

ಸಿದ್ದಾಪುರ: ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠ ಕಲಬುರಗಿ ಜಿಲ್ಲೆಯ ಪೀಠಾದೀಶರಾದ ಶ್ರೀ ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಮಂಗಳೂರಿನಿಂದ ಬೆಂಗಳೂರು ವರೆಗೆ ನಡೆಯಲಿರುವ ಪಾದಯಾತ್ರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ದಲ್ಲಿ ಜನವರಿ 18, ಮತ್ತು 19 ನಡೆಯಲಿದೆ ಎಂದು ಸಿದ್ದಾಪುರ ತಾಲೂಕಿನ ಪಾದಯಾತ್ರೆ ಸಮಿತಿಯವರು ತಿಳಿಸಿದ್ದಾರೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಕೋಲಶಿರ್ಸಿ ಐತಿಹಾಸಿಕ ಪಾದಯಾತ್ರೆ ಯಲ್ಲಿ ನಾಮಧಾರಿ, ಬಿಲ್ಲವ, ಈಡಿಗ, ಸಮಾಜದ ಬೇಡಿಕೆ ಗಳಾದ ಈಡಿಗ ಸಮುದಾಯದ ಎಲ್ಲಾ ಉಪಪಂಗಡಗಳನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸಬೇಕು, ಬ್ರಹ್ಮ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಮಾಡಿ 500 ಕೋಟಿ ರೂಪಾಯಿ ಮೀಸಲಿಡಬೇಕು, ಸೇರಿದಂತೆ ಹಲವು ಬೇಡಿಕೆ ಇಡೆರಿಕೆಗೆ ನಡೆಯಲಿರುವ ಪಾದಯಾತ್ರೆ ಜನವರಿ 18 ಸಂಜೆ ತಾಲೂಕಿನ ಮನ್ಮನೆಗೆ ಬರಲಿದ್ದು, ಜನವರಿ 19 ರಂದು ಕಾವಂಚೂರು, ಅಕ್ಕುಂಜಿ, ಸಿದ್ದಾಪುರ ಪಟ್ಟಣ ಪ್ರವೇಶಿಸಿ, ಕೊಂಡ್ಲಿ ಜಾತ್ರೆ ಮೈದಾನದಲ್ಲಿ ಜಾಗೃತಿ ಸಭೆ ನಡೆಯಲಿದೆ. ಈ ಸಭೆಯ ದಿವ್ಯ ಸಾನಿಧ್ಯ ವನ್ನು ಚಿತ್ತಾಪುರ ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ವಹಿಸಲಿ ದ್ದಾರೆ. ಸಿಗಂದೂರು ಧರ್ಮದರ್ಶಿ ರಾಮಪ್ಪ ಉದ್ಘಾಟಿಸಲಿದ್ದಾರೆ. ಪಾದಯಾತ್ರೆ ಸಮಿತಿಯ ಅಧ್ಯಕ್ಷ ಕನ್ನೇಶ್ವರ ನಾಯ್ಕ ಅಧ್ಯಕ್ಷತೆ ವಹಿಸಲಿ ದ್ದಾರೆ. ಗೌರವಾಧ್ಯಕ್ಷ ವೀರಭದ್ರ ನಾಯ್ಕ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಮಾಜದ ಪ್ರಮುಖರಾದ ಭೀಮಣ್ಣ ನಾಯ್ಕ, ಕೆ ಜಿ ನಾಯ್ಕ ಹಣಜಿಬೈಲ್,ಆನಂದ ನಾಯ್ಕ ಹೊಸೂರ, ಹೊನ್ನಗೋಡ ರತ್ನಾಕರ, ಸಿ ಎಫ್ ನಾಯ್ಕ, ರವೀಂದ್ರ ನಾಯ್ಕ, ಡಾ. ವೆಂಕಟೇಶ ನಾಯ್ಕ, ಕೆ ಜಿ ನಾಗರಾಜ, ವಿ ಎನ್ ನಾಯ್ಕ ಬೇಡ್ಕಣಿ, ವಸಂತ ನಾಯ್ಕ ಮನ್ಮನೆ, ಉಲ್ಲಾಸ ನಾಯ್ಕ ಅಂಕೋಲಾ, ನಾಗರಾಜ ನಾಯ್ಕ ಬೇಡ್ಕಣಿ, ಎಂ ಹೆಚ್ ನಾಯ್ಕ, ಈಶ್ವರ ನಾಯ್ಕ ಮನ್ಮನೆ, ಶ್ರೀ ಮತಿ ಚಂದ್ರಕಲಾ ನಾಯ್ಕ ದಿವಾಕರ ನಾಯ್ಕ ಹೆಮ್ಮನಬೈಲ್, ರವಿಕುಮಾರ್ ನಾಯ್ಕ, ಸುಧೀರ ನಾಯ್ಕ ಕೊಂಡ್ಲಿ, ಬಿಜಿ ನಾಯ್ಕ ಹಲಗೇರಿ,ಎನ್ ಜಿ ಕುಮಾರ್, ಪಿ ವಿ ನಾಯ್ಕ ಬೇಡ್ಕಣಿ, ಹಿತೇಂದ್ರ ನಾಯ್ಕ, ಮಾಬ್ಲೇಶ್ವರ ನಾಯ್ಕ ಕರಮನೆ, ಎಸ್ ಎಮ್ ನಾಯ್ಕ, ಕೆ ಆರ್ ವಿನಾಯಕ, ಮೋಹನ ನಾಯ್ಕ ಕೊಂಡ್ಲಿ, ಗೌರವ ಉಪಸ್ಥಿತಿ ಯಲ್ಲಿ ಸಮಾಜದ ಹಲವು ಪ್ರಮುಖ ಗಣ್ಯರು ಉಪಸ್ಥಿತರಿರುವರು.
