

ಒಂದು ಫೋಟೋ ನೋಡಿದೆ! ಅದು ಪ್ಲೇಟೊನದೋ? ಚಾರ್ಲಿಯದೋ? ಉಹೂ ಇವರಿಬ್ಬರದೂ ಅಲ್ಲ ಅದು, ಅದೇ ಲಿಂಕನ್ ಅವರದು ನನಗೆ ಹೀಗೇಕಾಗುತ್ತಿದೆ? ಪ್ಲೇಟೋನ ಕನಸಿನ ರಾಜ್ಯ ಓದಿದ ನಮಗೆ ಪ್ಲೋಟೋ ಪಾಠವಾಗಿ ಕಾಡುವಷ್ಟು ಚಿತ್ರವಾಗಿ ಕಾಡಲಾರ?
ಆರ್ಕಿಮಿಡೀಸ್, ಸ್ಟೀಲಬರ್ಗ್, ಸೇಕ್ಸಫಿಯರ್, ಗೆಲಿಲಿಯೋ, ಮಾಂಟೋ? ಶೆಲ್ಲಿ,ಸೀಜರ್ ಒಬ್ಬರೂ ಚಿತ್ರಪಟ ವಾಗಿ ದಕ್ಕದವರೂ ಅವರ ಚಿಂತನೆಯಿಂದ ಎದೆಗಿಳಿಯುತ್ತಾರೆ. ಬಸವಣ್ಣನಂಥ ಬಸವಣ್ಣ ಆರೋಪಕ್ಕೆ ತುತ್ತಾಗಿರಲಿಲ್ಲವೆ? ಚನ್ನಬಸವಣ್ಣ ಉಳವಿಯತ್ತ ಓಡಿ ಬಂದು ಅಡಗಿಕೊಳ್ಳಲಿಲ್ಲವೆ? ಜೇಸಸ್, ಟಾಲ್ಸ್ಟಾಯ್,ಇಬ್ನತೂತ,ಮಾರ್ಕೆಜ್,ನೀಷೆ,ಬ್ರೆಕ್ಟ್ ಎಷ್ಟೊಂದು ಸಾಧಕರು ನಮ್ಮನ್ನು ಕಾಡಲೆಂದೇ ಬದುಕಿಹೋದರು.
ಅಮೇರಿಕಾದ ಸೆನೆಟ್ ನಲ್ಲಿ ಚಪ್ಪಲಿಹೊಲಿಯುವವನ ಮಗ ಎಂದು ಮೂದಲಿಸಿಕೊಂಡ ಲಿಂಕನ್ ಡೊಂಟ್ ಕೇರ್ ಮಾಡಿರಲಿಲ್ಲವೆ? ಇದೇ ಸಂಪ್ರದಾಯ,ಸಂಸ್ಕಾರಕ್ಕೆ.
ಒನ್ಸ ಅಗೇನ್… ನನಗೆ ಕಾಡುತ್ತಿರುವುದು ನಾನು ಹೇಳಹೊರಟಿರುವುದು ಒಬ್ಬರೊಳಗೆ ಒಂದಕ್ಕಿಂತ ಹೆಚ್ಚು ಕತೆಗಳಿರುತ್ತವೆ ಎಂಬುದನ್ನು.
ಕಿರಾಣಿ ಅಂಗಡಿಯ ಸ್ನೇಹಿತ ತಾನು ನಟ ದರ್ಶನ್ ಜೊತೆ ಜಿಮ್ ಮಾಡುತಿದ್ದುದನ್ನು ಹೇಳಿದ, ಹೋಟೆಲ್ ನ ಕುಮಾರ ತಾನು ಕುಡಿಯದಿರುವುದಕ್ಕೆ ಇರುವ ಪ್ರಬಲ ಕಾರಣ ಹೇಳಿದ.
ಗಾಂಧಿ ಹುಟ್ಟುಫಕೀರ ಎಂದು ಹೇಳಿಕೊಳ್ಳದೆ ಉಟ್ಟ ಬಟ್ಟೆ ಬಿಚ್ಚಿಟ್ಟು ಅರೆ ಬತ್ತಲೆ ಫಕೀರನಾಗಿ ದೇಶ ಸುತ್ತಿದನಲ್ಲ ಅದಕ್ಕೇನಾದರೂ ಸ್ವಾರ್ಥವಿತ್ತೆ? ಬೆತ್ತಲೆಫಕೀರ ಫೈಜ್ ಬರೆದು ತೀರಿದನಲ್ಲ ಅದಕ್ಕೆನಾದರೂ ಹಠವಿರದಿದ್ದರೆ ಸಾಧ್ಯವಿತ್ತೆ??
ಜನ ಪ್ರತಿಷ್ಠೆಗಾಗಿ, ಅಹಂಕಾರಕ್ಕಾಗಿ,ದ್ವೇಶ,ಹಠ-ಛಲಗಳಿಗಾಗಿ ಬದುಕುತ್ತಾರೆ ಎಂದರಲ್ಲ ಲಂಕೇಶ್ ಅವರ ಮಾತಿನಲ್ಲೇನಾದರೂ ಲವಲೇಶವಾದರೂ ಕಲ್ಮಶವಿತ್ತಾ?
