

ಸಿದ್ದಾಪುರ: ಬಿಜೆಪಿಯ ಬೂತ್ ವಿಜಯ ಅಭಿಯಾನದ ಅಂಗವಾಗಿ ತಾಲ್ಲೂಕಿನ ಹಲವು ಬೂತ್`ಗಳಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯಕ್ ಚಾಲನೆ ನೀಡಿದರು.
ಅವರು ಕಾನಗೋಡ ಶಕ್ತಿಕೇಂದ್ರ ವ್ಯಾಪ್ತಿಯ ಕಾನಗೋಡನ ಬೂತ್ ಸಂಖ್ಯೆ 199 ಮತ್ತು 200 ಹಾಗೂ ಬೂತ್ ಸಂಖ್ಯೆ 189 ಐಗೋಡಿನ ಕಾರ್ಯಕ್ರಮವನ್ನು ಕಾನಗೋಡ ಮಾರಿಕಾಂಬಾ ದೇವಾಲಯದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಬಳಿಕ ಪಟ್ಟಣದ ಬೂತ್ ಸಂಖ್ಯೆ 218 ರ ಹೊಸಪೇಟೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ ನಾಯ್ಕ ಅಭಿಯಾನದ ಬಗ್ಗೆ ಬೂತ್ ಮಟ್ಟದ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು, ಜಿಲ್ಲಾ ವಿಶೇಷ ಆಹ್ವಾನಿತ ಗುರುರಾಜ್ ಶಾನಭಾಗ್, ಪಟ್ಟಣ ಪಂಚಾಯತ ಉಪಾಧ್ಯಕ್ಷ ರವಿಕುಮಾರ್ ನಾಯ್ಕ ಜಾತಿಕಟ್ಟ, ಮಹಿಳಾ ಮೋರ್ಚಾ ಅಧ್ಯಕ್ಷೆ ಸುಮನಾ ಕಾಮತ್, ಬೂತ್ ವಿಜಯ ಅಭಿಯಾನದ ಸಂಯೋಜಕರಾದ ಮಂಜುನಾಥ್ ಭಟ್, ಸುರೇಶ್ ನಾಯ್ಕ್ ಬಾಲಿಕೊಪ್ಪ, ಕಾನಗೋಡ ಪಂಚಾಯತ ಅಧ್ಯಕ್ಷೆ ದೇವರಾಜ ನಾಯ್ಕ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ತೋಟಪ್ಪ ನಾಯ್ಕ,
ಕಾನಗೋಡು ಪಂಚಾಯತ್ ಬೂತ್ ಅಧ್ಯಕ್ಷ ವಾಸು ಜಿನ್ನಾ ನಾಯ್ಕ , ಗಣಪತಿ ಕೆರಿಯ ಕುರುಬೀರ್, ಆನಂದ್ ಗಣಪತಿ ಮಡಿವಾಳ, ಸಿದ್ದಾಪುರ ನಗರ ಬೂತ ಅಧ್ಯಕ್ಷ ಸತೀಶ್ ಕಾಮತ್, ಶಕ್ತಿ ಕೇಂದ್ರ ಪ್ರಮುಖ ಮಾರುತಿ ನಾಯ್ಕ ಕಾನಗೋಡ, ಮಂಜುನಾಥ್ ಬಿ ಐಗೋಡ, ಹಾಗೂ ಬೂತ್ ಸದಸ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.

