

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಗಳ ಸಂದರ್ಶನ ಬುಧವಾರ ಶಿರಸಿಯಲ್ಲಿ ನಡೆಯಿತು.ಕಾಂಗ್ರೆಸ್ ನಾಯಕರಾದ ಮಯೂರ್ ಜಯಕುಮಾರ್, ವಿನಯಕುಮಾರ್ ಸೊರಕೆ, ಆರ್.ವಿ.ದೇಶಪಾಂಡೆ ಮತ್ತು ಐವಾನ್ ಡಿಸೋಜಾ ಎದುರು ತಮ್ಮ ಉಮೇದುವಾರಿಕೆಯ ಹಕ್ಕು ಚಲಾಯಿಸಿದ ಮುಖಂಡರು ತಮ್ಮ ಗೆಲುವಿನ ಸಾಧ್ಯತೆಗಳ ಬಗ್ಗೆ ತಿಳಿಸಿದರೆಂದು ಗೊತ್ತಾಗಿದೆ. ಶಿರಸಿ ಕ್ಷೇತ್ರದಿಂದ ಭೀಮಣ್ಣ ನಾಯ್ಕ, ವಸಂತ ನಾಯ್ಕ ಮನಮನೆ, ವಿ.ಎನ್. ನಾಯ್ಕ ಬೇಡ್ಕಣಿ, ವೆಂಕಟೇಶ್ ಹೆಗಡೆ ಹೊಸಬಾಳೆ,ಶ್ರೀಪಾದ ಹೆಗಡೆ.
ಹಳಿಯಾಳದಿಂದ ಆರ್.ವಿ.ದೇಶಪಾಂಡೆ, ಕಾರವಾರದಿಂದ ಸತೀಶ್ ಶೈಲ್,ಚೈತ್ರಾ ಕೊಟಾರ್ ಕರ್, ಕುಮಟಾದಿಂದ ಮಂಜುನಾಥ ನಾಯ್ಕ, ಶಾರದಾಶೆಟ್ಟಿ, ಭಟ್ಳಳದಿಂದ
ಐದು ಜನ, ಯಲ್ಲಾಪುರದಿಂದ ವಿ.ಎಸ್. ಪಾಟೀಲ್, ಶ್ರೀನಿವಾಸ್ ಸೇರಿದ ಒಟ್ಟೂ೨೫ ಕ್ಕೂ ಹೆಚ್ಚು ಆಕಾಂಕ್ಷಿಗಳು ತಮ್ಮ ಉಮೇದುವಾರಿಕೆಯ ಬಗ್ಗೆ ಪ್ರತಿಪಾದಿಸಿದ್ದಾರೆ. ಈ ಹೆಸರುಗಳಲ್ಲದೆ ಬೇರೆ ಹೆಸರುಗಳೂ ಕೂಡಾ ಅಂತಿಮವಾಗುವ ಸಾಧ್ಯತೆ ಇದ್ದು ಇದೇ ತಿಂಗಳು ಅಭ್ಯರ್ಥಿಗಳ ಘೋಷಣೆ ನಡೆಯಲಿದೆ ಎನ್ನುವುದನ್ನು ಮೂಲಗಳು ಖಚಿತಪಡಿಸಿವೆ.
ವಿಧಾನಸಭಾ ಚುನಾವಣೆ: ಒಗ್ಗಟ್ಟಿನ ಮಂತ್ರ ಪಠಿಸಿದ ಕಾಂಗ್ರೆಸ್ ನಾಯಕರು
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ರಾಜ್ಯ ಕಾಂಗ್ರೆಸ್ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದೆ.

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿ ಉಳಿದಿದ್ದು, ಈ ನಡುವಲ್ಲೇ ರಾಜ್ಯ ಕಾಂಗ್ರೆಸ್ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದೆ. ಚುನಾವಣೆ ಹಿನ್ನೆಲೆಯಲ್ಲಿ ಒಗ್ಗಟ್ಟಿನ ಮಂತ್ರ ಪಠಿಸಿದೆ.
