ಮಿಶ್ರತಳಿಗಳಿಂದ ಹಾಲು ಉತ್ಪಾದನೆ ಹೆಚ್ಚಳ

ಸಿದ್ದಾಪುರ
ಪಶುಸಂಗೋಪನೆ ರೈತರಿಗೆ ಹೆಚ್ಚು ಆದಾಯ ತರುವಂತಹುದಾಗಿರುವುದರಿಂದ ಇಂದಿನ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೈತರು ಹಾಲಿನ ಉತ್ಪಾದನೆ ಹೆಚ್ಚು ಮಾಡಬೇಕೆಂದು ವಿಧಾನಸಭಾಧ್ಯಕ್ಷ ವಿಶವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಹೊಸೂರಿನಲ್ಲಿ ಧಾರವಾಡ ಹಾಲು ಒಕ್ಕೂಟದ ಸಿದ್ದಾಪುರ ಉಪವಿಭಾಗದ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಗುರುವಾರ ಮಾತನಾಡಿದರು.

ತಾಲೂಕಿನಲ್ಲಿ ೫೮ ಹಾಲು ಉತ್ಪಾದಕರ ಸಹಕಾರಿ ಸಂಘಗಳಿದ್ದರೂ ನಿರೀಕ್ಷೆಯಷ್ಟು ಹಾಲು ಉತ್ಪಾದನೆ ಆಗುತ್ತಿಲ್ಲ. ಹಾಲಿನ ಉತ್ಪಾದನೆ ಹೆಚ್ಚು ಮಾಡುವುದಕ್ಕೆ ಸ್ಥಳೀಯ ತಳಿಗಳೊಂದಿಗೆ ಮಿಶ್ರತಳಿ ಆಕಳುಗಳನ್ನು ಸಾಕಾಣಿಕೆ ಮಾಡಬೇಕಾಗಿದೆ. ತಳಿ ಸುಧಾರಣೆಗೆ ಕೆಎಂಎಫ್ ಹಾಗೂ ಸರ್ಕಾರ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಈ ಕುರಿತು ಒಕ್ಕೂಟದ ಅಧಿಕಾರಿಗಳು ರೈತರೊಂದಿಗೆ ಚರ್ಚೆ ನಡೆಸಿ ಹೈನುಗಾರಿಕೆ ಮಾಡುವುದಕ್ಕೆ ಅವರ ಮನವೊಲಿಸಬೇಕು.
ರಾಜ್ಯ ಸರ್ಕಾರ ಹೈನುಗಾರಿಕೆಗೆ ಹೆಚ್ಚಿನ ಆಧ್ಯತೆ ನೀಡುತ್ತಿದೆ. ಹಾಲಿನ ಉತ್ಪಾದನೆಗೆಳು ಹೆಚ್ಚೆಚ್ಚು ಮಾರಾಟ ಆದ ಹಾಗೆ ಒಕ್ಕೂಟಗಳಿಗೆ ಹೆಚ್ಚು ಅನುಕೂಲವಾಗಲಿದೆ. ಮುಖ್ಯವಾಗಿ ತಾಲೂಕಿನ ರೈತರು ಹೆಚ್ಚು ಹಾಲು ಉತ್ಪಾದನೆಗೆ ಮುಂದಾಗಬೇಕು ಎಂದು ಹೇಳಿದರು.


