

ಕನ್ನಡಿಗರ ಕುಲದೇವತೆ ಶ್ರೀ ಭುವನೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕೆಂದು ಆಗ್ರಹಿಸಿ ಕದಂಬ ಸೈನ್ಯದವರು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ನೀಡಿದರು ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್ ಮಾತನಾಡಿ ಕನ್ನಡ ಕುಲದೇವಿಯ ಭುವನೇಶ್ವರಿ ಕದಂಬರ ಕಾಲದಲ್ಲಿ ಶಂಕುಸ್ಥಾಪನೆಯಾಗಿ ಪ್ರಾರಂಭವಾಗಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣ ಕಾರ್ಯ ಮುಂದುವರಿಸಿದ್ದರು. ನಂತರ 1692 ರಲ್ಲಿ ಬಿಳಗಿ ಸಾಮಾಜ್ಯದ ಅರಸರು ಪೂರ್ಣಗೊಳಿಸಿದರು. ಕದಂಬರು, ವಿಜಯನಗರ ಸಾಮ್ರಾಜ್ಯ ಬೆಳಗಿ ಸಾಮ್ರಾಜ್ಯದ ಆರಸರುಗಳು ಆರಾಧಿಸುತ್ತಿದ್ದರು. ನಾಡ ದೇವತೆಯಾಗಿ ಮೈಸೂರು ರಾಜಮನೆತನದವರು ಆರಾಧಿಸುತ್ತಿದ್ದರು. ಇಷ್ಟೊಂದು ಹಿನ್ನಲೆ ಇರುವ ದೇವಾಲಯ ಅಭಿವೃದ್ಧಿಯಾಗದೆ ಇರುವುದು ಜನಪ್ರತಿನಿದಿನಗಳ ನಿರ್ಲಕ್ಷ ಕ್ಕೆ ಕಾರಣ ವಾಗಿದೆ ಕೂಡಲೇ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವಂತೆ ಒತ್ತಾಯ ಮಾಡುತ್ತಿದ್ದೇವೆ ಎಂದರು.
ಇದಕ್ಕೂ ಮೊದಲು ಶಂಕರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು
ಕನ್ನಡಿಗರ ಕುಲದೇವತೆ ಶ್ರೀ.ಭುವನೇಶ್ವರಿಯನ್ನು ಕನ್ನಡ ನಾಡಿನ ಅರಸರು ಇಷ್ಟಾರ್ಥ ಸಿದ್ಧಿಗಾಗಿ ಆರಾಧಿಸುತ್ತಿದ್ದರು. ತತ್ಪಲವಾಗಿ ಆಕೆಯು ಕನ್ನಡ ಭುವನೇಶ್ವರಿಯಾಗಿ ಕನ್ನಡಿಗರ ದೇವಿಯಾಗಿ ಹರಸುತ್ತಿರುವಳೆಂದು ಪ್ರತೀತಿ ಇದೆ. ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ನಗರದಿಂದ ಕುಮಟಾ ಮಾರ್ಗವಾಗಿ 8 ಕಿ.ಮೀ.ದೂರದಲ್ಲಿರುವ ಭುವನಗಿರಿಯಲ್ಲಿ 365 ದಿನಗಳಲ್ಲೂ ವಿಶೇಷ ಪೂಜೆ, ಪುನಸ್ಕಾರಗಳು ಜಾತ್ರೆ, ಉತ್ಸವ, ರಥೋತ್ಸವವನ್ನು ವಿಜೃಂಭಣೆಯಿಂದ ಆಡಳಿತ ಮಂಡಳಿ ನಡೆಸಿಕೊಂಡು ಬರುತ್ತಿದೆ. ಕೆಳಮಟ್ಟದಿಂದ 300 ಮೀಟರ್‌ಗಳಷ್ಟು ಎತ್ತರ ಪ್ರದೇಶ, ಸುಮಾರು 125 ಹಳೆಯ ಮೆಟ್ಟಿಲುಗಳಿವೆ. ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.
