

ಸಿದ್ದಾಪುರ ಕೋಲ್ ಶಿರ್ಸಿ ಮಾರುತಿ ನಗರ ರಸ್ತೆ ಡಾಂಬರೀಕರಣ ಕಳೆಪೆಯಾಗಿರುವ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಈ ರಸ್ತೆಯು 600 ಮೀಟರ್ ರಸ್ತೆ ಡಾಂಬ ರೀಕರಣ ನಡೆಸಿದ್ದು ಮೂರೇ ದಿನಗಳಲ್ಲಿ ಅಲ್ಲಲ್ಲಿ ರಸ್ತೆ ಕಿತ್ತು ಬರುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
.ಕೋಲ್ ಶಿರ್ಸಿ ಮಾರುತಿ ನಗರ ,ಕಾನಳ್ಳಿ ,ಕಡಕೇರಿ,ತ್ಯಾರ್ಸಿ, ಮೂಲಕ ಕುಮಟಾ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು ಹಲವಾರು ವರ್ಷಗಳಿಂದ ಈ ರಸ್ತೆಯನ್ನು ಸರ್ವಋುತು ರಸ್ತೆಯನ್ನಾಗಿಸಬೇಕೆಂಬ ಬೇಡಿಕೆ ಇತ್ತು ಅದು ಈಗ ಕೂಡಿಬಂದಿದೆ ಆದರೆ ಕಾಮಗಾರಿ ಕಳಪೆಯಿಂದ ಕನಸು ಕನಸಾಗಿ ಉಳಿದಂತಾಗಿದೆ.
ಕಾಮಗಾರಿ ಆಗಿ ಮೂರ್ನಾಲ್ಕು ದಿನದಲ್ಲಿ ಕೇೀಳುತ್ತಿರುವ ರಸ್ತೆಯನ್ನು ಕಂಡು ಸ್ಥಳೀಯರು ಕಾಮಗಾರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಸರಿಯಾದ ಪ್ರಮಾಣದಲ್ಲಿ ಡಾಂಬರ್ ಮಿಕ್ಸ್ ಮಾಡದೆ ಪ್ರಮಾಣದಲ್ಲೂ ದಪ್ಪ ಮಾಡದೇ ಕೇವಲ ಅರ್ಧ ಇಂಚು ಹಾಕಿರುವುದರಿಂದ ರಸ್ತೆ ಕಳಪೆಯಾಗಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಹಪ್ಪಳ ದಂತೆ ಏಳುತ್ತಿದ್ದ ಗುಣಮಟ್ಟದ ಕೆಲಸ ಆಗದ ಕಳಪೆ ಕೆಲಸ ನಡೆದಿರುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಇದರಿಂದ ಬೇಸ ತ್ತಿರುವ ಸ್ಥಳೀಯರು ಮಾಧ್ಯಮದೊಂದಿಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇದು ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಾಣವಾಗಿರುವ ರಸ್ತೆ ಎಂದು ತಿಳಿದು ಬಂದಿದೆ ಸಂಬಂಧಪಟ್ಟ ಇಲಾಖೆಯವರು ಗುತ್ತಿಗೆದಾರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸರ್ವ ಋತು ರಸ್ತೆ ನಿರ್ಮಾಣ ಮಾಡಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.


ಪ್ರಾಚಾರ್ಯ ಪ್ರಶಾಂತ ತಾರಿಬಾಗಿಲ ಮಾತನಾಡಿ ಸ್ವಾಮಿ ವಿವೇಕಾನಂದರ ಜೀವನ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಶಿಸ್ತು ಅಳವಡಿಸಿಕೊಂಡು ಉತ್ತಮ ಫಲಿತಾಂಶಕ್ಕಾಗಿ ಧೃಢ ಸಂಕಲ್ಪ ಮಾಡಬೇಕು. ಯುವಜನರಿಗೆ ಒತ್ತು ಕೊಟ್ಟಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದ್ದರು. ಅವರ ಜೀವನ ಅನುಭವಗಳನ್ನು ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಆರ್ಥಿಕ ಸಾಕ್ಷರತಾ ಕಾರ್ಯಕ್ರಮ: ವಿಜಯ ಆರ್ಥಿಕ ಸಾಕ್ಷರತಾ ಕೇಂದ್ರ ದ ಸಮಾಲೋಚಕ ಕರಾದ ಶಿವಶಂಕರ ಎನ್ ಕೆ ಉಳಿತಾಯ, ವಿಮಾ ಸೌಲಭ್ಯ, ಎಟಿಎಂ ಬಳಕೆ, ಮೋಸದ ಜಾಲಗಳ ಬಗ್ಗೆ ವಹಿಸಬಹುದಾದ ಎಚ್ಚರಿಕೆಗಳ ಬಗ್ಗೆ, ಹಾಗೂ ಶಿಕ್ಷಣ ಸಾಲ ಸೌಲಭ್ಯ ಗಳು, ಸ್ವ ಉದ್ಯೋಗ ತರಭೇತಿ ಗಳ ಬಗ್ಗೆ ಮಾಹಿತಿ ನೀಡಿದರು.
ಉಪನ್ಯಾಸಕ ರಾದ ಮಂಜಪ್ಪ, ಲೋಕೇಶ ನಾಯ್ಕ, ಭಾಗ್ಯಶ್ರೀ ನಾಯ್ಕ, ಅಶ್ವಿನಿ ಉಪಸ್ಥಿತರಿದ್ದರು.
ಉಪನ್ಯಾಸಕ ಗೋಪಾಲ ಕಾನಳ್ಳಿ ನಿರೂಪಿಸಿದರು.