ಅಧ್ಯಕ್ಷತೆವಹಿಸಿದ್ದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಶಂಕರ ವೀರಪ್ಪ ಮುಗದ ಮಾತನಾಡಿ ಸಿದ್ದಾಪುರದಲ್ಲಿರುವ ಒಕ್ಕೂಟದ ಜಾಗದಲ್ಲಿ ವ್ಯವಸ್ಥಿತವಾದ ಕಟ್ಟಡ ಕಟ್ಟಿ ಇಲ್ಲಿ ಇಲ್ಲಿಯ ರೈತರಿಗೆ ಬೇಕಾಗುವ ಸೌಲಭ್ಯ ನೀಡುವುದಕ್ಕೆ ಅನುಕೂಲವಾಗುತ್ತದೆ. ಧಾರವಾಡ ಹಾಲು ಒಕ್ಕೂಟ ಈಗ ರಾಜ್ಯದಲ್ಲಿಯೇ ಹಾಲಿನ ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಶಿರಸಿ ಹಾಲಿನ ಪ್ಯಾಕಿಂಗ್ ಘಟಕಕ್ಕೆ ಸಧ್ಯ ೧೫ರಿಂದ ೧೮ಸಾವಿರ ಲೀಟರ್ ಹಾಲಿನ ಕೊರತೆ ಇದೆ. ಇದನ್ನು ಸಿದ್ದಾಪುರ ಹಾಗೂ ಶಿರಸಿ ತಾಲೂಕಿನ ಹೈನುಗಾರರು ಹೊಗಲಾಡಿಸಬೇಕು. ಹಾಲು ಉತ್ಪಾದಕರಿಗೆ ಹೆಚ್ಚಿನ ದರ ನೀಡಲು ಮುಂದಿನ ದಿನದಲ್ಲಿ ಯೋಚಿಸಲಾಗುತ್ತದೆ. ಒಕ್ಕೂಟದ ಕಲ್ಯಾಣ ಸಂಘದ ಮೂಲಕ ಹಾಲು ಉತ್ಪಾದಕರಿಗೆ ಹೆಚ್ಚಿನ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದು ಹೇಳಿದರು.


ಧಾರವಾಡ ಹಾಲು ಒಕ್ಕೂಟದ ನಿರ್ದೇಶಕರಾದ ಸುರೇಶ್ಚಂದ್ರ ಹೆಗಡೆ, ಪಿ.ವಿ.ನಾಯ್ಕ ಬೇಡ್ಕಣಿ, ಹೂವಿನಮನೆ ಹಾಲು ಸಂಘದ ಅಧ್ಯಕ್ಷ ಕೃಷ್ಣಯ್ಯ ಹೆಗಡೆ, ಮಾತನಾಡಿದರು. ಒಕ್ಕೂಟದ ನಿರ್ದೇಶಕ ಶಂಕರ ಹೆಗಡೆ, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಂ.ಲೋಹಿತೇಶ್ವರ,ಡಾ.ವಿರೇಶ ತರಲಿ, ತಾಂತ್ರಿಕ ಅಧಿಕಾರಿ ಉಮೇಶ, ಪಪಂ ಸದಸ್ಯರಾದ ಮಾರುತಿ ಟಿ.ನಾಯ್ಕ, ನಂದನ ಬೋರ್ಕರ್ ಉಪಸ್ಥಿತರಿದ್ದರು.
ಕಡಕೇರಿ ಸಂಘದ ಕಾರ್ಯದರ್ಶಿ ಹೇಮಾ ಪ್ರಾರ್ಥನೆ ಹಾಡಿದರು. ಜಿಲ್ಲಾ ಮುಖ್ಯಸ್ಥ ಎಸ್.ಎಸ್.ಬಿಜೂರ್, ತಾಲೂಕು ವಿಸ್ತರಣಾಧಿಕಾರಿ ಪ್ರಕಾಶ ಕೆ. ಕಾರ್ಯಕ್ರಮ ನಿರ್ವಹಿಸಿದರು.

ಗುಣಾತ್ಮಕ ವ್ಯಕ್ತ್ತಿತ್ವದ ತಾರಖಂಡ ಸೀತಾರಾಮ ಹೆಗಡೆ
ವ್ಯಕ್ತಿಯೊಬ್ಬತನ್ನ ಪ್ರಭಾವದಿಂದಲೇ ಸುತ್ತಮುತ್ತಲಿನ ಜನಜೀವನವನ್ನು ಬದಲಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಹಲವಾರು ಅಡೆತಡೆಗಳ ಮಧ್ಯದಲ್ಲಿಯೆ ಬದುಕಿನಅಪ್ರತಿಮ ಪ್ರೀತಿಯಿಂದಾಗಿಯೇ ಸಮಾಜಕ್ಕೆಆದರ್ಶಪ್ರಾಯವಾಗಿ ಬದುಕಿದವರು ತಾರಖಂಡ ಸೀತಾರಾಮ ಹೆಗಡೆಯವರು, ಯಕ್ಷಗಾನಅರ್ಥಗಾರಿಕೆ, ಪ್ರಸಂಗರಚನೆ, ವಿದ್ಯಾರ್ಥಿಗಳಿಗೆ ವಿದ್ಯಾದಾನ, ಧಾರ್ಮಿಕ ಮುಖಂಡತ್ವ ಹಾಗು ಸ್ವಾತಂತ್ರö್ಯ ಹೋರಾಟ ಮುಂತಾದ ಬೇರೆ ಬೇರೆ ನೆಲೆಗಳಲ್ಲಿ ಗಟ್ಟಿಹೆಜ್ಜೆಯನ್ನು ಮೂಡಿಸುವುದರ ಮೂಲಕ ತಮ್ಮ ಶಾಶ್ವತವಾದಛಾಪನ್ನುಒತ್ತಿ ಹೋಗಿದ್ದಾರೆ. ಇಂತಹಉದ್ದಾಮರನ್ನು ನೆನಪಿಸುವುದುಅರ್ಥಪೂರ್ಣಕಾರ್ಯಎಂದುಕವಿಯಾದ ವೆಂಕಟರಮಣ ಹೆಗಡೆತಾರಖಂಡ ಹೇಳಿದರು.

