

ಕೃಷಿ ಚಟುವಟಿಕೆ ಅನುಕೂಲಕ್ಕೆ ಅವಶ್ಯವಿರುವ ಹೊಸ ಸಂಶೋಧನೆಗಳ ಅಗತ್ಯ ಹೆಚ್ಚಿದ್ದು ಖಾಸಗಿ,ಸಹಕಾರ ಕ್ಷೇತ್ರದ ಸಂಶೋಧನೆಗಳಿಗೆ ಸರ್ಕಾರ ಹೆಚ್ಚಿನ ನೆರವು ನೀಡುತ್ತಿದೆ. ಸಂಸ್ಥೆಗಳು ಈ ಅನುಕೂಲವನ್ನು ಬಳಸಿಕೊಳ್ಳುವ ಜೊತೆಗೆ ರೈತರಿಗೆ ಯಾಂತ್ರೀಕರಣಕ್ಕೆ ಉತ್ತೇಜನ ನೀಡಿದರೆ ಸರ್ಕಾರ ಸಹಾಯಧನದ ರೂಪದಲ್ಲಿ ಸಹಕರಿಸಲು ಸಿದ್ಧವಿದೆ ಎಂದು ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸಿದ್ಧಾಪುರ ಟಿ.ಎಂ.ಎಸ್. ನಲ್ಲಿ ನಡೆದ ವಿಜಯಕರ್ನಾಟಕ ಪತ್ರಿಕೆಯ ಆಯೋಜನೆಯ ಅಡಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆ ಇದ್ದರೆ ಎನನ್ನೂ ಸಾಧಿಸಲು ಸಾಧ್ಯ ಅಡಕೆ ಬೆಳೆಗಾರರು ಸಹಕಾರಿ ಸಂಸ್ಥೆಗಳ ಮೂಲಕ ತಮ್ಮ ಒಗ್ಗಟ್ಟು,ಸಂಘಟನೆಯ ಶಕ್ತಿ ಪ್ರದರ್ಶಿಸುತಿದ್ದಾರೆ.ರೈತರ ಜೊತೆಗೆ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ಹೊಸ ಸಂಶೋಧನೆಗಳನ್ನು ಮಾಡಿ ರೈತರ ನೆರವಿಗೆ ಬರಬೇಕು ಎಂದು ಅಪೇಕ್ಷಿಸಿದ. ಸ್ಫೀಕರ್
ಕಾಡುಪ್ರಾಣಿಗಳ ಹಾವಳಿಯಿಂದ ತೊಂದರೆಗೊಳಗಾಗುತ್ತಿರುವ ರೈತರು ಸರ್ಕಾರ,ಜನಪ್ರತಿನಿಧಿಗಳ ಮೇಲೆ ಒತ್ತಡ ಹೇರುತ್ತಿರು ತ್ತಾರೆ. ರೈತರ ಪರಂಪರಾಗತ ಮತ್ತು ಹೊಸ ಸಮಸ್ಯೆಗಳ ಪರಿಹಾರಕ್ಕೆ ಇಂಥ ಕಾರ್ಯಕ್ರಮಗಳಿಂದ ಉತ್ತರ ಸಿಗಬೇಕು ಎಂದರು.
ವಿಜ್ಞಾನಿಗಳು, ಸಹಕಾರಿಗಳು ಸೇರಿದ ಸಮಾವೇಶದಲ್ಲಿ ರೈತರ ಸಮಸ್ಯೆಗಳು,ಅವುಗಳಿಗೆ ಪರಿಹಾರೋಪಾಯಗಳ ಬಗ್ಗೆ ಚರ್ಚಿಸಲಾಯಿತು.
