ಸಿದ್ದಾಪುರ: ತಾಲೂಕಾ ಪತ್ರಕರ್ತರ ಸಂಘದ ಆಯೋಜಕತ್ವದಲ್ಲಿ ವಿವಿಧ ಇಲಾಖೆಗಳ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಡಿಸೆಂಬರ 24 ಹಾಗೂ 25 ರಂದು ಕಾನಳ್ಳಿಯ ಸುಭಾಷಚಂದ್ರಬೋಸ್ ಕ್ರೀಡಾಂಗಣದಲ್ಲಿ ಜರುಗಲಿದೆ.
ತಾಲೂಕಾ ಪತ್ರಕರ್ತರ ಸಂಘ, ಕಂದಾಯ ಇಲಾಖೆ, ಶಿಕ್ಷಕರ ಸಂಘ, ಅರಣ್ಯ ಇಲಾಖೆ, ಪೊಲೀಸ್, ಸಹಕಾರಿ ಸಂಘ, ಸರ್ಕಾರಿ ನೌಕರರು, ಹೆಸ್ಕಾಂ ಸೇರಿ 8 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು, ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ ಶನಿವಾರ ಬೆಳಿಗ್ಗೆ 9 ಗಂಟೆಗೆ ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ.
ತಾಲೂಕಾ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೇಡ್ಕಣಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ವಾಸಂತಿ ಹಸ್ಲರ್, ಸದಸ್ಯರಾದ ಕೃಷ್ಣಮೂರ್ತಿ ಕಡಕೇರಿ, ಹೇಮಾವತಿ ನಾಯ್ಕ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಜತೆಗೆ ವಿವಿಧ ಇಲಾಖೆಯ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಯಶವಂತ ನಾಯ್ಕ ತ್ಯಾರ್ಸಿ, ಖಜಾಂಚಿ ಶ್ರೀಧರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.