

ಸಿದ್ದಾಪುರ
ಉತ್ತರ ಕನ್ನಡ ಜಿಲ್ಲೆಯ ಯಕ್ಷಗಾನ ರಂಗಭೂಮಿಯಲ್ಲಿ ಕೆರೆಮನೆ ಗಜಾನನ ಹೆಗಡೆಯವರ ನಂತರದಲ್ಲಿ ಸ್ತ್ರೀ ವೇಷಧಾರಿಯ ಕೊರತೆಯನ್ನು ನೀಗಿಸಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರಾದವರು ಭಾಸ್ಕರ ಜೋಶಿ ಶಿರಳಗಿ.ಅವರು ಎಂಬತ್ತರ ದಶಕದಲ್ಲಿ ಯಕ್ಷಗಾನದ ರಾಣಿ ಎಂದೇ ಪ್ರಸಿದ್ಧರಾದವರು ಎಂದು ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರಕೈ ಹೇಳಿದರು.

ಅವರು ಕಲಗದ್ದೆ ನಾಟ್ಯವಿನಾಯಕ ದೇವಾಲಯದ ಪ್ರಾಂಗಣದಲ್ಲಿ ಸ್ಥಳೀಯ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದಲ್ಲಿ ರವಿವಾರ ನಡೆದ ಪ್ರಸಿದ್ಧ ಸ್ತ್ರೀವೇಷ ಕಲಾವಿದ ಭಾಸ್ಕರ ಜೋಶಿಯವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ ನೆರವೇರಿಸಿ ಮಾತನಾಡಿದರು.
ಅನಂತ ಹೆಗಡೆ ಕೊಳಗಿ ಯಕ್ಷಗಾನ ರಂಗಭೂಮಿಯಲ್ಲಿ ತಮ್ಮದೇ ಆದ ಪ್ರತಿಭೆ, ವಿದ್ವತ್, ಮಾತುಗಾರಿಕೆ ಮೂಲಕ ಪ್ರಸಿದ್ಧರಾದವರು. ಅವರು ಗುರುವಾಗಿ ಹಲವರನ್ನು ಬೆಳೆಸಿದ್ದು ಭಾಸ್ಕರ ಜೋಶಿ ಕೂಡ ಅವರ ಶಿಷ್ಯರಲ್ಲೊಬ್ಬರು. ಇಂಥ ಸಾಧಕ ಗುರುವಿನ ಹೆಸರಿನ ಪ್ರಶಸ್ತಿ ಜೋಶಿಯವರಿಗೆ ಸಲ್ಲುತ್ತಿದ್ದು ಇದು ಅವರ ಪಾಲಿಗೆ ರಾಷ್ಟ್ರಪ್ರಶಸ್ತಿಗೂ ಮಿಗಿಲಾದದ್ದು ಎಂದರು.
ಅಭಿನಂದನಾ ಮಾತುಗಳನ್ನಾಡಿದ ಸೆಲ್ಕೋ ಇಂಡಿಯಾದ ಸಿ.ಇ.ಒ ಹಾಗೂ ಕಲಾವಿದ ಮೋಹನ ಹೆಗಡೆ ಹೆರವಟ್ಟಾ ಯಕ್ಷಗಾನ ಕ್ಷೇತ್ರವನ್ನು ಉಜ್ವಲಗೊಳಿಸಿದ ಕೆಲವೇ ಮಹನೀಯರಲ್ಲಿ ಭಾಸ್ಕರ ಜೋಶಿ ಓರ್ವರು. ಸ್ತ್ರೀವೇಷದಲ್ಲಿ ಹಲವು ಪಾತ್ರಗಳನ್ನು ನಿರ್ವಹಿಸಿ ಸೈ ಅನಿಸಿಕೊಂಡ ಜೋಶಿ ಸುಧೀರ್ಘ ಕಾಲ ಯಕ್ಷಗಾನಕ್ಕಾಗಿ ದುಡಿದವರು. ಸ್ವಂತ ಮೇಳ ಕಟ್ಟಿ ಯಕ್ಷಗಾನ ರಂಗದಲ್ಲಿ ಮೊಟ್ಟಮೊದಲು ಪೂರ್ಣಚಂದ್ರ ರಂಗವನ್ನು ಅಳವಡಿಸಿದವರು. ಅವರ ಪಾತ್ರಗಳು ಇಂದಿಗೂ ಸ್ಮರಣೀಯವಾಗಿದೆ ಎಂದರು.
ಟಿ.ಎಂ.ಎಸ್.ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೆಸರ ಮೂರು ದಶಕಗಳಿಗೂ ಅಧಿಕ ಕಾಲ ಯಕ್ಷಗಾನಕ್ಷೇತ್ರದಲ್ಲಿ ಪಾತ್ರ ನಿರ್ವಹಿಸಿ ಪ್ರಸಿದ್ಧರಾದ ಜೋಶಿಯವರಿಗೆ ಅನಂತಶ್ರೀ ಪ್ರಶಸ್ತಿ ನೀಡಿದ್ದು ಶಾಘ್ಲನೀಯ ಎಂದರು.
ಅತಿಥಿಗಳಾದ ವಿ|ದತ್ತಮೂರ್ತಿ ಭಟ್ ಶಿವಮೊಗ್ಗ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾಧರ ಕೊಳಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ ವಿ.ಎಂ.ಭಟ್ಟ ಅಧ್ಯಕ್ಷತೆವಹಿಸಿ ಮಾತನಾಡಿದರು.
ಪ್ರತಿಷ್ಠಾನದ ಕಾರ್ಯದರ್ಶಿ,ಪ್ರಸಿದ್ಧ ಭಾಗವತ ಕೇಶವ ಹೆಗಡೆಕೊಳಗಿ ಸ್ವಾಗತಿಸಿದರು. ತುಳಸಿ ಹೆಗಡೆ ಬೆಟ್ಟಕೊಪ್ಪ ನಿರ್ವಹಿಸಿದರು. ಪತ್ರಕರ್ತ ನಾಗರಾಜ ಮತ್ತಿಗಾರ ವಂದಿಸಿದರು.
ನಂತರ ಕಾರ್ತವಿರ್ಯಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