ಸಿದ್ದಾಪುರ:- ಇಂದಿನ ದಿನಮಾನದಲ್ಲಿ ರೈತರು ಪ್ರಕೃತಿಯ ಜೊತೆಯಲ್ಲಿ ಕಲಿಯುವ ಶಿಕ್ಷಣ ಬಹಳ ದೊಡ್ಡದಿದೆ. ನಮ್ಮ ಉಳವಿಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಡಿದರೆ ನಮಗೆ ಹತಾಶರಾಗುವ ಪ್ರಮೇಯವೇ ಬರುವುದಿಲ್ಲ ಎಂದು ವಿಧಾನ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಟಿ ಎಂ ಎಸ್ ಸಭಾಭವನದಲ್ಲಿ ವಿಜಯ ಕರ್ನಾಟಕ ಸಹಯೋಗದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಅಡಿಕೆ ಬೆಳೆಗಾರರ ಸಮಾವೇಶ, ಹಕ್ಕೊತ್ತಾಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಎಲ್ಲಾ ಬೆಳಗಾರರ ಸಂಘ ಸಂಸ್ಥೆಗಳಿಂತ ಹೆಚ್ಚಾಗಿ ಅಡಿಕೆ ಬೆಳೆಗಾರರ ಸಂಘ ಸಂಸ್ಥೆಗಳು ನಮ್ಮ ಹಿತ ರಕ್ಷಣೆಗೆ ನಿಂತಿವೆ.
ಕಾಡು ಪ್ರಾಣಿಗಳ ಹಾವಳಿ ತಡೆಯುವುದೇ ರೈತರಿಗೆ ಚಿಂತೆಯಾಗಿದೆ. ಕೇವಲ ಸರಕಾರವನ್ನು ಅವಲಂಬಿಸದೆ ಸಂಘ ಸಂಸ್ಥೆಗಳು, ವಿಜ್ಞಾನಿಗಳು
ರೋಗ, ಕೀಟ ಬಾಧೆಗೆ ಸಂಶೋಧನೆ ಮಾಡಿ ಪರಿಹಾರ ಕಂಡುಕೊಳ್ಳುವಂತಾಗಬೇಕು.
ಕೂಲಿಕಾರರ ಸಮಸ್ಯೆಗಳನ್ನು ಪರಿಹರಿಸಲು ಯಾಂತ್ರೀಕರಣ ಅವಶ್ಯಕತೆ ಇದೆ. ಅಲ್ಲದೆ ಮೌಲ್ಯ ವರ್ಧನೆ ಮಾಡಿ ಮಾರಾಟ ಮಾಡಲು ಪ್ರೋತ್ಸಾಹ ಮಾಡಬೇಕು. ಎಲ್ಲಾ ಸಮಸ್ಯೆಗಳನ್ನು ಎದುರಿಸುವ ಶಕ್ತಿ ನಮ್ಮಲ್ಲಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಅಡಿಕೆ ಬೆಳೆಯ ಬೆಲೆ ಬಹುತೇಕ ಸ್ಥಿರವಾಗಿರುವುದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಾಗೂ ರಾಜ್ಯ ಸರಕಾರವನ್ನು ಅಭಿನಂದಿಸಿದರು.
ಅಡಿಕೆ ಬೇಳೆ ಹಾನಿಕಾರಕವಾದುದಲ್ಲ. ನಮ್ಮಲ್ಲಿ ಪೂಜ್ಯ ಭಾವನೆ ಇದೆ. ಪಾರಂಪರಿಕ ಅಡಿಕೆ ಬೆಳೆಗಾರರ ಭವಿಷ್ಯ ಏನು ಎನ್ನುವ ಚಿಂತೆ ನಮಗೆ ಕಾಡುತ್ತಿದೆ. ನಮಗೆ ಸವಾಲಿದೆ. ಸರ್ಕಾರ
ಹೊಸತನ ದಿಂದ ಮುನ್ನಡೆಯುವ ಮಾರ್ಗವನ್ನು ಕಂಡುಕೊಳ್ಳಬೇಕು. ಹೊಸತನದ ಚಟುವಟಿಕೆ ಗಳಿಗೆ ಉತ್ತೇಜನ ನೀಡಬೇಕು.
ಅಧ್ಯಕ್ಷತೆ ವಹಿಸಿದ್ದ ಟಿ ಎಮ್ ಎಸ್ ಅಧ್ಯಕ್ಷ ಆರ್ ಎಂ ಹೆಗಡೆ ಬಾಳೆಸರ ಮಾತನಾಡಿ ಪಾರಂಪರಿಕ ಅಡಿಕೆ ಬೆಳೆಗಾರರ ಪರಿಸ್ಥಿತಿ ಸಂಕಷ್ಟದಲ್ಲಿದೆ. ನೀರಾವರಿ ಪ್ರದೇಶದಲ್ಲಿ ನಿಗದಿಪಡಿಸಿದ ಜಾಗದಲ್ಲಿ ಮಾತ್ರ ಅಡಿಕೆ ಬೆಳೆಯುಂತಾಗಬೇಕು. ನಮ್ಮಲ್ಲಿ ಅಡಿಕೆ ಹೊರತುಪಡಿಸಿ ಬೇರೆ ಬೆಳೆಯಲು ಪೂರಕವಾದ ಅವಕಾಶ ಇಲ್ಲಾ. ಅಡಿಕೆ ಯನ್ನು ಆಮುದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲಾ. ನಮಗೆ ಬೇಕಾಗುವ ಅಡಿಕೆ ನಮ್ಮಲ್ಲಿಯೇ ಬೆಳೆಯಲಾಗುತ್ತಿದೆ. ಅವಶ್ಯಕತೆ ಇದ್ದರೆ ಉತ್ತಮ ಗುಣಮಟ್ಟದ ಅಡಿಕೆಯನ್ನು ಆಮುದು ಮಾಡಿಕೊಳ್ಳಲಿ. ಪಾರಂಪರಿಕ ಅಡಿಕೆ ಬೆಳೆಗಾರರ ಹಿತ ದೃಷ್ಟಿ ಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕು ಎಂದರು.
ರಾಜ್ಯ ಅಡಿಕೆ ಮಹಾಮಂಡಳದ ನಿರ್ದೇಶಕ ರಾದ ಎಚ್ ಎಸ್ ಮಂಜಪ್ಪ, ಕ್ಯಾಂಪ್ಕೋದ ಅಧ್ಯಕ್ಷ ಕಿಶೋರಕುಮಾರ್ ಕೊಡ್ಗಿ, ಟಿ ಎಸ್ ಎಸ್ ಕಾರ್ಯಾಧ್ಯಕ್ಷ ಅರ್ ಎಸ್ ಹೆಗಡೆ ಕಡವೆ, ಕದಂಬ ಮಾರ್ಕೆಟಿಂಗ್ ನ ಶಂಬುಲಿಂಗ ಹೆಗಡೆ, ಲಯನ್ಸ ಮಾಜಿ ಗವರ್ನರ್ ರವಿ ಹೆಗಡೆ ಹೂವಿನಮನೆ, ರಾಘವೇಂದ್ರ ಶಾಸ್ತ್ರಿ, ವಿಜ್ಞಾನಿ ರವಿ ಭಟ್ ಕಾಸರಗೋಡು. ತೋಟಗಾರಿಕಾ ತಜ್ಞ ವಿಜಯ ಎನ್ ಹೆಗಡೆ, ಟಿ ಎಂ ಎಸ್ ಉಪಾದ್ಯಕ್ಷ ಎಮ್ ಜಿ ನಾಯ್ಕ ಹಾದ್ರಿಮನೆ. ವ್ಯವಸ್ಥಾಪಕ ಸತೀಶ ಹೆಗಡೆ ಉಪಸ್ಥಿತರಿದ್ದರು.
ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಡಾ, ಬಂಡು ಕುಲಕರ್ಣಿ ಪ್ರಾಸ್ತಾವಿಕ ವಾಗಿ ಮಾತನಾಡಿದರು. ವಿಜಯ ಕರ್ನಾಟಕ ದ ಸ್ಥಾನಿಕ ವರದಿಗಾರ ಗಣೇಶ ಭಟ್ ಸ್ವಾಗತಿಸಿದರು. ಜಿ ಜಿ ಹೆಗಡೆ ಬಾಳಗೋಡ ನಿರೂಪಿಸಿದರು.


