

ಸಿದ್ದಾಪುರ:ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಸಮುದಾಯ ಭವನದ ಶಿಲಾನ್ಯಾಸ ಕಾರ್ಯ ಕ್ರಮ ಡಿಸೆಂಬರ್ 17ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೆರವೆರಿಸಲಿದ್ದಾರೆ ಎಂದು ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಅಧ್ಯಕ್ಷ ಕೆ ಜಿ ನಾಯ್ಕ ಹಣಜಿಬೈಲ್ ತಿಳಿಸಿದರು.
ಅವರು ಬಾಲ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಯ
ಮುಖ್ಯ ಮಂತ್ರಿಗಳ ವಿಶೇಷ ಅನುದಾನದಲ್ಲಿ 2 ಕೋಟಿ ಮಂಜೂರಿಯಾಗಿದ್ದು, 50 ಲಕ್ಷ ಜಮಾ ಆಗಿದೆ. ಈ ಅನುದಾನ ಒದಗಿಸುವಲ್ಲಿ ಸ್ಥಳೀಯ ಶಾಸಕ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮುತುವರ್ಜಿಯಿಂದ ಹಣ ಬಿಡುಗಡೆ ಮಾಡಿಸಿದ್ದು ಸಮಾಜದ ವತಿಯಿಂದ ಅವರಿಗೆ ಅಭಿನಂದನೆಗಳು.
2003ರಿಂದ ಸ್ಥಾಪನೆಯಾದ ತಾಲೂಕು ಅಭಿವೃದ್ಧಿ ಸಂಘದ ಸಮಾಜ ಬಾಂಧ ವರು,ಹಾಗೂ ಇತರ ಸಮಾಜ ದವರ ಸಹಕಾರ ದೊಂದಿಗೆ ಹೊಸೂರು ಸ. ನಂ. 162/2 ರ 18ಗುಂಟೆ ಜಾಗದಲ್ಲಿ ಸಮುದಾಯ ಭವನ ತಲೆಯೆತ್ತುತ್ತಿದ್ದು ಹೆಚ್ಚಿನ ಹಣದ ಅವಶ್ಯಕತೆ ಇರುವುದರಿಂದ ಹೆಚ್ಚಿನ ಅನುದಾನ ತರುವಲ್ಲಿ ಪ್ರಯತ್ನಿಲಾಗುತ್ತಿದೆ.

ಶನಿವಾರ ನಡೆಯುವ ಶಿಲಾನ್ಯಾಸ ಕಾರ್ಯ ಕ್ರಮ ಕ್ಕೆ ಸಮಾಜ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋ ರಿದ್ದಾರೆ.
ಸಂಘದ ಆನಂದ ಈರಾ ನಾಯ್ಕ ಹೊಸೂರ,ಎಸ್ ಎಮ್ ನಾಯ್ಕ, ಪ್ರವೀಣ ನಾಯ್ಕ ವಾಟಗಾರ, ಮಾಬ್ಲೇ ಶ್ವರ ಕರಮನೆ, ರವಿಕುಮಾರ ನಾಯ್ಕ ಜಾತಿ ಕಟ್ಟಾ ಉಪಸ್ಥಿತರಿದ್ದರು.