ಕನ್ನಡ ಭಾಷೆಯ ಉಳಿವು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಮ್ಮ ನಾಡಿನ ಸಂಸ್ಕೃತಿ ಪರಂಪರೆ, ಕಲೆ ವಾಸ್ತುಶಿಲ್ಪ, ಮರಾತನ ದೇವಾಲಯಗಳನ್ನು ಉಳಿಸಿ ಸಂರಕ್ಷಣೆ ಮಾಡುವುದು ಅತಿ ಮುಖ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆ ಹಸಿರು ಸಮೃದ್ಧಿಯ ನಡುವೆ ಶೋಭಿಸುವ ಈ ಭುವನಗಿರಿ ತಾಣ ತನ್ನ ಪ್ರಶಾಂತತೆಯಿಂದಲೂ ರಮಣೀಯ ಪ್ರಾಕೃತಿಕ ಸೊಬಗಿನಿಂದಲೂ ಮನ ಸೆಳಯುತ್ತಿದೆ. ಕನ್ನಡ ಕುಲದೇತೆಯನ್ನು ಸಮಸ್ತ ಕನ್ನಡಿಗರು ಆರಾಧಿಸುತ್ತಿದ್ದಾರೆ. ಅತ್ಯಂತ ನೋವಿನ ವಿಚಾರ ಮೂಲಭೂತ ಸೌಲಭ್ಯಗಳ ಕೊರತೆ, ತಂಗುವ ವ್ಯವಸ್ಥೆಯ ಕೊರತೆ, ಭುವನಗಿರಿ ತಾಣದ ಸುತ್ತಲೂ ರಮ್ಯ ತಾಣವಾಗಿದೆ. ಪ್ರವಾಸಿಗಳನ್ನು ಕೈ ಬೀಸಿ ಕರೆಯುತ್ತಿದೆ. ಶ್ರೀ ಭುವನೇಶ್ವರಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಬೇಕು. ಶ್ರೀ ಕಾಗಿನೆಲೆಯನ್ನು ಅಭಿವೃದ್ಧಿಪಡಿಸಿದಂತೆ ಅಭಿವೃದ್ಧಿಪಡಿಸಲು ಒತ್ತಾಯಿಸಿದೆ ಎಂದು ಅಗ್ರಹಿಸಿದರು
ಶ್ರೀ.ಭುವನೇಶ್ವರಿ ತಾಯಿಯು 10 ಮಹಾ ವಿದ್ಯಾದೇವತೆಗಳಲ್ಲಿ ಒಬ್ಬಳು. ಹಾಗೂ ತಾಯಿ ದುರ್ಗೆಯ ಒಂದು ಅಂಶ. “ಭುವನೇಶ್ವರಿ” ಅಂದರೆ ಈ ವಿಶ್ವದ ತಾಯಿ, ಶ್ರೀ.ಭುವನೇಶ್ವರಿ ದೇವಿಯ ಪಾದ ತಳದಲ್ಲಿ ಉದ್ಭವ ಲಿಂಗವು ಇದೆ. ಹತ್ತಿರದಲ್ಲೇ ಹನುಮಂತ ದೇವಾಲಯವಿದೆ. ಬಿಳಗಿಯಲ್ಲಿ
ಪುರಾತನ ಜೈನಬಸದಿ ಬಾವಿಗಳಿವೆ. ಪ್ರಸಿದ್ಧ ಶಿರಸಿ ಮಾರಿಕಾಂಭ, ಬನವಾಸಿ ಶ್ರೀ ಉಮಾ ಮಧುಕೇಶ್ವರ ದೇವಾಲಯಗಳಿವೆ. ಪ್ರಸಿದ್ಧ ಜೋಗ್ ಜಲಪಾತ ಹತ್ತಿರದಲ್ಲಿದೆ. ಇನ್ನು ಅನೇಕ ರಮ್ಯ ತಾಣಗಳಿವೆ.
ಕನ್ನಡದ ಪ್ರಥನು ರಾಜಧಾನಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರಕ್ಕೆ ನಿರ್ಲಕ್ಷ್ಯ
2017 ರಲ್ಲಿ ಬನವಾಸಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ 5 ಕೋಟಿ ಹಣ ಬಿಡುಗಡೆ ಮಾಡಿ ಕಳೆದ ವರ್ಷಗಳಿಂದಲೂ ಅಭಿವೃದ್ಧಿ ಪ್ರಾಧಿಕಾರಕ್ಕೆ ಹಣ ಬಿಡುಗಡೆ ಮಾಡಲೇ ಇಲ್ಲ ಬನವಾಸಿಯಲ್ಲಿ ರಾಜ್ಯದ ಪ್ರತಿಷ್ಠಿತ ಕದಂಬೋತ್ಸವ ಮತ್ತು ಪಂಪ ಪ್ರಶಸ್ತಿ ಪ್ರಧಾನ ಮಾಡಲಾಗುತ್ತಿದೆ. ಬನವಾಸಿಗೆ ರಾಜ್ಯ, ರಾಷ್ಟ್ರ, ಮತ್ತು ಅಂತರರಾಷ್ಟ್ರೀಯ ಪ್ರವಾಸಿಗರು ಬರುತ್ತಾರ, ಮೂಲಭೂತ ಸೌಲಭ್ಯಗಳಿಲ್ಲದೆ ಶಾಪ ಹಾಕುತ್ತಿದ್ದಾರೆ. ಪ್ರಸಿದ್ಧ ಶ್ರೀ ಉಮಾ ಮಹೇಶ್ವರ ದೇವಾಲಯವಿದೆ ಸುತ್ತಲು ರಮಣೀಯ ಪ್ರಕೃತಿ ಸಂಪತ್ತು ಇದೆ ಬನವಾಸಿ ಒಂದು ಕಾಲದಲ್ಲಿ ಭಾರತ ದೇಶದಲ್ಲೇ ಪ್ರಸಿದ್ಧಿಯಾಗಿತ್ತು. ಆನೇಕ ಸಾಮ್ರಾಟರು ಆಳಿ ಹೋಗಿದ್ದಾರೆ. ಬನವಾಸಿ ಅಭಿವೃದ್ಧಿ ಪ್ರಧಿಕಾರಕ್ಕೆ 300 ಕೋಟಿ ರೂ.ಗಳನ್ನು ಫೆಬ್ರವರಿ ಬಜೆಟ್‌ನಲ್ಲಿ ನೀಡಬೇಕೆಂದು ಆಗ್ರಹಿಸಿ ಮನವಿ ಮಾಡಲಾಯಿತು.
