ಜ.೨೮ ರಂದು ಸಿದ್ಧಾಪುರ ಶಂಕರ ಮಠ ಸಭಾಂಗಣದಲ್ಲಿ ನಡೆಯುವ ಸಿದ್ಧಾಪುರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ ಆರ್.ಕೆ.ಹೊನ್ನೆಗುಂಡಿ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧೀಕೃತ ಘೋಷಣೆ ಮಾಡಿದ ಸಿದ್ಧಾಪುರ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಕೆಲವು ಪರಿಶೀಲನೆಗಳ ನಂತರ ಆರ್.ಕೆ.ಹೊನ್ನೆಗುಂಡಿಯವರ ಹೆಸರು ಅಂತಿಮಗೊಂಡಿದೆ ಎಂದರು.
ಸಿದ್ದಾಪುರ ತಾಲೂಕಾ ಪಂಚಾಯತ್ ಆವರಣದಲ್ಲಿ ಪ್ರಾರಂಭವಾದ ಸಾಹಿತ್ಯ ಸಮ್ಮೇಳನ ಕಛೇರಿಯನ್ನು ಉದ್ಘಾಟಿಸಿದ ತಾ.ಪಂ. ಕಾ.ನಿ.ಅ. ಪ್ರಶಾಂತ್ ರಾವ್ ತಮ್ಮ ಸೇವಾವಧಿಯಲ್ಲಿ ಇದೇ ಮೊದಲ ಬಾರಿ ಸಾಹಿತ್ಯ ಸಮ್ಮೇಳನದ ಭಾಗವಾಗುವ ಮೂಲಕ ಕನ್ನಡ ಸೇವೆ ಮಾಡುವ ಭಾಗ್ಯ ದೊರೆತಿದೆ ಎಂದರು.