

ಕಾನಸೂರು: ಶ್ರೀ ಕ್ಷೇತ್ರ ಸಿಗಂದೂರು ಯಕ್ಷಗಾನ ಮೇಳ ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಕಾನಸೂರಿನ ಮಾದನ ಕಳ್ ದಲ್ಲಿ ಕೂಡಾಟ ಮತ್ತು ಜೋಡಾಟ ಹಾಗೂ ಸನ್ಮಾನ ಕಾರ್ಯಕ್ರಮ ಜನವರಿ ೬ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಬೈಲಹೊಂಗಲ ಡಿವೈಎಸ್ಪಿ ರವಿ ಡಿ ನಾಯ್ಕ ಉದ್ಘಾಟಿಸಲಿದ್ದಾರೆ. ಕಾನಸೂರು ಗ್ರಾಪಂ ಅಧ್ಯಕ್ಷ ವೀರಭದ್ರ ಜಂಗಣ್ಣನವರ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ರವಿಕುಮಾರ್, ಉದ್ಯಮಿ ಆರ್‌ಜಿ ಶೇಟ್, ಗ್ರಾಪಂ ಸದಸ್ಯ ಶಶಿಕಾಂತ ನಾಮಧಾರಿ, ನಿವೃತ್ತ ಶಿಕ್ಷಕ ಕೆ.ಆರ್. ಹೆಗಡೆ, ಸಿರ್ಸಿ ಜಿಲ್ಲಾ ಹೋರಾಟ ಸಮಿತಿಯ ಅಧ್ಯಕ್ಷ ಉಪೇಂದ್ರ ಪೈ, ಗ್ರಾಪಂ ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ ಹಾಗೂ ನಿಕಟಪೂರ್ವ ಯಕ್ಷಗಾನ ಅಕಾಡೆಮಿ ಸದಸ್ಯೆ ನಿರ್ಮಲ ಹೆಗಡೆ ಗೋಳಿ ಕೊಪ್ಪ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಯಕ್ಷಗಾನ ಕಲಾವಿದ ವಿದ್ಯಾಧರ ಜಳವಳ್ಳಿ, ರಘುಪತಿ ನಾಯ್ಕ್ ಹೆಗ್ಗರಣಿ, ಅತ್ಯುತ್ತಮ ಭಾಣಸಿಗ ರಘುನಂದನ್ ಭಟ್ ಶಿರಳಗಿ, ರೇಖಾ ಹೆಗಡೆ ತುಂಬೆಬೀಡು, ಶಿಕ್ಷಕ ಮನೋಹರ್ ದುಂಡಸಿ, ಗುತ್ತಿಗೆದಾರ ಮುತ್ತುಸ್ವಾಮಿ, ವೈದ್ಯ ಡಾಕ್ಟರ್ ವಿಕ್ರಂ ಶೆಟ್ಟಿ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪಶಸ್ತಿ ಪುರಸ್ಕೃತ ಕುಮಾರಿ ಕೌಶಲ್ಯ ಹೆಗಡೆ ಹಾಗೂ ಕುಶ ರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕ ವೆಂಕಟರಮಣ ಹೆಗಡೆ ತಿಳಿಸಿದ್ದಾರೆ.




ಪಟ್ಟಣದ ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ವಿಷಯ ತಿಳಿಸಿ 2023 ಜನವರಿ ಐದು ಗುರುವಾರ ಮತ್ತು 6 ಶುಕ್ರವಾರ ರಂದು ಕಾರ್ಯಕ್ರಮಗಳು ನಡೆಯಲಿದ್ದು ಮಾಚಿದೇವರ ಜೀವನ ಮೌಲ್ಯಗಳು ಕುರಿತು ಉಪನ್ಯಾಸ, ಸಾಂಸ್ಕೃತಿಕ ಸಂಭ್ರಮ, ಮತ್ತು ಸಾಧಕರ ಸಮಾವೇಶ ನಡೆಯಲಿದೆ. ಅಂದು ಮಾಚಿದೇವ ಸೇವಾ ರತ್ನ ಪ್ರಶಸ್ತಿ ಪ್ರದಾನ, ವಿವಿಧ ದತ್ತಿ ನಿಧಿಗಳ ದಾನಿಗಳಿಗೆ ಪ್ರಶಸ್ತಿ ಪ್ರಧಾನ, ವಿಶ್ವ ಆದರ್ಶ ಕುಟುಂಬ ಪ್ರಶಸ್ತಿ ಪ್ರಧಾನ, ಕಾಯಕಶ್ರೀ ಪ್ರಶಸ್ತಿ ಪ್ರಧಾನ, ಮಲ್ಲಿಗೆಮ್ಮ ಮಾತೋಶ್ರೀ 2023 ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ನಡೆಯಲಿವೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಸುರೇಶ್ ಮಡಿವಾಳ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