ಚುನಾವಣಾ ಸಿದ್ಧತೆಯಂತೆ ತುರುವೇಕೆರೆಯಲ್ಲಿ ಬುಧವಾರ ಕಾಂಗ್ರೆಸ್ ರ್ಯಾಲಿಯೊಂದನ್ನು ನಡೆಸಿದ್ದು, ರ್ಯಾಲಿಯಲ್ಲಿ ಡಿಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯಕರು ಪಾಲ್ಗೊಂಡಿದ್ದರು.
ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು. ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ನಾಯಕರ ಹೆಸರನ್ನು ಪಟ್ಟಿ ಮಾಡಿದರು. ಅಲ್ಲದೆ, ಹಿಂದಿನ ರಾಜಕೀಯ ಧ್ರುವೀಕರಣವು 2023 ರ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಲಾಭವನ್ನು ತಂದು ಕೊಡಲಿದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕರು ಒಗ್ಗಟ್ಟಿನಿಂದ ಕಣಕ್ಕಿಳಿದಿದೆ. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರಿಗೆ ಆ ಪಕ್ಷಗಳಿಗಾಗಿ ಸುಖಾಸುಮ್ಮನೆ ವ್ಯರ್ಥ ಮಾಡಬಾರದು, ನಮ್ಮ ಪಕ್ಷಕ್ಕೆ ಸೇರ್ಪಡೆಗೊಳ್ಳಬೇಕು. ನಾವು ಅವರನ್ನು ಪಕ್ಷದಲ್ಲಿ ಹಳೆಯ ಕಾಲದವರಂತೆಯೇ ಘನತೆಯಿಂದ ನಡೆಸಿಕೊಳ್ಳುತ್ತೇವೆಂದು ಭರವಸೆ ನೀಡಿದರು.
ಮಧು ಬಂಗಾರಪ್ಪ, ಕೋಲಾರದಲ್ಲಿ ಮನೋಹರ್, ಕೋನರೆಡ್ಡಿ, ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ತೀರ್ಥಹಳ್ಳಿ ಮಂಜುನಾಥ್ ಗೌಡ, ರಮೇಶ್, ಜೀವಿಜಯ, ವೈ.ಎಸ್.ವಿ.ದತ್ತ ಸೇರಿದಂತೆ ಹಲವು ಮುಖಂಡರು ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಕಾಂಗ್ರೆಸ್’ಗೆ ಸೇರ್ಪಡೆಯಾಗಿದ್ದಾರೆ ಎಂದು ಪಟ್ಟಿ ಮಾಾಡಿ ಹೇಳಿದರು.
“ಇವರು ರಾಜ್ಯದ ರಾಜಕೀಯ ಭವಿಷ್ಯವನ್ನು ನಿರ್ಣಯಿಸಬಲ್ಲ ನಾಯಕರು. ರಾಜ್ಯದಲ್ಲಿ ಕಾಂಗ್ರೆಸ್ ಉಜ್ವಲ ಭವಿಷ್ಯಕ್ಕೆ ನಾಂದಿ ಹಾಡುತ್ತಿದೆ. ಆದರೆ, ಬಿಜೆಪಿ ಸರ್ಕಾರ ಮುಳುಗುತ್ತಿದೆ. ನಮ್ಮ ಆಂತರಿಕ ಸಮೀಕ್ಷೆಯು ಕಾಂಗ್ರೆಸ್‌ಗೆ 136 ಮತ್ತು ಬಿಜೆಪಿಗೆ 60 ಸ್ಥಾನಗಳ ಸಿಗಲಿದೆ ಎಂದು ಹೇಳಿದೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ರಾಜೀನಾಮೆ ಪಡೆದು ಕಣ್ಣೀರು ಹಾಕುವಂತೆ ಮಾಡಿದ್ದು ಬಿಜೆಪಿಯ ಸಾಧನೆ. ಬಿಜೆಪಿ ಉತ್ತಮ ಆಡಳಿತ ನೀಡಿದ್ದರೆ ಅವರು ಈ ರೀತಿ ಮಾಡುತ್ತಿರಲಿಲ್ಲ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಕಾರ್ಯಕರ್ತರು ಅಭಿವೃದ್ಧಿಗಿಂತ ಲವ್ ಜಿಹಾದ್‌ಗೆ ಒತ್ತು ನೀಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೀಡಿದ್ದ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಸಮಾವೇಶದಲ್ಲಿ ಮಾತನಾಡಿದರು.