ಸಮಾರಂಭದಲ್ಲಿ ಪುನಿತ್ ರಾಜಕುಮಾರ ಆಶ್ರಮಧಾಮದ ಮುಖ್ಯಸ್ಥ ನಾಗರಾಜ ನಾಯ್ಕ, ರಾಷ್ಟ್ರ ಪ್ರಶಸ್ತಿ ವಿಜೇತ ಈಶ್ವರ ನಾಯ್ಕ ಹಸವಂತೆ ರಾಜ್ಯ ಪರಿಸರ ಪ್ರಶಸ್ತಿ ವಿಜೇತ ಎಂ. ಬಿ. ನಾಯ್ಕ ಕಡಕೇರಿ, ಕಲಾವಿದೆ ಅರ್ಚನಾ ಸುರೇಶ ನಾಯ್ಕ ತೆಂಗಿನಮನೆ, ಕಲಾವಿದ ನಾಗರಾಜ ನಾಯ್ಕ ಬರೂರ, ರಂಗಭೂಮಿ ಸಂಗೀತ ನಿರ್ದೇಶಕ ಶ್ರೀ ಧರ ಮಾವಿನಗುಂಡಿ, ಸಂಗೀತ ಕಲಾವಿದ ಗಣಪತಿ ನಾಯ್ಕ ಕೊಂಡ್ಲಿ, ಪ್ರಗತಿಪರ ಕೃಷಿಕ ಹನುಮಂತ ಪರಶುರಾಮ ಕುಣಜಿ, ಯಕ್ಷಗಾನ ಕಲಾವಿದ ನಂದನ ನಾಯ್ಕ ಅಕಿಶಿನಗೋಡು ರನ್ನು ಸನ್ಮಾನಿಸಲಾ ಗುವುದು.
ಜನವರಿ 20ರಂದು ಮುಂಜಾನೆ 8 ಗಂಟೆಗೆ ಹೊರಡುವ ಪಾದಯಾತ್ರೆ ಶಿರಳಗಿ ಮೂಲಕ ಸೊರಬ ತಾಲೂಕಿನ ಮೂಲಕ ಮುಂದುವರಿಯಲಿದೆ ಎಂದರು.
ಕೊಂಡ್ಲಿ ಐತಿಹಾಸಿಕ ಜಾತ್ರೆ ಮೈದಾನದಲ್ಲಿ ಸಂಜೆ ನಡೆಯುವ ಜಾಗೃತಿ ಸಮಾವೇಶ ಕ್ಕೆ ಹಾಗೂ ಮನ್ಮನೆ ಯಿಂದ ನಡೆಯುವ ಪಾದಯಾತ್ರೆಯಲ್ಲಿ ಡೊಳ್ಳು ಕುಣಿತ, ಮಹಿಳೆಯರ ಪೂರ್ಣಕುಂಭ ಮೇಳ ಹಾಗೂ ಇತರ ಸಾಂಸ್ಕೃತಿಕ ಕಲಾ ತಂಡಗಳು ಪಾದಯಾತ್ರೆ ಮೆರಗು ಹೆಚ್ಚಿಸಲಿವೆ.
ಸಮಾಜ ಭಾoದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತನು ಮನ: ಧನ ಸಹಕಾರ ನೀಡಬೇಕಾಗಿ ಗೌರವಾಧ್ಯಕ್ಷ ವೀರಭದ್ರ ನಾಯ್ಕ ವಿನಂತಿ ಸಿದ್ದಾರೆ.
ಸುದ್ದಿಗೋಷ್ಠಿ ಯಲ್ಲಿ ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನಾಯಕ ಕೊಂಡ್ಲಿ, ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಾವಂಚೂರ, ಸಂಚಾಲಕ ರವಿ ಕುಮಾರ್ ಕೊಠಾರಿ, ಸಮಿತಿಯ ಗಾಂಧೀಜಿ ಆರ್ ನಾಯ್ಕ, ಅನಿಲ್ ಕೊಠಾರಿ ಉಪಸ್ಥಿತರಿದ್ದರು.

_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