ಬಡ ಜೋಗಿಯ ಹಾಡು,ಹಿತ್ತಲ ಹೂವು ಯಾರ ಹಂಗಿಗೆ ಹಂಬಲಿಸುತ್ತವೆಯಾ?
ತೇಜಸ್ವಿ,ಕುವೆಂಂಪು ಬಗ್ಗೆ ಅವರ ನೆರೆಹೊರೆಯವರೇ ಮೂಗು ಮುರಿದಿದ್ದರು ಈ ಅಪ್ಪ-ಮಗ ಕನ್ನಡಕ್ಕೆ ಕೊಟ್ಟದ್ದನ್ನು ಕನ್ನಡದ ಯಾವೊಬ್ಬ ಅಪ್ಪ ಮಗ ಕೊಟ್ಟಿದ್ದಾರೆಯೆ? ಕ್ಷಮಿಸಿ ರಾಜ್ ಕುಮಾರ ಮತ್ತವರ ಕುಟುಂಬ ಬಿಟ್ಟು.
ನನ್ನ ಕೋಲಶಿರ್ಸಿ ಕ್ರಾಸ್ ಗೂ ತೇಜಸ್ವಿಯವರ ಜುಗಾರಿಕ್ರಾಸ್ ಗೂ ಎಲ್ಲಿದೆಲ್ಲಿಯ ಸಂಬಂಧ? ಆದರೆ ನಾವೆಲ್ಲ ಚಿದಂಬರ ರಹಸ್ಯದಂತೆ ಒಟ್ಟಾಗಿ ಅಲ್ಲದಿದ್ದರೂ ಬಿಡಿಯಾಗಿ, ಇಡಿಯಾಗಿ ಕ್ರಾಂತಿ ಮಾಡಲು ಹೊರಟವರಲ್ಲವೆ?
ವ್ಯಾವಹಾರಿಕ ಬುದ್ಧಿವಂತರಿಗೆ ಇದು ಸಾಧ್ಯವೆ?
ಒಟ್ಟಾರೆ ಕ್ರಾಂತಿಯಾಗಬೇಕು ಅಷ್ಟೇ.
ತ್ಯಾಗಲಿ ಸೊಸೈಟಿಯ ರೈತರು ಸರ್ಕಾರದ ಏಜೆಂಟ್ ಗಳಾದ ವಿಮಾ ಕಂಪನಿಯನ್ನೇ ಹೆದರಿಸಿದರು. ನಮ್ಮ ಜನಪ್ರತಿನಿಧಿಗಳು ಮತದಾರರ ಕಷ್ಟಕ್ಕೆ ಮರಗದೆ ಅಂಬಾನಿ, ಅದಾನಿಗಳ ಸೇವಕರಾದರು! ಮದ್ದುಂಟೆ ಈ ಮಾರಕ ರೋಗಕ್ಕೆ?
ಗುಜರಾತಿನಲ್ಲಿ ಗೆದ್ದವರು ಹಿಮಾಚಲದಲ್ಲಿ ಮುಗ್ಗರಿಸಿದ್ದನ್ನು ಹೇಳುವ ಗಂಡೆದೆ ಇಲ್ಲದ ಮಾಧ್ಯಮಗಳು ಸರ್ಕಾರದ ಚಮಚಾಗಿರಿ ಮಾಡುತ್ತಾ ಜನದ್ರೋಹ ಮಾಡುತ್ತಿಲ್ಲವೆ?
ಮತಮಾರಿಕೊಳ್ಳುವ ಮತದಾರ ಶರಣಾದಾಗ ಈ ವಿಚಿತ್ರಗಳು ಸಂಭವಿಸುತ್ತವೆ. ಆಗ ನೆರವಿಗೆ ಬರುವವರೆ… ಮೊನಾಲಿಸಾ, ಕ್ಲಿಯೋಪಾತ್ರ, ಹೀರೋ-ರಾಂಜಾ, ಟಾಮ್ & ಜೆರ್ರಿ, ಲಿಂಕನ್. ಪ್ಲೇಟೋ, ಗಾಂಧಿ, ಮಂಡೇಲಾ,ವಿವೇಕಾನಂದ.
ಕಸಿವಿಸಿಯಾಯಿತೆ?
ಇನ್ನೂ ಸಾಗುವುದಿದೆ ಹಿತ್ತಲ ಗಿಡ ಈಗಲೂ ಹೂ ಬಿಡುತ್ತಿದೆ. ನದಿ ತನ್ನ ಪಥದಲ್ಲೇ ಸಾಗುತ್ತಿದೆ. ಸಮುದ್ರ ಅಗಾಗ ಸ್ಥಮಿತ ಕಳೆದುಕೊಂಡರೂ ನಿಯಂತ್ರಣದಲ್ಲಿದೆ. ಗಾಳಿ, ಬೆಳಕು, ಮರ,ಬಿಸಿಲು ತಮ್ಮ ಪಥ ಬದಲಿಸಿಲ್ಲ. ಮನುಜನಿಗೇನಾಗಿದೆ?


