಯಾರು ಕಾಂಗ್ರೆಸ್ಗೆ ಹೋಗುವ ಪ್ರಶ್ನೆ ಇಲ್ಲ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಟಿಕೆಟ್ ಪಡೆಯುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.)