ಕನ್ನಡ ಚಕ್ರವರ್ತಿ ದಕ್ಷಿಣ ಪಥೇಶ್ವರ ಇಮ್ಮಡಿ ಪುಲಕೇಶಿ ಪುತ್ತಳಿಯನ್ನು ಬೆಂಗಳೂರು ವಿಧಾನಸೌಧದ ಮುಂದೆ ಚಾಲುಕ್ಯ ರಾಜಧಾನಿ ಬಾದಾಮಿಯಲ್ಲಿ ಸ್ಥಾಪಿಸಲು ಒತ್ತಾಯ ಮಾಡುತ್ತೇವೆ
ಜಗಜ್ಯೋತಿ ಬಸವಣ್ಣನವರು, ನಾಡಪ್ರಭು ಕೆಂಪೇಗೌಡರ ಪುತ್ತಳಿ ಸ್ಥಾಪಿಸಲು ವಿಧಾನಸೌಧದ ಮುಂದೆ ಶಂಕುಸ್ಥಾಪನೆಮಾಡಿರುವುದನ್ನು ಕದಂಬ ಸೈನ್ಯ ಸ್ವಾಗತಿಸಿದೆ, ಆದರೆ ದಕ್ಷಿಣಪಥೇಶ್ವರ ಇಮ್ಮಡಿ ಮಲಕೇಶಿ ಪ್ರತಿಮೆ ಸ್ಥಾಪಿಸಲು ಸರ್ಕಾರ ನಿರಾಸಕ್ತಿ ವಹಿಸುತ್ತಿದೆ ಏಕೆ ಕನ್ನಡ ಇಚ್ಛಾಸಕ್ತಿ ಇರುವ ಮುಖ್ಯಮಂತ್ರಿಗಳೇ? ಚಾಲುಕ್ಯ ರಾಜಧಾನಿ ಬಾದಾಮಿಯಲ್ಲಿ ಸರ್ಕಾರದ ಹೃದಯ ಯೋಜನೆಯಡಿಯಲ್ಲಿ ಇಮ್ಮಡಿ ಪುಲಕೇಶಿ, ಪುತ್ತಳಿ ಅನಾವರಣಗೊಳ್ಳಲು ಸಿದ್ಧವಾಗಿದ್ದರೂ ಸ್ಥಳಾವಕಾಶ ಕೊಡದೇ ಅನಾಥವಾಗಿ ಮಳೆಯಿಂದ ನೆನೆಯುತ್ತಿದೆ. ಬಿಸಿಲಿಗೆ ಒಣಗುತ್ತಿದೆ. ಜೊತೆಗೆ ಜಗಜ್ಯೋತಿ ಬಸವಣ್ಣನವರ ಮತ್ಥಳಿ ಕೂಡ ಸರ್ಕಾರದ ನಿರ್ಲಕ್ಷ್ಯಕ್ಕೆ ಸಮಸ್ತ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು ಸುದ್ದಿಗೋಷ್ಠಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಶಿವಪ್ಪ, ಶಿರ್ಸಿ ತಾಲೂಕ ಸಂಚಾಲಕ ಗುತ್ಯಪ್ಪ ಮಾದರ, ಮಂಡ್ಯ ಜಿಲ್ಲಾ ಉಪಾಧ್ಯಕ್ಷ ರಾಮು, ಶಂಕರ ಮಠದ ಧರ್ಮಾಧಿಕಾರಿ ವಿಜಯ್ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.

