

ಸಿದ್ದಾಪುರ: ದಿನ ನಿತ್ಯ ಕಚೇರಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸುವವರು ಕ್ರೀಡೆಯಲ್ಲಿ ತೊಡಗಿಕೊಂಡಾಗ ನಮ್ಮ ದೈಹಿಕ ಸಾಮರ್ಥ್ಯ ಹಾಗೂ ಅರೋಗ್ಯದ ಸ್ಥಿರತೆ ಬಗ್ಗೆ ತಿಳಿಯುತ್ತದೆ ಎಂದು ಸಿದ್ದಾಪುರ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ ಹೇಳಿದರು ಅವರು ಕಡಕೇರಿ ಕಾನಳ್ಳಿಯ ಸುಭಾಷಚಂದ್ರಬೋಸ್ ಕ್ರೀಡಾಂಗಣದಲ್ಲಿ ತಾಲೂಕಾ ಪತ್ರಕರ್ತರ ಸಂಘದ ಆಯೋಜಕತ್ವದಲ್ಲಿ ನಡೆದ ತೃತೀಯ ವರ್ಷದ ವಿವಿಧ ಇಲಾಖೆಗಳ ನಡುವಿನ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಯ ಸಮಾರೋಪ ಸಮಾರಂಭ ದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ್ ಹೆಗಡೆ ಮಾತನಾಡಿ ಪತ್ರಕರ್ತರ ಸಂಘ ಆಯೋಜಿಸಿದ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಿದ್ದರೂ ಮುಂದಿನ ದಿನಗಳ ಲ್ಲಿ ಇನ್ನು ಹೆಚ್ಚು ಇಲಾಖೆಗಳಿಗೆ ಅವಕಾಶ ಕಲ್ಪಿಸಿ ಎಲ್ಲರೂ ಸೇರುವಂತಾಗಲಿ ಎಂದರು.
ಬೇಡ್ಕಣಿ ಗ್ರಾಮ ಪಂಚಾಯ್ತಿ ಸದಸ್ಯ ಕೃಷ್ಣಮೂರ್ತಿ ಕಡಕೇರಿ ಮಾತನಾಡಿದರು, ಹೆಸ್ಕಾಂ ನ ದಿಲೀಪ್ ಇನ್ಸ್ಪೆಕ್ಟರ್ ಕುಮಾರ್ ಕೆ, ಪಿ ಎಸ್ ಐ ಮಲ್ಲಿಕಾರ್ಜುನ ಕೊರಾ ಣಿ ಉಪಸ್ಥಿತರಿದ್ದರು.
ಪತ್ರಕರ್ತ ಸಂಘದ ಅಧ್ಯಕ್ಷ ಗಂಗಾಧರ್ ಕೊಳಗಿ ಅಧ್ಯಕ್ಷತೆ ವಹಿಸಿದ್ದರು
ಎರಡು ದಿನಗಳು ನಡೆದ ಪಂದ್ಯಾವಳಿಯಲ್ಲಿ ಹೆಸ್ಕಾಂ ಪ್ರಥಮ, ಪೊಲೀಸ್ ದ್ವಿತೀಯ ಸ್ಥಾನ ಪಡೆದವು.
ಸಿದ್ದಾಪುರ. ಪಟ್ಟಣದ ಶಂಕರ ಮಠದಲ್ಲಿ ನಾಲ್ಕು ದಿನಗಳ ನಾಟಕೋತ್ಸವವನ್ನು ರಂಗಕರ್ಮಿ, ನಿರ್ದೇಶಕ,ನೇಪಥ್ಯ ಕಲಾವಿದ ಪುರುಷೋತ್ತಮ ತಲವಾ ಟ ಉದ್ಘಾಟಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ರಂಗ ಸೌಗಂಧ ಹಾಗೂ ಒಡ್ಡೋಲಗ ನಾಟಕ ತಂಡಗಳು ನಡೆಸುತ್ತಿರುವ ನಾಲ್ಕು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿದ ಪುರುಷೋತ್ತಮ ತಲವಾ ಟ ಅವರಿಗೆ ರಂಗ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಂಗಭೂಮಿಯ ನೇಪಥ್ಯದಲ್ಲೇ ಹೆಚ್ಚುಕೆಲಸ ನಿರ್ವಹಿಸಿದ ತಮಗೆ ಈ ಗೌರವ ಸಂದಿದ್ದಕ್ಕೆ ಸಂತೋಷವಾಗಿದೆ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ರಾಘವೇಂದ್ರ ಶಾಸ್ತ್ರಿ, ಸೀತಾರಾಮ ಶಾಸ್ತ್ರಿಯವರ ರಂಗಭೂಮಿಯ ಪ್ರೀತಿಯ ಬಗ್ಗೆ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ರಂಗಕರ್ಮಿ ಶ್ರೀಧರ ಹೆಗಡೆ ಹುಲಿಮನೆ ಮಾತನಾಡುತ್ತಾ ತಮ್ಮ ತಂದೆ ಸೀತಾರಾಮ ಶಾಸ್ತ್ರಿ ಯವರು ಹಾಕಿಕೊಟ್ಟ ರಂಗಪರಂಪರೆಯನ್ನು ತಮ್ಮ ಕುಟುಂಬ ರಂಗಾಸಕ್ತರ ನೆರವು ಮತ್ತು ಸಹಕಾರದೊಂದಿಗೆ ಮುನ್ನಡೆಸುತ್ತಿದೆ. ಇದನ್ನು ಇನ್ನಷ್ಟು ಬೆಳೆಸುವ ಕನಸಿದೆ ಎಂದರು. ಗಣಪತಿ ಹೆಗಡೆ ಹುಲಿಮನೆ ಸ್ವಾಗತಿಸಿದರು ಶ್ರೀಪಾದ ಹೆಗಡೆ ವಂದಿಸಿದರು. ಗಣಪತಿ ಗುಂಜಗೋಡ ನಿರೂಪಿಸಿದರು. ನಂತರ ಡಾ.ಶ್ರೀಪಾದ ಹೆಗಡೆಯವರು ನಿರ್ದೇಶಿಸಿದ ಆನಂದ ಭಾವಿನಿ ಎಂಬ ಏಕವ್ಯಕ್ತಿ ನಾಟಕವನ್ನು ಸಿರಿ ವಾನಳ್ಳಿಯವರು ಬಹು ಮನೋಜ್ಞವಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದರು.


