

ಕರ್ನಾಟಕ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಡಾಲ್ಫಿನ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ವಿಶಿಷ್ಟ ಯೋಜನೆಯನ್ನು ಹೊರತಂದಿದೆ.

ಕಾರವಾರ: ಕರ್ನಾಟಕ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ಡಾಲ್ಫಿನ್‌ಗಳನ್ನು ಉಚಿತವಾಗಿ ವೀಕ್ಷಿಸಲು ಅನುವು ಮಾಡಿಕೊಡುವ ವಿಶಿಷ್ಟ ಯೋಜನೆಯನ್ನು ಹೊರತಂದಿದೆ.
ಕಾರವಾರದ ದೇವಬಾಗ್ ಬಳಿಯ ಕಾಳಿ ನದಿಯಲ್ಲಿ ಡಾಲ್ಫಿನ್ ಜಂಪ್ ನೋಡಬಹುದು. ಪ್ರವಾಸೋದ್ಯಮಇಲಾಖೆಯು ಸಾಗರ ಮತ್ತು ಕರಾವಳಿ ಪರಿಸರ ವ್ಯವಸ್ಥೆ ಕೋಶದ ಮೂಲಕ, ದೇವಬಾಗ್‌ನಲ್ಲಿನ ಒಂದು ನಿರ್ದಿಷ್ಟ ಸ್ಥಳದಿಂದ ಸಮುದ್ರದಲ್ಲಿರುವ ಡಾಲ್ಫಿನ್ ನೋಡಲು ಅವಕಾಶ ನೀಡಲು ನಿರ್ಧರಿಸಿದೆ, ಈ ಪ್ರಯೋಗ ದೇಶದಲ್ಲೇ ಮೊದಲು ಎನ್ನಲಾಗಿದೆ.
ಡಾಲ್ಫಿನ್‌ಗಳು ಆರೋಗ್ಯಕರ ಪರಿಸರ ವ್ಯವಸ್ಥೆಯ ಸೂಚಕಗಳಾಗಿವೆ. ಅವು ಶುದ್ಧ ನೀರಿನಲ್ಲಿ ಬೆಳೆಯುುತ್ತವೆ ಈ ಪ್ರಸ್ತಾವನೆಯು ಹೊಸದಾಗಿದೆ.
ಸಾಮಾನ್ಯವಾಗಿ, ಜನರು ಕಾಳಿ ನದಿಯ ಸೇತುವೆಯಿಂದ ಡಾಲ್ಫಿನ್‌ಗಳನ್ನು ವೀಕ್ಷಿಸುತ್ತಾರೆ. ನಮ್ಮ ಕರಾವಳಿ ಮತ್ತು ಸಾಗರ ಪರಿಸರ ವ್ಯವಸ್ಥೆ ಕೋಶವು ದೇವಬಾಗ್‌ನಲ್ಲಿ ಡಾಲ್ಫಿನ್‌ಗಳನ್ನು ನೋಡುವ ವೇದಿಕೆಯನ್ನು ನಿರ್ಮಿಸಲು ನಿರ್ಧರಿಸಿದೆ ಎಂದು ಉತ್ತರ ಕನ್ನಡ ಜಿಲ್ಲೆ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ತಿಳಿಸಿದ್ದಾರೆ.
ಸದ್ಯ ದೇವಬಾಗ್ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ ಪ್ರವಾಸಿಗರನ್ನು ದೋಣಿಯಲ್ಲಿ ಕರೆದೊಯ್ಯುವ ಮೂಲಕ ಪ್ರತಿದಿನ ಎರಡು ಬಾರಿ ‘ಡಾಲ್ಫಿನ್ ಸಫಾರಿ’ ಆಯೋಜಿಸುತ್ತದೆ. ಆದಾಗ್ಯೂ, ಸ್ಥಳೀಯರು ಡಾಲ್ಫಿನ್‌ಗಳನ್ನು ನೋಡುವುದು ಅವರಿಗೆ ಅಸಾಮಾನ್ಯ ಸಂಗತಿಯಲ್ಲ ಎಂದು ಹೇಳುತ್ತಾರೆ.
ನಾನು ಇಲ್ಲಿ ಡಾಲ್ಫಿನ್‌ಗಳನ್ನು ಅತ್ಯಂತ ಸಮೀಪದಿಂದ ನೋಡಿದ್ದೇನೆ. ಕೆಲವೊಮ್ಮೆ ಗುಂಪುಗಳಲ್ಲಿ ಮತ್ತು ಕೆಲವೊಮ್ಮೆ ಒಂಟಿಯಾಗಿರುತ್ತವೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಾಗರ ಜೀವಶಾಸ್ತ್ರ ವಿಭಾಗದ (ಎಂಬಿಡಿ) ವಿದ್ಯಾರ್ಥಿ ಕಿರಣ್ ವಾಸುದೇವಮೂರ್ತಿ ಹೇಳಿದ್ದಾರೆ.
ಹಂಪ್‌ಬ್ಯಾಕ್ ಡಾಲ್ಫಿನ್ ಅನ್ನು ಸಾಮಾನ್ಯವಾಗಿ ನೋಡಬಹುದು ಮತ್ತು ಕೆಲವೊಮ್ಮೆ ಫಿನ್‌ಲೆಸ್ ಪೋರ್ಪೊಯಿಸ್ ಅನ್ನು ಕಾಣಬಹುದು. ಎರಡೂ ಆಳವಿಲ್ಲದ ನೀರಿನಲ್ಲಿ ಬೆಳೆಯುತ್ತವೆ ಎಂದು ಇನ್ನೋರ್ವ ಸಂಶೋಧಕ ಸೂರಜ್ ಎಸ್ ಪೂಜಾರ್ ತಿಳಿಸಿದ್ದಾರೆ.
ಪ್ಯಾನ್-ಟ್ರಾಪಿಕಲ್ ಸ್ಪಾಟೆಡ್ ಡಾಲ್ಫಿನ್ ಮತ್ತು ಸ್ಪಿನ್ನರ್ ಡಾಲ್ಫಿನ್‌ನಂತಹ ಕೆಲವು ಅಪರೂಪದ ತಳಿಗಳಿವೆ ಎಂದು ಸಹಾಯಕ ಪ್ರೊಫೆಸರ್ ಶಿವಕುಮಾರ ಹರಗಿ ಹೇಳಿದ್ದಾರೆ. (kpc)


