

ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ,ರಾಜ್ಯ ವಿಧಾನಸಭಾ ಅಧಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕ್ಷೇತ್ರದಲ್ಲಿ ತಾರತಮ್ಯ ಮಾಡಿದ್ದಾರೆ ಎಂದು ರಾಜ್ಯ ಜೆ.ಡಿ.ಎಸ್. ಯುವಮುಖಂಡ ಇಲಿಯಾಸ್ ಇಬ್ರಾಹಿಂ ಸಾಬ್ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ಈ ಆರೋಪ ಮಾಡಿರುವ ಇಲಿಯಾಸ್ ರಸ್ತೆ ಅಗಲೀಕರಣಕ್ಕಾಗಿ ಶಿರಸಿ-ಸಿದ್ಧಾಪುರಗಳಲ್ಲಿ ಮನೆ,ಅಂಗಡಿ ಮುಂಗಟ್ಟುಗಳನ್ನು ಒಡೆಯಲಾಗಿದೆ. ಆದರೆ ಶಿರಸಿಯಲ್ಲಿ ಬಾಧಿತರಿಗೆ ಪರಿಹಾರ ನೀಡಿ ಸಿದ್ಧಾಪುರದಲ್ಲಿ ಪರಿಹಾರ ನೀಡಿಲ್ಲ. ಒಂದೇ ಕ್ಷೇತ್ರದ ಎರಡು ತಾಲೂಕುಗಳಲ್ಲಿ ಒಬ್ಬರಿಗೊಂದು ಇನ್ನೊಬ್ಬರಿಗೊಂದು ನ್ಯಾಯ ಮಾಡಿರುವ ಕ್ರಮ ತಮಗೆ ಶೋಭೆ ತರುವುದಿಲ್ಲ ಎಂದು ಟೀಕಿಸಿದ್ದಾರೆ.
