

ಬೆಂಗಳೂರಿನಲ್ಲಿ ನೆಲೆಸಿ ಉತ್ತರ ಕನ್ನಡವನ್ನು ಉಸಿರಾಡುತಿದ್ದ ದಾಂಡೇಲಿಯ ಹೇಮಂತ ನಾಯ್ಕ ನಿಧನರಾದ ಸುದ್ದಿ ಬಂದಿದೆ. ಸುದ್ದಿ,ವರ್ತಮಾನ,ಮಾಹಿತಿ,ತಂತ್ರಜ್ಞಾನ,ವಿಜ್ಞಾನಗಳ ಬಗ್ಗೆ ಮಾಹಿತಿಪೂರ್ಣವಾಗಿ ಬರೆಯುತಿದ್ದ ಯುವ ವಿಜ್ಞಾನಿ ಹೇಮಂತ ನಾಯ್ಕ ಕಿಡ್ನಿ ತೊಂದರೆಯಿಂದ ಇಂದು ಮುಂಜಾನೆ ನಿಧನರಾದ ಬಗ್ಗೆ ಮೂಲಗಳು ಸಮಾಜಮುಖಿ ಡಾಟ್ ನೆಟ್ ಗೆ ಖಚಿತಪಡಿಸಿವೆ.
ಬುದ್ಧಿವಂತಿಕೆ,ನಿಷ್ಠೂರತೆ,ನಿಖರತೆಗಳಿಗೆ ಹೆಸರಾಗಿದ್ದ ಹೇಮಂತನಾಯ್ಕ ಉತ್ತರ ಕನ್ನಡ ಜಿಲ್ಲೆಯ ಮೊದಲ ತಲೆಮಾರಿನ ಮಾಹಿತಿ ತಂತ್ರ ಜ್ಞರಾಗಿ ಹೆಸರು ಮಾಡಿ ಬೆಂಗಳೂರಿನಲ್ಲಿ ನೆಲೆಸಿದ್ದರು.