ಸಿದ್ದಾಪುರ ತಾಲೂಕಿನಕಲಾಭಾಸ್ಕರ ಸಂಸ್ಥೆಯವರು ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯವರ ಸಹಯೋಗದೊಂದಿಗೆ ಹಮ್ಮಿಕೊಂಡಇಟಗಿ ಯಕ್ಷೋ ತ್ಸವ-೨೦೨೨ ರಎರಡನೇ ದಿನದಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ತಮ್ಮಅಜ್ಜತಾರಖಂಡ ಸೀತಾರಾಮ ಹೆಗಡೆಯವರನ್ನು ಸ್ಮರಿಸುತ್ತಕಲಾಭಾಸ್ಕರದ ಸ್ಥಳೀಯ ಕವಿಗಳನ್ನು ನೆನಪಿಸುವ ಹಾಗೂ ಗೌರವಿಸುವಕಾರ್ಯವನ್ನು ಶ್ಲಾಘಿಸಿದರು. ಸಂಸ್ಥೆಯಅಧ್ಯಕ್ಷಇಟಗಿ ಮಹಾಬಲೇಶ್ವರ ಭಟ್ಟ ಸ್ವಾಗತಿಸಿದರು.ನಂತರತಾರಖಂಡ ಸೀತಾರಾಮ ಹೆಗಡೆ ರಚಿಸಿದ ಭೀಷ್ಮಪ್ರಪಂಚದೊಳಗಣ “ಪಾಂಡು ಅವಸಾನ” ಎಂಬ ಯಕ್ಷಗಾನ ಪ್ರಸಂಗವು ನಡೆಯಿತು.ಭಾಗವತರಾಗಿಗಜಾನನ ಭಟ್ಟ ತುಳಿಗೇರೆ, ಮದ್ದಳೆವದಕರಾಗಿ ಮೂಡಗಾರು ಶ್ರೀಪಾದ ಭಟ್ಟ, ಚಂಡೆವಾದಕರಾಗಿ ಸಂಪ ಲಕ್ಷಿö್ಮನಾರಾಯಣ ಭಾಗವಹಿಸಿದರು.ಪಾಂಡುಚಕ್ರವರ್ತಿಯಾಗಿ ಅಶೋಕ ಭಟ್ಟ ಸಿದ್ದಾಪುರ, ಕುಂತಿಯಾಗಿ ನಾಗಪತಿ ಹೆಗಡೆಕೊಪ್ಪ, ಮಾದ್ರಿಯಾಗಿಇಟಗಿ ಮಹಾಬಲೇಶ್ವರ, ವನಪಾಲಕನಾಗಿ ವೆಂಕಟರಮಣ ಹೆಗಡೆ ಮಾದನಕಳ್, ಭೀಷ್ಮಾಚಾರ್ಯನಗಿಗುಂಜಗೋಡುಗಣಪತಿ ಹೆಗಡೆಕಿಂದಮ ಮಹರ್ಷಿಯಾಗಿ ವಿನಾಯಕ ಹೆಗಡೆಕವಲಕೊಪ್ಪ ಮುಂತಾದವರು ವಿವಿಧ ಅಭಿನಯಿಸಿದರು. ಸ್ಥಳೀಯ ಕವಿಗಳ ಯಕ್ಷಗಾನ ಪ್ರದರ್ಶನವನ್ನು ನಡೆಸಿರುವುದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *