

ಅಂಬೇಡ್ಕರ್ ಶಕ್ತಿ ಸಂಘದ ಕಾನಗೋಡು ವತಿಯಿಂದ,
ಲಕ್ಷ್ಮಣ್ ಬೋರ್ಕರ್ ಅವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಕಾನಗೋಡು ಗ್ರಾಮದಲ್ಲಿ, ಭೀಮಾ ಕೊರೆಗಾಂವ್ ಮಹಾಯುದ್ಧದ ವಿಜೆಯೋತ್ಸವದ ನಿಮಿತ್ತ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮುಖಾಂತರ ಕಾರ್ಯಕ್ರಮವನ್ನು
ಪ್ರಾರಂಭಿಸಲಾಯಿತು.
ಈ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ, ಅಂಬೇಡ್ಕರ್ ಶಕ್ತಿ ಸಂಘ ಸೊರಬ ತಾಲೂಕ ಅಧ್ಯಕ್ಷ ಚಂದ್ರಪ್ಪ ಹೊಳೆಮರೂರ್ ಹಾಗೂ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ರಾದ ಎಚ್ ಕೆ ಶಿವಾನಂದ್ ಹಾಗೂ ಕಾರ್ಯಕ್ರಮದ ಕೇಂದ್ರಬಿಂದುವಾದ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಮತ್ತು ಸಮಗಾರ ಹರಳೆಯ ಸಮಾಜದ ತಾಲೂಕ ಅಧ್ಯಕ್ಷ ವಿನಾಯಕ್ ಕಾನಡೆ ಉಪನ್ಯಾಸವನ್ನು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘ ಸಮಿತಿಯ ತಾಲೂಕ ಸಂಘಟನಾ ಸಂಚಾಲಕರಾದ ಲಕ್ಷ್ಮಣ್ ಬೋರ್ಕರ್ ನಡೆಸಿದರು.ಅಂಬೇಡ್ಕರ್ ಶಕ್ತಿ ಸಂಘದ ಸದಸ್ಯರಾದ ಶ್ರೀರಂಗ ಬೋರ್ಕರ್, ಕೃಷ್ಣಾ ಬೋರ್ಕರ್, ರವಿ ಬೋಕರ್ ಸುರೇಶ್,ಸಂದೀಪ್ ,ಪವನ್ , ಗೋಪಾಲ್ , ಸುನಿಲ, ಪ್ರದೀಪ್ , ಸಂದೇಶ್ ,ಹಾಗೂ ಐಗೋಡ ಮತ್ತು ಕಾನಗೋಡು ಗ್ರಾಮಸ್ಥರು ಭಾಗವಹಿಸಿದ್ದರು.


