

ಸಿದ್ದಾಪುರ: ಜನವರಿ 26 ಗಣರಾಜ್ಯೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆ ತಹಸೀಲ್ದಾರ ಕಾರ್ಯಾಲಯದಲ್ಲಿ ನಡೆಯಿತು.
ತಹಸೀಲ್ದಾರ ಸಂತೋಷ ಭಂಡಾರಿ,ಮಾತನಾಡಿ ಕೋವಿಡ್ ಪೂರ್ವದ ವರ್ಷ ಗಳ ಆಚರಣೆಯಂತೆ ಗಣರಾಜ್ಯೋತ್ಸವ ಆಚರಿಸಲಾಗುವುದು. ಪ್ರತಿಯೊಂದು ಇಲಾಖೆಯವರು ನಮ್ಮ ಮನೆ ಹಬ್ಬದಂತೆ ಆಚರಣೆಯಲ್ಲಿ ಪಾಲ್ಗೊಂಡು ತಮಗೆ ವಹಿಸಿದ ಜವಾಬ್ದಾರಿ ಗಳನ್ನು ನಿರ್ವಹಿಸಬೇಕು. ತಮ್ಮ ತಮ್ಮ ಕಚೇರಿಗಳಲ್ಲಿ ಬೆಳಿಗ್ಗೆ 8ರಿಂದ 8-33 ರ ಒಳಗೆ ಮುಗಿಸಿ ನೆಹರು ಮೈದಾನದಲ್ಲಿ 9 ಗಂಟೆಗೆ ನಡೆವ ಧ್ವಜಾರೋಹಣ ದಲ್ಲಿ ಪಾಲ್ಗೊಳ್ಳಲು ಸೂಚಿಸಿದರು.
ಪೋಲಿಸ್,ಹೋಮಗಾರ್ಡ್, ಹಾಗೂ
ಶಾಲಾ ಮಕ್ಕಳಿಂದ ಪಥ ಸಂಚಲನ, ಆರು ಶಾಲೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಪಥ ಸಂಕಲನದಲ್ಲಿ ಪಾಲ್ಗೊಂಡ ಪ್ರಥಮ, ದ್ವಿತೀಯ, ಹಾಗೂ ತ್ರತೀಯ ತಂಡಗಳಿಗೆ ನಿವೃತ್ತ ನೌಕರ ಸಂಘದವರು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮೂರು ಸ್ಥಾನ ಪಡೆದ ತಂಡಗಳಿಗೆ ಸಂಕಲ್ಪ ಸೇವಾ ಟ್ರಸ್ಟ್ ವತಿಯಿಂದ ಬಹುಮಾನ ನೀಡಲಾಗುತ್ತದೆ. ಸುವ್ಯವಸ್ಥಿತ ವಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಲು ಆರಕ್ಷಕ ಇಲಾಖೆಯವರು ಸೂಕ್ತ ಬಂದೋಬಸ್ತ್ ಏರ್ಪಡಿಸುವಂತೆ ತಿಳಿಸಿದರು.
ಉಪ ತಹಸೀಲ್ದಾರ ಎನ್ ಐ ಗೌಡ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಸದಸ್ಯ ನಂದನ ಬೋರಕರ, ಮುಖ್ಯಾಧಿಕಾರಿ ಕುಮಾರ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ ಎಸ್ ಗೌಡರ, ಕಸಪಾ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ, ಸಂಕಲ್ಪ ಸೇವಾ ಸಂಸ್ಥೆ ಯ ಪಿ ಬಿ ಹೊಸೂರ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


